ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಡ್ವಾಣಿ ಜಾತಕದಲ್ಲಿ ಪ್ರಧಾನಿ ಯೋಗ ಇಲ್ಲ: ಲಾಲು
ಪ್ರಧಾನಿಯಾಗುವ ಯೋಗ ಆಡ್ವಾಣಿಯವರ ಜಾತಕದಲ್ಲಿ ಬರೆದಿಲ್ಲ ಎಂದು ಕೇಂದ್ರ ರೈಲ್ವೇ ಸಚಿವ ಲಾಲು ಪ್ರಸಾದ್ ಯಾದವ್ ಅವರು ಕುಹಕವಾಡಿದ್ದಾರೆ.

ಪ್ರಧಾನಿ ಪದವಿಯ ಅಭ್ಯರ್ಥಿಯಾಗಿ ಬಿಜೆಪಿಯು ಆಡ್ವಾಣಿಯವರನ್ನು ಆಯ್ಕೆ ಮಾಡಿ ಘೋಷಿಸಿದ ಹಿನ್ನೆಲೆಯಲ್ಲಿ ಪ್ರತಿಕ್ರಿಯಿಸಿದ ಅವರು, ಪ್ರಧಾನಿ ಹುದ್ದೆಯೇರುವ ಯೋಗ ಅವರ ಜನ್ಮ ಕುಂಡಲಿಯಲ್ಲೆಲ್ಲೂ ಕಾಣಿಸುತ್ತಿಲ್ಲ ಎಂದು ವ್ಯಂಗ್ಯವಾಡಿದರು.

ಈ ನಡುವೆ, ಅಲ್ಲೇ ಹಾಜರಿದ್ದ ಎಲ್‌‌ಜೆಪಿ ನಾಯಕ ಹಾಗೂ ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಮಾತನಾಡಿ, ಇದು ಬಿಜೆಪಿಯ ಆಂತರಿಕ ವಿಷಯ. ಈ ವಿಷಯದಲ್ಲಿ ನಾನು ಪ್ರತಿಕ್ರಿಯೆ ವ್ಯಕ್ತಪಡಿಸಲು ಇಚ್ಛಿಸುವುದಿಲ್ಲ ಎಂದು ಹೇಳಿದರು.

ಆದರೆ ಬಿಜೆಪಿ ಮುಂದಿನ ಪ್ರಧಾನಿ ಅಭ್ಯರ್ಥಿ ಎಲ್.ಕೆ. ಆಡ್ವಾಣಿ ಎಂಬ ಹೇಳಿಕೆ ಹೊರಬಿದ್ದ ಬಳಿಕ ನಿತೀಶ್ ಕುಮಾರ್, ಶರದ್ ಯಾದವ್ ಸೇರಿದಂತೆ ಅನೇಕರು ಇದನ್ನು ಸ್ವಾಗತಿಸಿದ್ದಾರೆ.
ಮತ್ತಷ್ಟು
ವಾಜಪೇಯಿ ಜತೆ ಆಡ್ವಾಣಿ ಉಭಯ ಕುಶಲೋಪರಿ
ಕೊಲೆ: ಬಿಹಾರದ ಮಾಜಿ ಸಚಿವನಿಗೆ ಜೀವಾವಧಿ
ಅಸಮರ್ಥ ಪ್ರಧಾನಿಯ ಹತಾಶೆ: ಬಿಜೆಪಿ ಪ್ರತಿ ವಾಗ್ದಾಳಿ
ಚುನಾವಣೋತ್ತರ ಸಮೀಕ್ಷೆ: ಬಿಜೆಪಿಗೆ ನಷ್ಟ, ಕಾಂಗ್ರೆಸ್ ಲಾಭ
ಗುಜರಾತ್ ಮತದಾನ ಶಾಂತಿಯುತ
8 ತರಗತಿ ವಿದ್ಯಾರ್ಥಿ ಸಹಪಾಠಿಯಿಂದ ಹತ್ಯೆ