ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಬ್ಸಿಡಿಗಳ ಹೆಚ್ಚಳದ ಬಗ್ಗೆ ಪ್ರಧಾನಿ ಕಳವಳ
PTI
ಸಬ್ಸಿಡಿಗಳ ಹೆಚ್ಚಳದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅದರಿಂದ ಅಸಮಾನತೆ ತಗ್ಗಿಸುವ ಉದ್ದೇಶ ಈಡೇರುವುದಿಲ್ಲ ಎಂದು ಶನಿವಾರ ಹೇಳಿದ್ದಾರೆ. ನಾವು ಸಮಾನತೆಯ ಹೆಸರಿನಲ್ಲಿ ಸಹಾಯಧನಗಳನ್ನು ನೀಡುವ ಮೂಲಕ ಅಪಾರ ಹಣವನ್ನು ವೆಚ್ಚ ಮಾಡುತ್ತಿದ್ದೇವೆ. ಇದರಿಂದಾಗಿ ಸಮಾನತೆಯ ಉದ್ದೇಶ ಅಥವಾ ದಕ್ಷತೆಯ ಉದ್ದೇಶ ಈಡೇರುವುದಿಲ್ಲ ಎಂದು ಆರ್ಥಿಕ ಪ್ರಗತಿ ಸಂಸ್ಥೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಅವರು ನುಡಿದರು.

ಪ್ರಾದೇಶಿಕ ಅಸಮತೋಲನ ಮತ್ತು ಬೆಳವಣಿಗೆಯಲ್ಲಿ ಅಸಮಾನತೆ ಸಮಸ್ಯೆಗಳನ್ನು ನಿಭಾಯಿಸಲು ಹೆಚ್ಚು ಯುಕ್ತ ಪರಿಹಾರಗಳನ್ನು ಹುಡುಕಬೇಕು ಎಂದು ಪ್ರಧಾನಮಂತ್ರಿ ಕರೆನೀಡಿದರು. ಇಂತಹ ನಿಲುವು ಗ್ರಾಮೀಣ-ನಗರ ವಿಭಜನೆ ಮತ್ತು ಪ್ರಾದೇಶಿಕ ಅಸಮತೋಲನದ ಸಮಸ್ಯೆಗಳನ್ನು ನಿಭಾಯಿಸಲು ಅಗತ್ಯವಾಗಿದೆ ಎಂದು ಪ್ರಧಾನಿ ನುಡಿದರು.

ಸುಧಾರಣೆಗೆ ನವೀಕೃತ ಬದ್ಧತೆಯ ಅಗತ್ಯವನ್ನು ಒತ್ತಿಹೇಳಿದ ಅವರು, 11ನೇ ಯೋಜನೆಯಲ್ಲಿ ಉಲ್ಲೇಖಿಸಿದ ಕಾರ್ಯತಂತ್ರವನ್ನು ಅನುಷ್ಠಾನಕ್ಕೆ ತರುವ ಮೂಲಕ ವಾಯವ್ಯ ಏಷ್ಯ ಮತ್ತು ಪೂರ್ವ ಏಷ್ಯ ರಾಷ್ಟ್ರಗಳ ಸಾಲಿಗೆ ಸೇರುವ ಆಶಯವನ್ನು ಅವರು ಹೊಂದಿದರು. ಕಾರ್ಮಿಕ ಆಧಾರಿತ ಕೈಗಾರಿಕೆ ಉತ್ಪಾದನೆಯನ್ನು ನಾವು ಕ್ಷಿಪ್ರಗತಿಯಲ್ಲಿ ಕೈಗೊಳ್ಳಬೇಕು. ಕೃಷಿ ಇಳುವರಿ ಮತ್ತು ಉತ್ಪಾದನೆಯನ್ನು ಹೆಚ್ಚಿಸಲು ನಾವು ಹೊಸ ದಾರಿಗಳನ್ನು ಹುಡುಕಬೇಕಿದೆ ಎಂದು ಪ್ರಧಾನಮಂತ್ರಿ ನುಡಿದರು.
ಮತ್ತಷ್ಟು
ಆರೋಪಿ ಬಾಲಕನ ತಂದೆ ಪ್ರತ್ಯಕ್ಷ
ಭಾರತೀಯ ವಿದ್ಯಾರ್ಥಿಗಳ ಹತ್ಯೆಗೆ ಆಘಾತ
ಗೋಧ್ರಾ ಗೆಲುವು ಪ್ರತಿಷ್ಠೆಯ ವಿಷಯ
ವಿದ್ಯುದಾಘಾತದಿಂದ ಹೆಣ್ಣಾನೆ ಸಾವು
ಯುಪಿಎಗೆ ಸಿಪಿಐ(ಎಂ) ಮತ್ತೊಮ್ಮೆ ಬೆದರಿಕೆ
ಪಿಐಎಲ್: ಸುಪ್ರೀಂಕೋರ್ಟ್ ಮಾರ್ಗದರ್ಶಿ ಸೂತ್ರಗಳು