ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚೇಂಜ್ ಆಫ್ ಗಾರ್ಡ್ ಕವಾಯಿತು
PTI
ಕುದುರೆಗಳ ಖರಪುಟದ ಸದ್ದು ಮತ್ತು ಸುಶ್ರಾವ್ಯ ಸಂಗೀತದ ನಡುವೆ ರಾಷ್ಟ್ರಪತಿ ಭವನದಲ್ಲಿ ರಕ್ಷಣಾ ದಳವನ್ನು ಬದಲಾಯಿಸುವ ಸಾಂಪ್ರದಾಯಿಕ "ಚೇಂಜ್ ಆಫ್ ಗಾರ್ಡ್" ಕವಾಯಿತನ್ನು ಸಾರ್ವಜನಿಕರಿಗೆ ಮುಕ್ತವಾಗಿ ಶನಿವಾರ ತೆರೆದಿಡಲಾಯಿತು. ಕಾಲ್ದಳದ ಸೇನಾ ಸಿಬ್ಬಂದಿ ಮತ್ತು ರಾಷ್ಟ್ರಪತಿ ಖಾಸಗಿ ಅಂಗರಕ್ಷಕರಿಂದ ಕೂಡಿದ 40 ನಿಮಿಷಗಳ ಕವಾಯಿತು ಮಿಲಿಟರಿ ಸಂಪ್ರದಾಯವಾಗಿದ್ದು, ರಾಷ್ಟ್ರಪತಿ ನಿವಾಸದಲ್ಲಿ ಪ್ರತಿ ಶನಿವಾರ ನಡೆಯುತ್ತದೆ.

ಆದರೆ ಈ ಸಮಾರಂಭ ಮತ್ತಷ್ಟು ಕಳೆಗಟ್ಟುವಂತೆ ಮಾಡಲು ಮತ್ತು ಸಾರ್ವಜನಿಕರ ವೀಕ್ಷಣೆಗೆ ತೆರೆದಿಡಲು ಶನಿವಾರದಿಂದ ಅನೇಕ ಮಾರ್ಪಾಟುಗಳನ್ನು ಮಾಡಲಾಯಿತು.
ಒಪ್ಪವಾದ ದಿರಿಸು ಧರಿಸಿದ ಕಾಲ್ದಳದ ಸೇನಾ ಗಾರ್ಡ್‌ಗಳ ಜತೆಗೆ ರಾಷ್ಟ್ರಪತಿಗಳ ಅಂಗರಕ್ಷಕರು ಮೋಹಕ ಕೆಂಪು ಸಮವಸ್ತ್ರದಲ್ಲಿ ಅಶ್ವಾರೋಹಿಗಳಾಗಿ ಸೇನಾ ಬ್ಯಾಂಡ್‌ನ ಇಂಪಾದ ಸಂಗೀತದ ನಡುವೆ ಗಡಿಯಾರದ ಗಂಟೆಯಷ್ಟು ನಿಖರವಾಗಿ ಕಾವಲುಗಾರರ ಬದಲಾವಣೆಯ ಪಥಸಂಚಲನ ನಡೆಯಿತು.


ದಕ್ಷಿಣ ಮತ್ತು ಉತ್ತರ ಬ್ಲಾಕ್‌ ಸಂಪರ್ಕಿಸುವ ರಸ್ತೆಗಳನ್ನು ತ್ರಿವರ್ಣ ಧ್ವಜಗಳ ಜತೆಗೆ ರಾಷ್ಟ್ರಪತಿಗಳ ಅಂಗರಕ್ಷಕರ ಧ್ವಜಗಳಿಂದ ಮತ್ತು ಅಸ್ಸಾಂ ತುಕಡಿಯ ಧ್ವಜಗಳಿಂದ ಅಲಂಕರಿಸಲಾಗಿತ್ತು. ಅಸ್ಸಾಂ ರೆಜಿಮೆಂಟ್ ರಾಷ್ಟ್ರಪತಿ ಭವನದ ಸರಮೋನಿಯಲ್ ಸೇನಾ ಗಾರ್ಡ್ ತುಕಡಿಯಾಗಿದೆ.
ಮತ್ತಷ್ಟು
ಸಬ್ಸಿಡಿಗಳ ಹೆಚ್ಚಳದ ಬಗ್ಗೆ ಪ್ರಧಾನಿ ಕಳವಳ
ಆರೋಪಿ ಬಾಲಕನ ತಂದೆ ಪ್ರತ್ಯಕ್ಷ
ಭಾರತೀಯ ವಿದ್ಯಾರ್ಥಿಗಳ ಹತ್ಯೆಗೆ ಆಘಾತ
ಗೋಧ್ರಾ ಗೆಲುವು ಪ್ರತಿಷ್ಠೆಯ ವಿಷಯ
ವಿದ್ಯುದಾಘಾತದಿಂದ ಹೆಣ್ಣಾನೆ ಸಾವು
ಯುಪಿಎಗೆ ಸಿಪಿಐ(ಎಂ) ಮತ್ತೊಮ್ಮೆ ಬೆದರಿಕೆ