ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಉಗ್ರರ ಗುಂಡಿಗೆ ಬಿಜೆಪಿ ಮಾಜಿ ನಾಯಕ ಬಲಿ
ಜಮ್ಮು ಕಾಶ್ಮೀರ ರಾಜ್ಯದಲ್ಲಿ ಗುರುವಾರ ರಾತ್ರಿಯಿಂದೀಚೆಗೆ ಸಂಭವಿಸಿದ ಎರಡು ಪ್ರತ್ಯೇಕ ಹಿಂಸಾಚಾರದ ಘಟನೆಗಳಲ್ಲಿ ಅಸ್ಸಾಂ ಬಿಜೆಪಿಯ ಮಾಜಿ ನಾಯಕ ಉಗ್ರಗಾಮಿಗಳ ಗುಂಡಿಗೆ ಬಲಿಯಾಗಿದ್ದಾರೆ ಮತ್ತು ಅಸ್ಸಾಂ ಗಣಪರಿಷತ್ ಮಾಜಿ ಶಾಸಕರೊಬ್ಬರು ಗ್ರೆನೇಡ್ ದಾಳಿಯಿಂದ ಪಾರಾಗಿದ್ದಾರೆ. ಉಗ್ರಗಾಮಿಗಳು ಬಿಜೆಪಿಯ ಮಾಜಿ ನಾಯಕ ಮುನೀಂದ್ರ ಸಿಂಗ್ ಲಾಖಾರ್ ಅವರನ್ನು ಗುರುವಾರ ಅವರ ನಿವಾಸದಲ್ಲಿಯೇ ಹತ್ಯೆ ಮಾಡಿದ್ದಾರೆ.

ಲಾಖಾರ್ ತಮ್ಮ ವ್ಯವಹಾರ ಸಂಗಡಿಗನ ಜತೆ ಮಾತುಕತೆ ನಡೆಸುತ್ತಿದ್ದಾಗ, ಉಗ್ರಗಾಮಿಗಳು ಅವರ ನಿವಾಸದೊಳಗೆ ಪ್ರವೇಶಿಸಿ ಲಖಾರ್‌ನಿಗೆ ಗುಂಡಿಟ್ಟು ಕೊಂದರೆಂದು ಹೇಳಲಾಗಿದೆ. ಲಖಾರ್ ಪಕ್ಷವನ್ನು ತ್ಯಜಿಸುವುದಕ್ಕೆ ಮುಂಚೆ ಬಿಜೆಪಿಯ ಹಿರಿಯ ಸದಸ್ಯ ಮತ್ತು ಆರ್‌ಎಸ್‌ಎಸ್ ಕಾರ್ಯಕರ್ತರಾಗಿದ್ದರು.

ಇನ್ನೊಂದು ಘಟನೆಯಲ್ಲಿ ಎಜಿಪಿ ಶಾಸಕ ಪದ್ಮ ಹಜಾರಿಕಾ ಅವರಿದ್ದ ವಾಹನದ ಮೇಲೆ ಬೋಡೊ ಉಗ್ರಗಾಮಿಗಳು ಮುತ್ತಿಗೆ ಹಾಕಿದಾಗ ಅವರಿಗೆ ತೀವ್ರ ಗಾಯಗಳಾಗಿವೆ. ಹಜಾರಿಕಾ ಪಂಚಾಯತ್ ಚುನಾವಣೆ ಸಿದ್ಧತೆಯಲ್ಲಿ ಭಾಗವಹಿಸಿದ ಬಳಿಕ ಒಂಟಿಯಾಗಿ ಹಿಂತಿರುಗುವಾಗ ಶಾಸಕರ ಖಾಸಗಿ ವಾಹನದ ಮೇಲೆ ಉಗ್ರರು ಗ್ರೆನೇಡ್‌ಗಳನ್ನು ಎಸೆದರು ಮತ್ತು ಗುಂಡು ಹಾರಿಸಿದರು.

ಆದಾಗ್ಯೂ, ಹಜಾರಿಕಾ ತಮ್ಮ ವಾಹನವನ್ನು ಬಿಟ್ಟು ಸಮೀಪದ ಗದ್ದೆಯ ಮೂಲಕ ಪಾರಾಗುವಲ್ಲಿ ಯಶಸ್ವಿಯಾದರು. ಅವರನ್ನು ಸಮೀಪದಲ್ಲಿದ್ದ ಜನರು ತೇಜ್‌ಪುರ ಆಸ್ಪತ್ರೆಗೆ ಸೇರಿಸಿದರು.ಈ ಘಟನೆಯು ರಾಜ್ಯಾದ್ಯಂತ ಪ್ರತಿಭಟನೆ ಸ್ಫೋಟಿಸುವಂತೆ ಮಾಡಿದ್ದು, ಜನರು ರಾಷ್ಟ್ರೀಯ ಹೆದ್ದಾರಿಗೆ ತಡೆ ವಿಧಿಸಿದ್ದರು. ರಾಜ್ಯಪಾಲರು ತಕ್ಷಣವೇ ಮಧ್ಯಪ್ರವೇಶಿಸಬೇಕೆಂದು ಎಜಿಪಿ ಆಗ್ರಹಿಸುತ್ತಿದೆ. ಕಾಂಗ್ರೆಸ್ ಸರ್ಕಾರ ಕಾನೂನು ಪರಿಸ್ಥಿತಿ ಕಾಯ್ದುಕೊಳ್ಳಲು ವಿಫಲವಾಗಿದೆ ಎಂದೂ ಅದು ಆರೋಪಿಸಿದೆ.
ಮತ್ತಷ್ಟು
ಅಸ್ಥಿರತೆಗೆ ಪ್ರಧಾನಿ ಹೊಣೆ:ಆಡ್ವಾಣಿ
ಹುಚ್ಚು ನಾಯಿಗೇ ಕಚ್ಚಿದ ವೃದ್ಧ ಆಸ್ಪತ್ರೆಗೆ!
ಬಸ್ಸಿಗೆ ರೈಲು ಡಿಕ್ಕಿ: ಕನಿಷ್ಠ 25 ಬಲಿ
ಸಮರ್ಪಕ ನಗರ ಯೋಜನೆಗೆ ರಾಷ್ಟ್ರಪತಿ ಸಲಹೆ
ಆಕಾಶ್ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ
ಬಿಜೆಪಿಯನ್ನು ಲೇವಡಿ ಮಾಡಿದ ಸೋನಿಯಾ