ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಾಷ್ಟ್ರಕ್ಕೆ ಜಟಿಲವಾದ ಭದ್ರತಾ ಸವಾಲು:ಕಪೂರ್
ರಾಷ್ಟ್ರ ಎದುರಿಸುತ್ತಿರುವ ಜಟಿಲ, ವೈವಿಧ್ಯದ ಭದ್ರತಾ ಸವಾಲುಗಳನ್ನು ಪೂರೈಸುವ ಆಧುನೀಕರಣ ಪ್ರಕ್ರಿಯೆಗೆ ನೆರವು ನೀಡುವ ಸಲುವಾಗಿ ರಕ್ಷಣಾ ಉತ್ಪಾದನೆಯಲ್ಲಿ ಖಾಸಗಿ ಕ್ಷೇತ್ರಗಳ ಪಾಲ್ಗೊಳ್ಳುವಿಕೆ ಹೆಚ್ಚಿಸಬೇಕೆಂದು ಸೇನೆ ಗುರುವಾರ ಕೋರಿದೆ.

ತಮ್ಮ ಪಡೆಯು ರಾಷ್ಟ್ರದ ಬಂಡುಕೋರ ಚಟುವಟಿಕೆಗಳನ್ನು ಹತ್ತಿಕ್ಕಲು ಬದ್ಧವಾಗಿದೆ. ಆದರೆ ಅದೇ ಗಳಿಗೆಯಲ್ಲಿ ಅಣ್ವಸ್ತ್ರ ಹಿನ್ನೆಲೆಯ ಲಕ್ಷಣವಿರುವ ಅಲ್ಪಾವಧಿಯ ಮತ್ತು ತೀವ್ರ ಕದನಗಳನ್ನು ಎದುರಿಸಲು ರಾಷ್ಟ್ರವನ್ನು ಸಜ್ಜುಗೊಳಿಸಬೇಕಾಗಿದೆ ಎಂದು ಸೇನಾ ಪಡೆಯ ಮುಖ್ಯಸ್ಥ ಜನರಲ್ ದೀಪಕ್ ಕಪೂರ್ ಹೇಳಿದರು.

ಭಾರತದ ಸೇನೆಯು ರಾಷ್ಟ್ರದ ಶಾಂತಿ ಮತ್ತು ಸ್ಥಿರತೆ ಕಾಯ್ದುಕೊಳ್ಳಲು ಪ್ರಮುಖ ಪಾತ್ರ ವಹಿಸುತ್ತಿದೆ ಎಂದು ಸಮಾವೇಶ ಉದ್ದೇಶಿಸಿ ಅವರು ನುಡಿದರು. ಜಮ್ಮುಕಾಶ್ಮೀರ ಮತ್ತು ಈಶಾನ್ಯ ರಾಜ್ಯಗಳಲ್ಲಿ ಬಂಡುಕೋರ ನಿಗ್ರಹ ಕಾರ್ಯಾಚರಣೆಯಲ್ಲಿ ಸತತ ಬದ್ಧತೆಯ ಪ್ರಸಕ್ತ ಪರಿಸ್ಥಿತಿ ಕೂಡ ವಾಸ್ತವತೆಯಿಂದ ಕೂಡಿದೆ.

ಆದ್ದರಿಂದ ಅಣ್ವಸ್ತ್ರ ಪ್ರಯೋಗದ ಭೀತಿಯ ಸಾಂಪ್ರದಾಯಿಕ ಯುದ್ಧ ಮತ್ತು ಬಂಡುಕೋರ ನಿಗ್ರಹ ಪರಿಸ್ಥಿತಿಯ ಅವಳಿ ಬೆದರಿಕೆಗಳನ್ನು ಎದುರಿಸಲು ಸಮತೋಲನ ಸಾಧಿಸಬೇಕಾದ ಅಗತ್ಯವಿದೆ ಎಂದು ಅವರು ನುಡಿದರು.

ಸಿಐಐ ಮತ್ತು ರಕ್ಷಣಾ ಸಚಿವಾಲಯ ಜಂಟಿಯಾಗಿ ಆಯೋಜಿಸಿದ ಈ ಸಮಾವೇಶದಲ್ಲಿ ಖಾಸಗಿ ಉದ್ದಿಮೆಗಳ ಉನ್ನತಾಧಿಕಾರಿಗಳು ಮತ್ತು ಸೇನೆಯ ಉನ್ನತಾಧಿಕಾರಿಗಳು ಪಾಲ್ಗೊಂಡಿದ್ದರು.
ಮತ್ತಷ್ಟು
ಪ.ಬಂಗಾಳ ಪೊಲೀಸರ ವಿರುದ್ಧ ಕ್ರಮಕ್ಕೆ ತಡೆ
ಮುಂಬೈನಲ್ಲಿ ಬಾಲಕನೊಬ್ಬನ ಆತ್ಮಹತ್ಯೆ
ನಕ್ಸಲೀಯರ ದಾಳಿ: ಮೂವರು ಪೊಲೀಸರ ಹತ್ಯೆ
ರಾಜಧಾನಿ ರೈಲಿನಲ್ಲಿ ಸ್ಫೋಟ: 5 ಬಲಿ
ಆಡ್ವಾಣಿ ಜಾತಕದಲ್ಲಿ ಪ್ರಧಾನಿ ಯೋಗ ಇಲ್ಲ: ಲಾಲು
ವಾಜಪೇಯಿ ಜತೆ ಆಡ್ವಾಣಿ ಉಭಯ ಕುಶಲೋಪರಿ