ದೆಹಲಿಯಲ್ಲಿ ವಿಮಾನಸಂಚಾರಕ್ಕೆ ಕವಿದಿರುವ ಮಂಜು ಅಡ್ಡಿಮಾಡಿದ್ದರೆ, ಮುಂಬೈನ ವಿಮಾನ ಪ್ರಯಾಣಿಕರು ಭಿನ್ನವಾದ ರೀತಿಯಲ್ಲಿ ಅಡ್ಡಿಯನ್ನು ಎದುರಿಸಿದ್ದಾರೆ. ಮುಂಬೈನಿಂದ ಅಹ್ಮದಾಬಾದ್‌ಗೆ ಗೋ ಏರ್ ವಿಮಾನ ಹಾರಾಟಕ್ಕೆ ಮತ್ತೆ ಮತ್ತೆ ವಿಳಂಬ ಉಂಟಾದಾಗ, ರಾಜ್‌ಕೋಟ್‌ನಿಂದ ಆಗಮಿಸುವ ಇನ್ನೊಂದು ವಿಮಾನದಲ್ಲಿ ಸ್ಥಳಾವಕಾಶ ಕಲ್ಪಿಸುವುದಾಗಿ ಪ್ರಯಾಣಿಕರಿಗೆ ಭರವಸೆ ನೀಡಲಾಯಿತು.
ಕೆಲವು ಪ್ರಯಾಣಿಕರಿಗೆ ರಾಜಕೋಟ್ ಫ್ಲೈಟ್‌ನಲ್ಲಿ ಸ್ಥಳಾವಕಾಶ ಮಾಡಿಕೊಟ್ಟರೂ ಸುಮಾರು 24 ಪ್ರಯಾಣಿಕರು ಮುಂಬೈ ವಿಮಾನನಿಲ್ದಾಣದಲ್ಲೇ ಉಳಿದರು.ಈ ಬಗ್ಗೆ ಏರ್‌ಲೈನ್ ಸಿಬ್ಬಂದಿ ಪ್ರಕಟಣೆ ನೀಡಿದ್ದರೂ ಯಾರೂ ಪ್ರತಿಕ್ರಿಯಿಸಲಿಲ್ಲ ಎಂದು ಗೊ ಏರ್ ಅಧಿಕಾರಿಗಳು ಹೇಳುತ್ತಿದ್ದಾರೆ. ಆದರೆ ಪ್ರಯಾಣಿಕರು ಇದನ್ನು ನಿರಾಕರಿಸುತ್ತಿದ್ದು, ತಾವು ಪ್ರತಿಭಟನೆ ನಡೆಸಿದಾಗ ವಿಮಾನನಿಲ್ದಾಣದಿಂದ ಹೊರದೂಡಲಾಯಿತೆಂದು ಆಪಾದಿಸಿದ್ದಾರೆ.
ನಮ್ಮ ಬಳಿ ಬೋರ್ಡಿಂಗ್ ಪಾಸ್‌ಗಳು ಇದ್ದರೂ ಕೂಡ ನಮ್ಮನ್ನು ಹಿಂದೆಯೇ ಬಿಟ್ಟರು. ನಾವು ವಿಮಾನಕ್ಕೆ 3000 ರೂ.ಟೆಕೆಟ್ ದರ ಪಾವತಿ ಮಾಡಿದ್ದರೂ ಸೆಕ್ಯೂರಿಟಿ ಮತ್ತು ಏರ್‌ಲೈನ್ ಸಿಬ್ಬಂದಿ ನಮ್ಮನ್ನು ಹೊರದೂಡಿದರು ಎಂದು ಪ್ರಯಾಣಿಕರೊಬ್ಬರು ದೂರಿದ್ದಾರೆ.
ನಮಗೆ ಬೇರಾವುದೇ ಪರ್ಯಾಯ ವ್ಯವಸ್ಥೆ ಇರಲಿಲ್ಲ. ಉಳಿದೆಲ್ಲ ಏರ್‌ಲೈನ್ ಟಿಕೆಟ್‌ಗಳಿಗೆ ಈಗ 8000 ರೂ. ವೆಚ್ಚವಾಗುತ್ತದೆ ಎಂದು ಇನ್ನೊಬ್ಬರು ಪ್ರಯಾಣಿಕರು ಕಷ್ಟವನ್ನು ಹೇಳಿಕೊಂಡಿದ್ದಾರೆ.
|