ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಭಾರತೀಯ ವಿದ್ಯಾರ್ಥಿಗಳ ಹತ್ಯೆಗೆ ಆಘಾತ
ಭಾರತದ ಇಬ್ಬರು ಪಿಎಚ್‌ಡಿ ವಿದ್ಯಾರ್ಥಿಗಳು ಅಮೆರಿಕದ ಲೂವಿಸಿಯಾನ ವಿಶ್ವವಿದ್ಯಾಲಯದ ಕ್ಯಾಂಪಸ್‌ನಲ್ಲಿ ಹತ್ಯೆಯಾದ ಘಟನೆ ಬಗ್ಗೆ ದುಃಖತಪ್ತರಾದ ಸಂಬಂಧಿಗಳು ಮತ್ತು ಸ್ನೇಹಿತರು ತೀವ್ರ ಆಘಾತ ಮತ್ತು ಭಯ ವ್ಯಕ್ತಪಡಿಸಿದ್ದಾರೆ. ಪಿಎಚ್‌ಡಿ ವಿದ್ಯಾರ್ಥಿಗಳಿಬ್ಬರಾದ ಚಂದ್ರಶೇಖರ ರೆಡ್ಡಿ ಕೊಮ್ಮಾ ಮತ್ತು ಕಿರಣ್ ಕುಮಾರ್ ಅಲ್ಲಂ ಇಬ್ಬರೂ ಆಂಧ್ರಪ್ರದೇಶಕ್ಕೆ ಸೇರಿದವರಾಗಿದ್ದು, ಗುರುವಾರ ತಡರಾತ್ರಿ ಹತ್ಯೆಗೊಳಗಾಗಿದ್ದರು.

ಲೂವಿಸಿಯಾನ ಸ್ಟೇಟ್ ವಿಶ್ವವಿದ್ಯಾಲಯದ ಎಡ್ವರ್ಡ್ ಗೇ ಅಪಾರ್ಟ್‌ಮೆಂಟ್‌ನಲ್ಲಿ ಈ ದಾಳಿ ನಡೆದಿದೆಯೆಂದು ತಿಳಿದುಬಂದಿದೆ. ಚಂದ್ರಶೇಖರ ರೆಡ್ಡಿ ಅವರ ಕುಟುಂಬದ ಸದಸ್ಯರು ಮತ್ತು ನಿಕಟ ಸ್ನೇಹಿತರು ಇಲ್ಲಿವರೆಗೆ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ ಎಂದು ಹೇಳಿದ್ದಾರೆ."ಅವನು ಎಂಬಿಎ ಓದಿರುವುದು ಗೊತ್ತು. ಅವನು ಫೆಬ್ರವರಿಯಲ್ಲಿ ವಿವಾಹವಾಗಿದ್ದು, ಮಕ್ಕಳಿರಲಿಲ್ಲ" ಎಂದು ರೆಡ್ಡಿಯ ಚಿಕ್ಕಪ್ಪ ಹೇಳಿದ್ದಾರೆ.

"ರೆಡ್ಡಿ ಸಾವಿನ ಸುದ್ದಿ ಸ್ವದೇಶದಲ್ಲಿ ಎಲ್ಲರಿಗೂ ಆಘಾತಕಾರಿಯಾಗಿದೆ. ಅಧಿಕಾರಿಗಳಿಂದ ನಮಗೆ ಯಾವುದೇ ಮಾಹಿತಿ ಸಿಕ್ಕಿಲ್ಲ. ಟಿವಿಯಿಂದ ಮಾತ್ರ ನಮಗೆ ಮಾಹಿತಿ ಸಿಕ್ಕಿತು. ಅಲ್ಲಿ ಏನಾಯಿತು ಎಂಬ ಬಗ್ಗೆ ನಮಗೆ ಸುಳಿವೇ ಸಿಕ್ಕಿಲ್ಲ" ಎಂದು ಅವನ ಸ್ನೇಹಿತ ಸುಭಾನ್ ಆಘಾತ ವ್ಯಕ್ತಪಡಿಸುತ್ತಾರೆ. ರೆಡ್ಡಿ ತಂದೆತಾಯಿಗಳು ಹೃದಯರೋಗಿಗಳಾಗಿರುವುದರಿಂದ ಅವರಿಗೆ ಈ ವಿಷಯ ತಿಳಿಸಿಲ್ಲ.

ಅವರ ಸೋದರ, ಸೋದರಿಯರು ಅಮೆರಿಕಕ್ಕೆ ತೆರಳುತ್ತಿದ್ದಾರೆ. ಆರಂಭದ ತನಿಖೆಯಲ್ಲಿ ಮನೆಗೆ ನುಗ್ಗಿ ದಾಳಿ ಮಾಡಿದ ಫಲವಾಗಿ ಇಬ್ಬರೂ ಸತ್ತಿದ್ದಾರೆಂದು ಹೇಳಲಾಗಿದ್ದು, ಪೊಲೀಸರು ಹಂತಕರ ಭೇಟೆ ಆರಂಭಿಸಿದ್ದಾರೆ.
ಮತ್ತಷ್ಟು
ಗೋಧ್ರಾ ಗೆಲುವು ಪ್ರತಿಷ್ಠೆಯ ವಿಷಯ
ವಿದ್ಯುದಾಘಾತದಿಂದ ಹೆಣ್ಣಾನೆ ಸಾವು
ಯುಪಿಎಗೆ ಸಿಪಿಐ(ಎಂ) ಮತ್ತೊಮ್ಮೆ ಬೆದರಿಕೆ
ಪಿಐಎಲ್: ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳು
ಅತ್ಯಾಚಾರಕ್ಕೀಡಾದ ಮಹಿಳೆ ನಾಪತ್ತೆ
ಮುಂಬೈ ಕಟ್ಟಡ ಕುಸಿದು ಮೂವರ ಸಾವು