ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಿಜೆಪಿಯನ್ನು ಲೇವಡಿ ಮಾಡಿದ ಸೋನಿಯಾ
PTI
ಭಯೋತ್ಪಾದಕರ ಬಗ್ಗೆ ಕಾಂಗ್ರೆಸ್ ಪಕ್ಷ ಮೃದುಧೋರಣೆ ತಾಳಿದೆಯೆಂದು ಮೋದಿ ಸರ್ಕಾರದ ಮಾಡಿರುವ ಆರೋಪದ ವಿರುದ್ಧ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಗುರುವಾರ ತೀವ್ರ ವಾಗ್ದಾಳಿ ಮಾಡಿದರು. ವಡೋದರಾದಲ್ಲಿ ಚುನಾವಣೆ ಸಭೆಯಲ್ಲಿ ಮಾತನಾಡುತ್ತಿದ್ದ ಸೋನಿಯಾ "ಭಯೋತ್ಪಾದನೆಯ ಹೆಸರಲ್ಲಿ ಅವರು ನಮ್ಮ ಮೇಲೆ ಆರೋಪ ಹೊರಿಸುತ್ತಿದ್ದಾರೆ.

ಆ ಪಕ್ಷದ ವಿದೇಶಾಂಗ ಸಚಿವರು ಭಯೋತ್ಪಾದಕರ ರಕ್ಷಣೆಗೆ ಖಾತರಿ ನೀಡಿ ಅವರನ್ನು ಸ್ನೇಹಿತರಂತೆ ಆಫ್ಘಾನಿಸ್ತಾನದ ಮಡಿಲಿಗೆ ಒಪ್ಪಿಸಿರುವಾಗ ಆ ಪಕ್ಷದವರು ಭಯೋತ್ಪಾದನೆ ವಿರುದ್ಧ ಹೇಗೆ ಹೋರಾಡುತ್ತಾರೆಂದು" ಸೋನಿಯಾ ಪ್ರಶ್ನಿಸಿದರು. ಆಡಳಿತಾರೂಢ ಬಿಜೆಪಿ ವಿರುದ್ಧ ಗಡುಸಾದ ಧ್ವನಿಯಲ್ಲಿ ಮಾತನಾಡಿದ ಸೋನಿಯಾ ಮೋದಿ ಸರ್ಕಾರ, ರಾಜ್ಯದಲ್ಲಿ ಹಿಂದು ಮೂಲಭೂತವಾದಿಗಳಿಂದ ಕಿರುಕುಳ ಮತ್ತು ದಮನಕ್ಕೆ ಒಳಗಾದ ಅಲ್ಪಸಂಖ್ಯಾತ ಸಮುದಾಯದ ರಕ್ಷಣೆಗೆ ವಿಫಲವಾಗಿದೆ ಎಂದು ಟೀಕಿಸಿದರು.

ಮೋದಿಯ ಅಧಿಕಾರಾವಧಿ ಅತ್ಯಾಚಾರ, ಹತ್ಯೆ, ಗಲಭೆ ಮತ್ತು ನಕಲಿ ಎನ್‌ಕೌಂಟರ್‌ಗಳಿಗೆ ಸಂಕೇತವಾಗಿದೆ. ಭಯ, ಭೀತಿಯ ವಾತಾವರಣೆ ಸೃಷ್ಟಿಸಿ ಮುಸ್ಲಿಮರ ಜೀವನ ನರಕಸದೃಶವಾಗಿದೆ ಎಂದು ಸೋನಿಯಾ ಟೀಕಿಸಿದರು.

ಕಾಂಗ್ರೆಸ್ ವಿರುದ್ಧ ಮೋದಿ ಟೀಕೆ

ಏತನ್ಮಧ್ಯೆ, ನರೇಂದ್ರ ಮೋದಿ ಇನ್ನೊಂದು ರಾಲಿಯಲ್ಲಿ ಕಾಂಗ್ರೆಸ್ ಪಕ್ಷದ ವ್ಯಕ್ತಿ ಪೂಜೆ ಸಂಸ್ಕೃತಿಯನ್ನು ಕುರಿತು ಟೀಕಿಸಿದರು. ಸೊಹ್ರಾಬುದ್ದೀನ್ ಅವರ ಪಾಲಿಗೆ ಹೀರೋ ಎನಿಸಿದ್ದರೆ ಕಾಂಗ್ರೆಸ್ ಗೆದ್ದರೆ ಅವನ ಸಮಾಧಿಗೆ ಗೌರವ ಸಲ್ಲಿಸುವ ಆಶ್ವಾಸನೆಯನ್ನು ಅವರು ಏಕೆ ನೀಡಬಾರದೆಂದು ಪ್ರಶ್ನಿಸಿದರು. ಸುಪ್ರೀಂಕೋರ್ಟ್ ಗಲ್ಲುಶಿಕ್ಷೆ ವಿಧಿಸಿದ್ದರೂ ತೀರ್ಪು ಅನುಷ್ಠಾನವಾಗದ ಮೊಹಮ್ಮದ್ ಅಫ್ಜಲ್ ವಿಷಯವನ್ನು ಕೂಡ ಮೋದಿ ಕೆದಕಿದರು.

ಏತನ್ಮಧ್ಯೆ, ಮಾಜಿ ಪ್ರಧಾನಿ ವಾಜಪೇಯಿ ಕೂಡ ಮೋದಿ ಬೆಂಬಲವಾಗಿ ಧುಮುಕುವ ಮೂಲಕ ರಾಷ್ಟ್ರದ ಎರಡು ಪ್ರಮುಖ ಪಕ್ಷಗಳ ನಡುವೆ ಕಿತ್ತಾಟಕ್ಕೆ ಹೊಸ ತಿರುವನ್ನು ನೀಡಿದ್ದಾರೆ.ರಾಷ್ಟ್ರದ ಅತ್ಯಂತ ಅಭಿವೃದ್ಧಿ ಹೊಂದಿದ ರಾಜ್ಯವಾಗಿ ಗುಜರಾತನ್ನು ಪರಿವರ್ತಿಸಿದ್ದಾರೆಂದು ವಾಜಪೇಯಿ ಶ್ಲಾಘಿಸಿದ್ದಾರೆ. ಆರ್ಥಿಕ ಸಮೃದ್ಧಿ ಮತ್ತು ಶಾಂತಿ ಕಾಪಾಡಲು ಮೋದಿಯನ್ನು ಅಧಿಕಾರಕ್ಕೆ ತರುವಂತೆ ಅವರು ಆಗ್ರಹಿಸಿದರು.
ಮತ್ತಷ್ಟು
ರಾಷ್ಟ್ರಕ್ಕೆ ಜಟಿಲವಾದ ಭದ್ರತಾ ಸವಾಲು:ಕಪೂರ್
ಪ.ಬಂಗಾಳ ಪೊಲೀಸರ ವಿರುದ್ಧ ಕ್ರಮಕ್ಕೆ ತಡೆ
ಮುಂಬೈನಲ್ಲಿ ಬಾಲಕನೊಬ್ಬನ ಆತ್ಮಹತ್ಯೆ
ನಕ್ಸಲೀಯರ ದಾಳಿ: ಮೂವರು ಪೊಲೀಸರ ಹತ್ಯೆ
ರಾಜಧಾನಿ ರೈಲಿನಲ್ಲಿ ಸ್ಫೋಟ: 5 ಬಲಿ
ಆಡ್ವಾಣಿ ಜಾತಕದಲ್ಲಿ ಪ್ರಧಾನಿ ಯೋಗ ಇಲ್ಲ: ಲಾಲು