ಕೇಂದ್ರದಲ್ಲಿ ಅಸ್ಥಿರತೆಗೆ ಮತ್ತು ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರದ ಭವಿಷ್ಯ ಕುರಿತು ಕವಿದಿರುವ ಅನಿಶ್ಚಿತತೆಗೆ ಬಿ.ಜೆ.ಪಿ. ನಾಯಕ ಎಲ್.ಕೆ. ಆಡ್ವಾಣಿ ಅವರು ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರನ್ನು ಹೊಣೆಯಾಗಿಸಿ, ಸರ್ಕಾರ ಪೂರ್ಣಾವಧಿ ಮುಗಿಸುವುದು ಕೂಡ ಕಷ್ಟ ಎಂದು ಶುಕ್ರವಾರ ಹೇಳಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಪರಿಸ್ಥಿತಿ ನಾಟಕೀಯವಾಗಿ ಬದಲಾಗಿದೆ.
ಲೋಕಸಭೆ ಚುನಾವಣೆಯು 2008ರಲ್ಲಿ ನಡೆಯಲಿದ್ದು, ಈ ಅಸ್ಥಿರತೆಗೆ ಪ್ರಧಾನಮಂತ್ರಿ ಜವಾಬ್ದಾರಿ ಎಂದು ಘಾಟ್ಲೋಡಿಯದಲ್ಲಿ ಚುನಾವಣೆ ರಾಲಿಯನ್ನು ಉದ್ದೇಶಿಸಿ ಅವರು ನುಡಿದರು. ಮನಮೋಹನ ಸಿಂಗ್ ಸುದ್ದಿಪತ್ರಿಕೆಯೊಂದಕ್ಕೆ ಸಂದರ್ಶನ ನೀಡುತ್ತಾ, ಅಮೆರಿಕದ ಜತೆ ಪರಮಾಣು ಒಪ್ಪಂದದ ಪ್ರಕ್ರಿಯೆಯನ್ನು ಸರ್ಕಾರ ಮುಂದುವರಿಸುತ್ತದೆ ಎಂದು ಹೇಳಿರುವುದು ಕಾಂಗ್ರೆಸ್ ಮತ್ತು ಸಿಪಿಎಂ ನಡುವೆ ಸಮಸ್ಯೆಗೆ ಮೂಲ ಕಾರಣವಾಗಿದೆ ಎಂದು ಹೇಳಿದರು.
ಸಿಂಗ್ ಅವರ ಹೇಳಿಕೆಯು ಕಮ್ಯುನಿಸ್ಟ್ ಪಕ್ಷಗಳನ್ನು ಕೆರಳಿಸಿದೆ ಎಂದೂ ಅವರು ನುಡಿದರು. ಹರ್ಯಾಣದಲ್ಲಿ ನಡೆದ ರಾಲಿಯಲ್ಲಿ ಸೋನಿಯಾ ಗಾಂಧಿ ಮಾಡಿದ ಭಾಷಣದಲ್ಲಿ, ಕಮ್ಯುನಿಸ್ಟರ ನಿಲುವು ರಾಷ್ಟ್ರದಲ್ಲಿ ಅಭಿವೃದ್ಧಿ ಪ್ರಕ್ರಿಯೆಗೆ ಹಿನ್ನಡೆ ಉಂಟಾಗುತ್ತದೆ ಎಂದು ಹೇಳಿಕೆ ನೀಡಿರುವುದರಿಂದ ಕೂಡ ಕಳೆದ ಆಗಸ್ಟ್‌ನಿಂದ ಕೇಂದ್ರದಲ್ಲಿ ಅಸ್ಥಿರತೆ ಮತ್ತು ಅನಿಶ್ಚಿತತೆಯ ವಾತಾವರಣ ಸೃಷ್ಟಿಯಾಗಿದೆ.
|