ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಆಕಾಶ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ
ಮಧ್ಯಮ ವ್ಯಾಪ್ತಿಯ ನೆಲದಿಂದ ಆಕಾಶಕ್ಕೆ ಚಿಮ್ಮುವ ಆಕಾಶ್ ಕ್ಷಿಪಣಿಯನ್ನು ಚಂಡೀಪುರದ ಸಮುದ್ರದಲ್ಲಿ ಇಂಟೆಗ್ರೇಟೆಡ್ ಪರೀಕ್ಷಾ ನೆಲೆಯಿಂದ ಯಶಸ್ವಿಯಾಗಿ ಗುರುವಾರ ಪ್ರಯೋಗಿಸಲಾಯಿತು.

ಐಟಿಆರ್ ಮೂಲಗಳ ಪ್ರಕಾರ, ಈ ಪ್ರಯೋಗವು ರಾಷ್ಟ್ರದ ಸಮಗ್ರ ನಿರ್ದೇಶಿತ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮದಲ್ಲಿ ಪ್ರಮುಖ ಮೈಲಿಗಲ್ಲೆಂದು ಪರಿಗಣಿಸಲಾಗಿದ್ದು, ಬೆಳಿಗ್ಗೆ 11.55ಕ್ಕೆ ಪ್ರಯೋಗಿಸಲಾಗಿದೆ.

ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಮತ್ತು ಸಮಗ್ರ ಪರೀಕ್ಷೆ ನೆಲೆಯ ಅಧಿಕಾರಿಗಳು 25 ಕಿಮೀ ವ್ಯಾಪ್ತಿಯ ಆಕಾಶ್ ಕ್ಷಿಪಣಿಯ ಉಡಾವಣೆಯನ್ನು ವೀಕ್ಷಿಸಿದರು. ಈ ಕ್ಷಿಪಣಿಯು ಸುಧಾರಿತ ಬೂಸ್ಟರ್ ಮತ್ತು ರಾಮ್‌ಜೆಟ್ ಪ್ರೊಪಲ್ಶನ್ ಹೊಂದಿದ್ದು, ದೇಶೀಯವಾಗಿ ನಿರ್ಮಿತವಾದ ಬಹುಮುಖದ ಗುರಿಯಿಡುವ ಸಾಮರ್ಥ್ಯ ಪಡೆದಿದೆ.
ಮತ್ತಷ್ಟು
ಬಿಜೆಪಿಯನ್ನು ಲೇವಡಿ ಮಾಡಿದ ಸೋನಿಯಾ
ರಾಷ್ಟ್ರಕ್ಕೆ ಜಟಿಲವಾದ ಭದ್ರತಾ ಸವಾಲು:ಕಪೂರ್
ಪ.ಬಂಗಾಳ ಪೊಲೀಸರ ವಿರುದ್ಧ ಕ್ರಮಕ್ಕೆ ತಡೆ
ಮುಂಬೈನಲ್ಲಿ ಬಾಲಕನೊಬ್ಬನ ಆತ್ಮಹತ್ಯೆ
ನಕ್ಸಲೀಯರ ದಾಳಿ: ಮೂವರು ಪೊಲೀಸರ ಹತ್ಯೆ
ರಾಜಧಾನಿ ರೈಲಿನಲ್ಲಿ ಸ್ಫೋಟ: 5 ಬಲಿ