ಪಂಜಾಬಿನ ಮೋಗಾ ಜಿಲ್ಲೆಯ ಚುರ್ಚಾಕ್ ಎಂಬಲ್ಲಿನ ರೈಲ್ವೇ ಕ್ರಾಸಿಂಗ್‌ನಲ್ಲಿ ಪ್ರಯಾಣಿಕರ ಬಸ್ಸು ಹಾಗೂ ರೈಲು ಡಿಕ್ಕಿಯಾದ ಪರಿಣಾಮವಾಗಿ ಎಂಟು ಮಂದಿ ಮಕ್ಕಳು ಸೇರಿದಂತೆ ಕನಿಷ್ಠ 18 ಮಂದಿ ಮೃತಪಟ್ಟ ಘಟನೆ ಶುಕ್ರವಾರ ಬೆಳಗ್ಗೆ ಸಂಭವಿಸಿದೆ.
ಬಸ್ ಚಾಲಕನು ರೈಲ್ವೇ ಕ್ರಾಸಿಂಗ್ ದಾಟಲು ಅವಸರ ತೋರಿದ್ದೇ ಘಟನೆಗೆ ಕಾರಣ ಎಂದು ಆರಂಭಿಕ ಮಾಹಿತಿಗಳು ತಿಳಿಸಿವೆ. ಲೂಧಿಯಾನಾದಿಂದ ಫಿರೋಜ್‌ಪುರಕ್ಕೆ ತೆರಳುತ್ತಿದ್ದ ರೈಲು ಈ ಬಸ್ಸಿಗೆ ಡಿಕ್ಕಿ ಹೊಡೆದಿತ್ತು.
ಈ ಮಿನಿ ಬಸ್ಸಿನಲ್ಲಿ ಸುಮಾರು 30 ಮಂದಿಯಿದ್ದರು. ಸ್ಥಳೀಯ ಪೊಲೀಸರ ಪ್ರಕಾರ, ಹಲವು ಮಂದಿ ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದು, ಅವರನ್ನು ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿದೆ. ಇವರಲ್ಲಿ ಕೆಲವರ ಸ್ಥಿತಿ ಚಿಂತಾಜನಕವಾಗಿದೆ.
ಹಿರಿಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ.
|