ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ.ಬಂಗಾಳ ಪೊಲೀಸರ ವಿರುದ್ಧ ಕ್ರಮಕ್ಕೆ ತಡೆ
PTI
ನಂದಿಗ್ರಾಮದಲ್ಲಿ 14 ಜನರನ್ನು ಬಲಿತೆಗೆದುಕೊಂಡ ಪೊಲೀಸ್ ಗೋಲೀಬಾರ್ ಘಟನೆಗೆ ಸಂಬಂಧಪಟ್ಟಂತೆ ಪಶ್ಚಿಮಬಂಗಾಳದ ಪೊಲೀಸರ ವಿರುದ್ಧ ಕ್ರಿಮಿನಲ್ ಆರೋಪಗಳನ್ನು ಹೊರಿಸುವ ಸಿಬಿಐ ಪ್ರಕ್ರಿಯೆಗೆ ಸುಪ್ರೀಂಕೋರ್ಟ್ ಗುರುವಾರ ತಡೆಯಾಜ್ಞೆ ವಿಧಿಸಿದೆ. ಆದರೆ ಪೊಲೀಸರು ಗೋಲೀಬಾರ್ ಮಾಡಿದ ಕ್ರಮವು ಅಸಂವಿಧಾನಿಕ ಎಂಬ ಕೊಲ್ಕತ್ತ ಹೈಕೋರ್ಟ್ ಪ್ರತಿಕ್ರಿಯೆಯನ್ನು ಅಳಿಸಿಹಾಕಲು ಸುಪ್ರೀಂಕೋರ್ಟ್ ನಿರಾಕರಿಸುವ ಮೂಲಕ ಪಶ್ಚಿಮಬಂಗಾಳ ಸರ್ಕಾರ ಮುಜುಗರದ ಸ್ಥಿತಿಯನ್ನು ಎದುರಿಸುವಂತಾಗಿದೆ.

ಹೈಕೋರ್ಟ್ ನೀಡಿದ ತೀರ್ಪನ್ನು ಟೀಕಿಸುವ ರಾಜ್ಯಸರ್ಕಾರಗಳ ಕ್ರಮವನ್ನು ಖಂಡಿಸಿದ ಮುಖ್ಯನ್ಯಾಯಮೂರ್ತಿ ಕೆ.ಜಿ. ಬಾಲಕೃಷ್ಣನ್ "ನೀವು ಇದನ್ನು ದೊಡ್ಡ ವಿಷಯವಾಗಿ ಏಕೆ ಮಾಡುತ್ತಿದ್ದೀರಿ? ನಿಮ್ಮ ಕೆಲಸವೇನೆಂದರೆ ನಂದಿಗ್ರಾಮದಲ್ಲಿ ಸಹಜಸ್ಥಿತಿ ನೆಲೆಸುವಂತೆ ಮಾಡುವುದು" ಎಂದು ಹೇಳುವ ಮೂಲಕ ಪಶ್ಚಿಮ ಬಂಗಾಳ ಸರ್ಕಾರದ ಬಾಯಿಮುಚ್ಚಿಸಿದ್ದಾರೆ.

ಇದಲ್ಲದೇ ಸಂತ್ರಸ್ತರಿಗೆ ಪರಿಹಾರ ನೀಡಲು ಸಮಿತಿಯೊಂದನ್ನು ನೇಮಿಸಲು ಅವಕಾಶ ನೀಡಬೇಕೆಂಬ ಸರ್ಕಾರದ ಕೋರಿಕೆಯನ್ನು ಪೀಠವು ತಳ್ಳಿಹಾಕಿತು. ಪೊಲೀಸರ ಗೋಲೀಬಾರ್ ಘಟನೆಗೆ ಸಂಬಂಧಪಟ್ಟಂತೆ ಹೈಕೋರ್ಟ್ ನಿರ್ದೇಶನದ ಮೇರೆಗೆ ಸಿಬಿಐ ತನಿಖೆ ಮುಂದುವರಿಯುತ್ತದೆ ಎಂದು ಪೀಠವು ಸ್ಪಷ್ಟಪಡಿಸಿತು.

ಪ್ರಜಾಪ್ರಭುತ್ವ ಹಕ್ಕು ರಕ್ಷಣೆಯ ಎನ್‌ಜಿಒ ಸಂಘಟನೆ ಮತ್ತಿತರ ಪ್ರತಿವಾದಿಗಳಿಗೆ ಕೂಡ ಪೀಠವು ನೋಟೀಸ್ ಜಾರಿ ಮಾಡಿದೆ. ನಂದಿಗ್ರಾಮದಲ್ಲಿ ಅಸಮರ್ಥನೀಯ ಗೋಲಿಬಾರ್ ವಿರುದ್ಧ ನ.16ರಂದು ಕೊಲ್ಕತ್ತಾ ಹೈಕೋರ್ಟ್ ನೀಡಿದ ತೀರ್ಪನ್ನು ಪ್ರಶ್ನಿಸಿ ಪಶ್ಚಿಮಬಂಗಾಳ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲು ಏರಿತ್ತು.
ಮತ್ತಷ್ಟು
ಮುಂಬೈನಲ್ಲಿ ಬಾಲಕನೊಬ್ಬನ ಆತ್ಮಹತ್ಯೆ
ನಕ್ಸಲೀಯರ ದಾಳಿ: ಮೂವರು ಪೊಲೀಸರ ಹತ್ಯೆ
ರಾಜಧಾನಿ ರೈಲಿನಲ್ಲಿ ಸ್ಫೋಟ: 5 ಬಲಿ
ಆಡ್ವಾಣಿ ಜಾತಕದಲ್ಲಿ ಪ್ರಧಾನಿ ಯೋಗ ಇಲ್ಲ: ಲಾಲು
ವಾಜಪೇಯಿ ಜತೆ ಆಡ್ವಾಣಿ ಉಭಯ ಕುಶಲೋಪರಿ
ಕೊಲೆ: ಬಿಹಾರದ ಮಾಜಿ ಸಚಿವನಿಗೆ ಜೀವಾವಧಿ