ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಕೊಲೆ: ಬಿಹಾರದ ಮಾಜಿ ಸಚಿವನಿಗೆ ಜೀವಾವಧಿ
ಗ್ರಾಮ ಮುಖ್ಯಸ್ಥನ ಕೊಲೆಯ ಹಿನ್ನೆಲೆಯಲ್ಲಿ ಬಿಹಾರದ ಮಾಜಿ ಸಚಿವರೊಬ್ಬರಿಗೆ ತ್ವರಿತ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

ಮಾಜಿ ಸಚಿವ ಆದಿತ್ಯ ಸಿಂಗ್ ಆಪರಾಧಿಯೆಂದು ಸಾಬೀತಾದ ಹಿನ್ನೆಲೆಯಲ್ಲಿ ಈ ಶಿಕ್ಷೆ ಘೋಷಿಸಲಾಗಿದೆ.

ಆದಿತ್ಯ ಸಿಂಗ್ 2006 ರಲ್ಲಿ ಮೂವರು ಸಹವರ್ತಿಗಳ ಜೊತೆ ಸೇರಿ ನವಾಡ ಜಿಲ್ಲೆಯ ಗ್ರಾಮದ ಮುಖ್ಯಸ್ಥನೊಬ್ಬನನ್ನು ಕೊಲೆ ಮಾಡಿರುವ ಆರೋಪ ಎದರಿಸುತ್ತಿದ್ದರು. ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ನ್ಯಾಯಾಲಯವು ಆದಿತ್ಯ ಅಪರಾಧಿ ಎಂದು ಘೋಷಿಸಿ ಶಿಕ್ಷೆ ನೀಡಿದೆ.

ಹಿಸುವಾ ಕ್ಷೇತ್ರದ ಶಾಸಕನಾಗಿದ್ದ ಆದಿತ್ಯಸಿಂಗ್ ತನ್ನ ತೋಳ್ಬಲದ ತಂತ್ರದಿಂದಾಗಿ 'ಬಾಹುಬಲಿ' ಎಂಬ ಅಡ್ಡ ಹೆಸರನ್ನು ಪಡೆದಿದ್ದಲ್ಲದೆ, ಈತನ ವಿರುದ್ಧ ಹಲವಾರು ಅಪರಾಧ ಪ್ರಕರಣಗಳು ದಾಖಲಾಗಿದ್ದವು.
ಮತ್ತಷ್ಟು
ಅಸಮರ್ಥ ಪ್ರಧಾನಿಯ ಹತಾಶೆ: ಬಿಜೆಪಿ ಪ್ರತಿ ವಾಗ್ದಾಳಿ
ಚುನಾವಣೋತ್ತರ ಸಮೀಕ್ಷೆ: ಬಿಜೆಪಿಗೆ ನಷ್ಟ, ಕಾಂಗ್ರೆಸ್ ಲಾಭ
ಗುಜರಾತ್ ಮತದಾನ ಶಾಂತಿಯುತ
8 ತರಗತಿ ವಿದ್ಯಾರ್ಥಿ ಸಹಪಾಠಿಯಿಂದ ಹತ್ಯೆ
ರಾಷ್ಟ್ರ ಹಿತಾಸಕ್ತಿ ದೃಷ್ಟಿಯಿಂದ ಅಣುಬಂಧಕ್ಕೆ ವಿರೋಧ
ಉ.ಭಾರತದಲ್ಲಿ ಹೆಪ್ಪುಗಟ್ಟಿದ ಚಳಿ