ಗುಜರಾತ್ ಚುನಾವಣೆಯು ಮತದಾನದ ಕೊನೆಯ ಹಂತವನ್ನು ಪ್ರವೇಶಿಸುತ್ತಿದ್ದಂತೆ , 2002ರ ಹೇಯ ಹಿಂಸಾಚಾರದ ಕೇಂದ್ರಬಿಂದುವಾದ ಗೋಧ್ರಾ ಮೇಲೆ ಈಗ ಎಲ್ಲರ ಕಣ್ಣು ನೆಟ್ಟಿದ್ದು, ಅಲ್ಲಿ ಜಯಗಳಿಸುವುದು ಬಿಜೆಪಿ ಮತ್ತು ಕಾಂಗ್ರೆಸ್ ಎರಡಕ್ಕೂ ಪ್ರತಿಷ್ಠೆಯ ವಿಷಯವಾಗಿ ಪರಿಣಮಿಸಿದೆ. "ಚುನಾವಣೆಯ ಮೇಲೆ ಗಮನಹರಿಸಿರುವ ಎಲ್ಲರಿಗೂ ಗೋಧ್ರಾ ಮೇಲೆ ದೃಷ್ಟಿ ನೆಟ್ಟಿದೆ.
ಈ ಸ್ಥಾನವನ್ನು ಗೆಲ್ಲುವ ಮೂಲಕ ಸ್ಥಾನಗಳ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುವುದು ಮಾತ್ರವಲ್ಲ, ಅದೊಂದು ಪ್ರತಿಷ್ಠೆಯ ವಿಷಯವಾಗಿದೆ. ಈ ಸ್ಥಾನವನ್ನು ಕಳೆದುಕೊಳ್ಳುವಷ್ಟು ನಾವು ಶಕ್ತರಾಗಿಲ್ಲ" ಎಂದು ಹಿರಿಯ ಬಿಜೆಪಿ ನಾಯಕ ಹೇಳುತ್ತಾರೆ. ಕಾಂಗ್ರೆಸ್‌ಗೆ ಕೂಡ ಗೋಧ್ರಾದಲ್ಲಿ ಗೆಲ್ಲುವುದು ಮುಖ್ಯವಾಗಿದೆ. ಬಲವಾದ ಹಿಂದುತ್ವ ಅಲೆಯಿಂದ ಕಳೆದ ಬಾರಿ ಬಿಜೆಪಿ ಗೋಧ್ರಾವನ್ನು ತನ್ನ ಬುಟ್ಟಿಗೆ ಹಾಕಿಕೊಂಡಿತು.
ಆಗ ಗೋಧ್ರಾ ಪಕ್ಷಕ್ಕೆ ಮುಖ್ಯ ವಿಷಯವಾಗಿತ್ತು .ಆದರೆ ಈಗ ಯಾವುದೇ ಹಿನ್ನಡೆಯು ದುಷ್ಟಶಕ್ತಿಯ ವಿರುದ್ಧ ಶಿಷ್ಟಶಕ್ತಿಯ ಜಯಕ್ಕೆ ಸಮರ್ಥನೆಯಾಗುತ್ತದೆ ಎಂದು ಪಂಚಮಹಲ್ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಜಿತ್ ಸಿನ್ಹ ಎಸ್ ಭಾಟಿ ಹೇಳಿದ್ದಾರೆ.
ಜಯದ ಖಚಿತತೆಗೆ ಬಿಜೆಪಿಯು ಹಾಲಿ ಶಾಸಕ ಹರೇಶ್ ಭಟ್ ಅವರನ್ನು ಕೈಬಿಟ್ಟು, ಪ್ರಸಕ್ತ ಕಲೋಲ್ ಶಾಸಕ ಪ್ರಭಾತ್ ಸಿನ್ಹ ಚೌಹಾನ್ ಅವರಿಗೆ ಟಿಕೆಟ್ ನೀಡಿದ್ದಾರೆ. ಚೌಹಾನ್ ಅವರು ಮುಸ್ಲಿಂ ಸಮುದಾಯದಲ್ಲಿ ಪ್ರಭಾವ ಹೊಂದಿದ್ದಾರೆಂದು ಹೇಳಲಾಗಿದೆ. ಗೋಧ್ರಾ ಕ್ಷೇತ್ರದಲ್ಲಿ ಮುಸ್ಲಿಂ ಮತದಾರರು ಅತ್ಯಧಿಕ ಸಂಖ್ಯೆಯಲ್ಲಿದ್ದಾರೆ.
|