ತನ್ನ ಸಹಪಾಠಿಯನ್ನು ಶಾಲೆಯಲ್ಲಿ ಗುಂಡಿಕ್ಕಿ ಕೊಂದ ಆರೋಪಿ ಬಾಲಕನ ತಂದೆ ತಪ್ಪಿಸಿಕೊಂಡು ನಾಲ್ಕು ದಿನಗಳ ಬಳಿಕ ಈಗ ಪ್ರತ್ಯಕ್ಷವಾಗಿದ್ದಾರೆ. ಇಡೀ ಘಟನೆಯಿಂದ ತಲ್ಲಣಿಸಿರುವ ಅಜಾದ್ ಸಿಂಗ್ ಯಾದವ್ ತನ್ನ ಪುತ್ರ ಸಹಪಾಠಿಯನ್ನು ಹತ್ಯೆ ಮಾಡುವ ಮೂಲಕ ಭಾರೀ ಪ್ರಮಾದ ಎಸಗಿದ್ದಾನೆಂದು ಹೇಳಿದ್ದಾರೆ. ನನಗೆ ಸತ್ತ ಬಾಲಕನ ಬಗ್ಗೆ ಅತೀವ ನೋವಾಗಿದೆ. ನನ್ನ ಮಗ ದೊಡ್ಡ ತಪ್ಪು ಮಾಡಿದ್ದು, ಅವನಿಗೆ ಅತ್ಯುಗ್ರ ಶಿಕ್ಷೆ ನೀಡಬೇಕು ಎಂದು ಆರೋಪಿತನ ತಂದೆ ಹೇಳಿದ್ದಾರೆ.
ಸಹ ಆರೋಪಿ ಬಾಲಕನ ತಂದೆತಾಯಿ ಗುರುವಾರ ಮಾತನಾಡಿ ತಮ್ಮ ಪುತ್ರ ಅಮಾಯಕ ಎಂದು ತಿಳಿಸಿದ್ದರು. ಆದರೆ ಅಜಾದ್ ಸಿಂಗ್ ಘಟನೆ ನಡೆದ ಬಳಿಕ ನಾಪತ್ತೆಯಾಗಿದ್ದರು. ಶುಕ್ರವಾರ ಸಂಜೆ ಗುರ್‌ಗಾವ್ ಪೊಲೀಸ್ ಠಾಣೆಯಲ್ಲಿ ಅವರು ಶರಣಾದರು.
ಅವರ ಅತ್ಯಂತ ಒತ್ತಡದ ಸ್ಥಿತಿಯಲ್ಲಿದ್ದಿದ್ದರಿಂದ ಶರಣಾಗಿದ್ದಾರೆ ಎಂದು ಪೊಲೀಸ್ ಅಧಿಕಾರಿ ಸತೀಶ್ ಬಾಲನ್ ಹೇಳಿದ್ದಾರೆ. ಶಸ್ತ್ರಾಸ್ತ್ರ ಕಾಯ್ದೆಯಡಿ ನಿರ್ಲಕ್ಷ್ಯದ ಆರೋಪ ಎದುರಿಸುತ್ತಿರುವ ಅವರು ತನ್ನ ಪುತ್ರ ಬಳಸಿದ ಪಿಸ್ತೂಲು ತನಗೆ ಸೇರಿದ್ದಲ್ಲವೆಂದು ಹೇಳುವ ಮೂಲಕ ಪ್ರಕರಣ ಹೊಸ ತಿರುವು ಪಡೆದಿದೆ.
|