ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮುಂಬೈನಲ್ಲಿ ಬಾಲಕನೊಬ್ಬನ ಆತ್ಮಹತ್ಯೆ
ಮುಂಬೈನಲ್ಲಿ ಎಳೆಯ ಪ್ರಾಯದ ಬಾಲಕರ ಆತ್ಮಹತ್ಯೆಯ ಇನ್ನೊಂದು ಪ್ರಕರಣ ನಡೆದಿದ್ದು, ವೈದ್ಯನಾಗಬೇಕೆಂಬ ಅಭಿಲಾಶೆ ಹೊಂದಿದ್ದ ಕಾವಲುಗಾರನ ಪುತ್ರನೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಬುಧವಾರ ಮುಂಬೈನಲ್ಲಿ ಸಂಭವಿಸಿದೆ. ಅವನು ಆತ್ಮಹತ್ಯೆಗೆ ಶರಣಾಗಲು ಮುಖ್ಯಕಾರಣವೇನೆಂದರೆ ಕಾಲೇಜಿನಲ್ಲಿ ಇಂಗ್ಲೀಷ್ ಉಪನ್ಯಾಸವನ್ನು ಅವನು ಸರಿಯಾಗಿ ಅರ್ಥಮಾಡಿಕೊಳ್ಳದಿರುವುದು.

18 ವರ್ಷ ಪ್ರಾಯದ ಅಭಯ್ ಸಿಂಗ್ ವೈದ್ಯಕೀಯ ವಿದ್ಯಾರ್ಥಿಯಾಗಿದ್ದು, ಮುಂಬೈನ ದಿಂಡೋಶಿಯಲ್ಲಿರುವ ತನ್ನ ಸ್ವಗೃಹದಲ್ಲಿ ಆತ್ಮಹತ್ಯೆ ಮಾಡಿಕೊಂಡ. ಉತ್ತರಪ್ರದೇಶದ ಜಾನ್‌ಪುರದಿಂದ ಅವನು ನಗರಕ್ಕೆ ಹೆಚ್ಚಿನ ಓದಿಗಾಗಿ ಆಗಮಿಸಿದ್ದ. ಜೋಗೇಶ್ವರಿಯ ಇಸ್ಮಾಲ್ ಯೂಸುಫ್ ಕಾಲೇಜಿಗೆ ಮೊದಲ ವರ್ಷದ ವಿಜ್ಞಾನ ವಿದ್ಯಾರ್ಥಿಯಾಗಿ ಸೇರಿದ.ಓದಿನ ಜತೆಗೆ ತನ್ನ ತಂದೆಯ ಜತೆ ಕಾವಲುಗಾರ ವೃತ್ತಿಯಲ್ಲೂ ಅವನು ಕೈಗೂಡಿಸಿದ್ದ.

ವೈದ್ಯನಾಗಬೇಕೆಂಬ ಅಭಿಲಾಷೆ ಹೊಂದಿದ್ದ ತಮ್ಮ ಪುತ್ರ ಇಂಗ್ಲೀಷ್ ಅರ್ಥವಾಗದೇ ಕ್ರಮೇಣ ಹತಾಶಸ್ಥಿತಿಗೆ ಇಳಿದನೆಂದು ಅವನ ತಂದೆ ಹೇಳುತ್ತಾರೆ. ಓದನ್ನು ತ್ಯಜಿಸಿ ಹುಟ್ಟೂರಿಗೆ ಮರಳುವುದಾಗಿ ಕೂಡ ಅವನು ಆಗಾಗ್ಗೆ ಹೇಳುತ್ತಿದ್ದ. ಆದರೆ ತಾವು ಅವನಿಗೆ ಸಮಾಧಾನ ಮಾಡಿ ನಪಾಸಾದರೆ ಮುಂದಿನ ವರ್ಷ ಪರೀಕ್ಷೆ ಕಟ್ಟುವಂತೆ ಧೈರ್ಯ ಹೇಳಿದ್ದೆ ಎಂದು ಅವನ ತಂದೆ ತಿಳಿಸಿದ್ದಾರೆ.
ಮತ್ತಷ್ಟು
ನಕ್ಸಲೀಯರ ದಾಳಿ: ಮೂವರು ಪೊಲೀಸರ ಹತ್ಯೆ
ರಾಜಧಾನಿ ರೈಲಿನಲ್ಲಿ ಸ್ಫೋಟ: 5 ಬಲಿ
ಆಡ್ವಾಣಿ ಜಾತಕದಲ್ಲಿ ಪ್ರಧಾನಿ ಯೋಗ ಇಲ್ಲ: ಲಾಲು
ವಾಜಪೇಯಿ ಜತೆ ಆಡ್ವಾಣಿ ಉಭಯ ಕುಶಲೋಪರಿ
ಕೊಲೆ: ಬಿಹಾರದ ಮಾಜಿ ಸಚಿವನಿಗೆ ಜೀವಾವಧಿ
ಅಸಮರ್ಥ ಪ್ರಧಾನಿಯ ಹತಾಶೆ: ಬಿಜೆಪಿ ಪ್ರತಿ ವಾಗ್ದಾಳಿ