ಗುಜಾರಾತ್ ವಿಧಾನಸಭಾ ಚುನಾವಣೆಯ ಕೊನೆಯ ಮತ್ತು ಅಂತಿಮ ಸುತ್ತಿನ ಮತದಾನ ಭಾನುವಾರ ಆರಂಭಗೊಂಡಿದೆ.
ಬಿಜೆಪಿ ಮತ್ತು ಕಾಂಗ್ರೆಸ್‌ನ ಜಿದ್ದಾಜಿದ್ದಿಯ ಪ್ರಚಾರದ ಬಳಿಕ ಇದೀಗ ಭಾನುವಾರ ಮತದಾರರ ದಿನ. ಅಭ್ಯರ್ಥಿಗಳ ಹಣೆಬರಹನ್ನು ಬರೆಯಲು ಮತದಾರರು ಆರಂಭಿಸಿದ್ದು, ಸಂಜೆಯ ವೇಳೆ ಮತದಾನ ಪ್ರಕ್ರಿಯೆ ಅಂತಿಮಗೊಳ್ಳಲಿದೆ.
ಬಿಜೆಪಿ ಮತ್ತು ಕಾಂಗ್ರೆಸ್‌ನ ಚುನಾವಣಾ ಪ್ರಚಾರಗಳು ಆರಂಭದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಂದ ಆರಂಭಗೊಂಡಿದ್ದು ಬಳಿಕ ಪರಸ್ಪರ ಆರೋಪ-ಪ್ರತ್ಯಾರೋಪ, ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುವ ತನಕ ಮುಂದುವರಿದಿತ್ತು.
ಒಟ್ಟು 182 ವಿಧಾನಸಭಾ ಸ್ಥಾನಗಳಲ್ಲಿ 95 ಸ್ಥಾನಗಳಿಗೆ ದ್ವಿತೀಯ ಹಂತದಲ್ಲಿ ಮತದಾನ ನಡೆಯಲಿದೆ. ಮತಗಳ ಎಣಿಕೆ ಕಾರ್ಯ ಡಿಸೆಂಬರ್ 23ರಂದು ನಡೆಯಲಿದೆ.
ಗುಜರಾತಿನಲ್ಲಿ ಮೊದಲ ಹಂತದ ಮತದಾನ ಡಿ.11ರಂದು ನಡೆದಿದೆ. 87 ಸ್ಥಾನಗಳಿಗೆ ನಡೆದ ಮೊದಲ ಹಂತದ ಚುನಾವಣೆಯಲ್ಲಿ ಕನಿಷ್ಟ 60ಶೇ. ಮತದಾರರು ಮತ ಚಲಾಯಿಸಿದ್ದಾರೆ.
|