ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವಾಜಪೇಯಿ ಜತೆ ಆಡ್ವಾಣಿ ಉಭಯ ಕುಶಲೋಪರಿ
ಬಿಜೆಪಿಯ ಭಾವಿ ಪ್ರಧಾನಿ ಉಮೇದುವಾರ ಎಲ್.ಕೆ.ಅಡ್ವಾಣಿ ಅವರು ಬುಧವಾರ, ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿಯವರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.

ಪ್ರಧಾನ ಮಂತ್ರಿ ಅಭ್ಯರ್ಥಿಯೆಂದು ಘೋಷಣೆಯಾದಾಗ ಪ್ರತಿಕ್ರಿಯಿಸಿದ್ದ ಅಡ್ವಾಣಿ, ತಾನು ವಿಶೇಷವಾಗಿ ವಾಜಪೇಯಿಯವರಿಗೆ ಋಣಿಯಾಗಿರುವುದಾಗಿ ಹೇಳಿದ್ದು, "ಅವರ ನಾಯಕತ್ವದ ಗರಡಿಯಲ್ಲಿ ತಾನು ಪಳಗಿದವ" ಎಂದು ಹೇಳಿದ್ದರಲ್ಲದೆ, ಅವರ ಆಶೀರ್ವಾದ ಪಡೆಯುವುದಾಗಿ ತಿಳಿಸಿದ್ದರು.

ಆಡ್ವಾಣಿಯನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಬಿಜೆಪಿ ಆಯ್ಕೆ ಮಾಡಿರುವುದನ್ನು ಪ್ರಧಾನಿ ಮನಮೋಹನ್ ಸಿಂಗ್ ಸೇರಿ ಹಲವರು ಟೀಕಿಸಿದ್ದಾರೆ.

ಗುಜರಾತ್ ಚುನಾವಣೆಯ ಒಂದು ದಿನದ ಮೊದಲು ಅಡ್ವಾಣಿಯನ್ನು ನಾಯಕನನ್ನಾಗಿ ಆಯ್ಕೆ ಮಾಡಿರುವುದಕ್ಕೆ ಚುನಾವಣೆಯಲ್ಲಿ ಸೋಲುವ ಆತಂಕವೇ ಕಾರಣ. ಮಾತ್ರವಲ್ಲದೆ, ಬಿಜೆಪಿಗೆ ಮೋದಿಯ ಭಯವೂ ಕಾಡುತ್ತಿದೆ ಎಂದು ಪ್ರಧಾನಿ ಟೀಕಿಸಿದ್ದರು.

ಈ ನಡುವೆ, ಎನ್‌ಡಿಎ ಬೆಂಬಲಿತ ಪಕ್ಷವಾದ ಜೆಡಿಯು ಅಧ್ಯಕ್ಷ ಶರದ್ ಯಾದವ್, ಆಡ್ವಾಣಿ ಅವರನ್ನು ಪ್ರಧಾನ ಮಂತ್ರಿ ಅಭ್ಯರ್ಥಿಯಾಗಿ ಆಯ್ಕೆ ಮಾಡಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ಕೊಲೆ: ಬಿಹಾರದ ಮಾಜಿ ಸಚಿವನಿಗೆ ಜೀವಾವಧಿ
ಅಸಮರ್ಥ ಪ್ರಧಾನಿಯ ಹತಾಶೆ: ಬಿಜೆಪಿ ಪ್ರತಿ ವಾಗ್ದಾಳಿ
ಚುನಾವಣೋತ್ತರ ಸಮೀಕ್ಷೆ: ಬಿಜೆಪಿಗೆ ನಷ್ಟ, ಕಾಂಗ್ರೆಸ್ ಲಾಭ
ಗುಜರಾತ್ ಮತದಾನ ಶಾಂತಿಯುತ
8 ತರಗತಿ ವಿದ್ಯಾರ್ಥಿ ಸಹಪಾಠಿಯಿಂದ ಹತ್ಯೆ
ರಾಷ್ಟ್ರ ಹಿತಾಸಕ್ತಿ ದೃಷ್ಟಿಯಿಂದ ಅಣುಬಂಧಕ್ಕೆ ವಿರೋಧ