ಯುಪಿಎ ಸರಕಾರವು ಭಾರತ ಮತ್ತು ಅಮೆರಿಕ ನಡುವಿನ ನಾಗರಿಕ ಪರಮಾಣು ಒಪ್ಪಂದವನ್ನು ಮುಂದುವರಿಸಿದಲ್ಲಿ, ಯಾವುದೇ ಕ್ಷಣದಲ್ಲೂ ನಡೆಯುವ ಚುನಾವಣೆಗೆ ಎಲ್ಲಾ ಪಕ್ಷಗಳು ಸನ್ನದ್ಧರಾಗಬೇಕಾದೀತು ಎಂದು ಸಿಪಿಐ(ಎಂ) ಮತ್ತೊಮ್ಮೆ ಬೆದರಿಕೆ ಒಡ್ಡಿದೆ.
ಅಮೆರಿಕದೊಂದಿಗೆ ಈ ವಿಚಾರದಲ್ಲಿ ಮೈತ್ರಿಯನ್ನು ಹೊಂದಲು ಎಡ ಪಕ್ಷವು ಬೆಂಬಲವನ್ನು ನೀಡಿಲ್ಲ ಮತ್ತು ಈ ಒಪ್ಪಂದವನ್ನು ಸರಕಾರವು ಮುಂದುವರಿಸಲು ಎಡಪಕ್ಷವು ಬಯಸುವುದಿಲ್ಲ ಎಂದು ಪಕ್ಷದ ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕಾರಟ್ ತಿಳಿಸಿದ್ದಾರೆ.
ಒಂದುವೇಳೆ ಈ ವಿಷಯದಲ್ಲಿ ಅಮೆರಿಕದೊಂದಿಗೆ ಯುಪಿಎ ಮಾತುಕತೆಯನ್ನು ಮುಂದುವರಿಸಲು ಬಯಸಿದಲ್ಲಿ, ಯಾವುದೇ ಕ್ಷಣದಲ್ಲೂ ಚುನಾವಣೆಯನ್ನು ಎದುರಿಸಲು ಎಲ್ಲಾ ಪಕ್ಷಗಳು ಸಿದ್ಧವಾಗಬೇಕಾಗಿದೆ ಎಂದು ಅವರು ಹೇಳಿದರು.
ಸಂಸತ್ತಿನಲ್ಲಿ ನಡೆದ ಪರಮಾಣು ಒಪ್ಪಂದದದ ಚರ್ಚೆಯಿಂದ ಹೆಚ್ಚಿನ ಸಂಸದರು ಈ ಒಪ್ಪಂದವನ್ನು ವಿರೋಧಿಸುತ್ತಾರೆ ಎಂಬುದು ಸ್ಪಷ್ಟವಾಗಿದೆ. ಆದುದರಿಂದ ಸರಕಾರವು ಒಪ್ಪಂದವನ್ನು ಮುಂದುವರಿಸದಿರುವುದೇ ಇರುವುದು ಕ್ಷೇಮ ಎಂದು ಕಾರಟ್ ಹೇಳಿದರು.
|