ಟ್ಯಾಕ್ಸಿ ಚಾಲಕ ಮತ್ತು ಅವನ ಸಂಗಡಿಗ ತನ್ನ ಮೇಲೆ ಅತ್ಯಾಚಾರ ಮಾಡಿದ್ದಾರೆಂದು 26 ವರ್ಷ ಪ್ರಾಯದ ದೆಹಲಿ ಮೂಲದ ಮಹಿಳೆ ಪೊಲೀಸರಿಗೆ ದೂರು ನೀಡಿದ ಎರಡು ದಿನದಲ್ಲೇ ನಾಪತ್ತೆಯಾಗುವ ಮೂಲಕ ಅತ್ಯಾಚಾರ ಪ್ರಕರಣ ನಾಟಕೀಯ ತಿರುವು ಪಡೆದುಕೊಂಡಿದೆ. ಆಕೆ ದೆಹಲಿಗೆ ವಿಮಾನದಲ್ಲಿ ಹಿಂತಿರುಗಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಈ ಪ್ರಕರಣದಲ್ಲಿ ಉನ್ನತಸ್ತರದ ವ್ಯಕ್ತಿಗಳು ಭಾಗಿಯಾಗಿದ್ದಾರೆಂದು ವರದಿಗಳು ತಿಳಿಸಿತ್ತು. ಆಂಧ್ರಪ್ರದೇಶದ ಪ್ರಭಾವಿ ರಾಜಕಾರಣಿಯೊಬ್ಬರ ಅಳಿಯ ಈ ಮಹಿಳೆಯನ್ನು ತನ್ನ ಸ್ನೇಹಿತರ "ಮನರಂಜನೆ" ಸಲುವಾಗಿ ಬೆಂಗಳೂರಿಗೆ ಕರೆತಂದನೆಂದು ವರದಿಯಾಗಿದೆ.
ಆದರೆ ಮಹಿಳೆ ನೀಡಿರುವ ದೂರಿನಲ್ಲಿ ತಾನು ಡಿ.5ರಂದು ನಗರಕ್ಕೆ ಆಗಮಿಸಿದಾಗ ಟ್ಯಾಕ್ಸಿ ಚಾಲಕನೊಬ್ಬ ಸರ್ವೀಸ್ ಅಪಾರ್ಟ್‌ಮೆಂಟ್‌ನಲ್ಲಿ ತಾನು ಕೋಣೆ ಬಾಡಿಗೆಗೆ ಪಡೆಯಲು ಸಹಾಯ ಮಾಡಿದ್ದನೆಂದು ತಿಳಿಸಿದ್ದಾಳೆ. ತನ್ನನ್ನು ಸೆರೆಯಲ್ಲಿರಿಸಿ ಮತ್ತುಬರುವ ಔಷಧಿ ನೀಡಿ ನಗ್ನ ಚಿತ್ರಗಳನ್ನು ತೆಗೆದಿದ್ದಾರೆಂದು ಅವಳು ದೂರಿನಲ್ಲಿ ಆಪಾದಿಸಿದ್ದಾಳೆ.
|