ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸಮಾಜದ ಅಶಾಂತಿಗೆ ಬಿಜೆಪಿ ಕಾರಣ
ಧರ್ಮದ ಹೆಸರಿನಲ್ಲಿ ಬಿಜೆಪಿ ಸಮಾಜವನ್ನು ವಿಭಜಿಸುತ್ತಿದೆ ಎಂದು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಆಪಾದಿಸಿದ್ದಾರೆ.

ಗುಜರಾತ್ ಚುನಾವಣಾ ಪ್ರಚಾರದ ಬಳಿಕ ಇದೀಗ ಹಿಮಾಚಲ ಪ್ರದೇಶದ ಚುನಾವಣೆಯತ್ತ ದೃಷ್ಟಿ ಹಾಯಿಸಿರುವ ಅವರು ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೂಂಡು ಮಾತನಾಡುತ್ತಿದ್ದರು.ಬಿಜೆಪಿ ಮೂಲಭೂತವಾದಿ ನಿಲುವನ್ನು ಹೊಂದಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅದನ್ನು ವಿರೋಧಿಸುತ್ತಿದೆ ಎಂದರು.

ಕಾಂಗ್ರೆಸ್ ಯಾವತ್ತೂ ಸಮಾಜವನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದರೆ, ಬಿಜೆಪಿ ಧರ್ಮದ ಹೆಸರಿನಲ್ಲಿ ಸಮಾಜವನ್ನು ಒಡೆಯುತ್ತಿದೆ ಎಂದು ಅವರು ಟೀಕಿಸಿದರು.
ಒಂದು ಸಮುದಾಯದ ವಿರುದ್ಧ ಮತ್ತೊಂದು ಸಮುದಾಯವನ್ನು ಎತ್ತಿಕಟ್ಟುವುದೆ ಬಿಜೆಪಿಯ ರಾಜಕಾರಣವಾಗಿದೆ ಎಂದು ಸೋನಿಯಾ ಲೇವಡಿ ಮಾಡಿದರು.

ರಾಜ್ಯದಲ್ಲಿ ಕೈಗೊಳ್ಳಲಾದ ಅಭಿವೃದ್ಧಿ ಕಾರ್ಯಕ್ರಮಗಳ ಕುರಿತು ಬೊಟ್ಟು ಮಾಡಿದ ಅವರು, ಇನ್ನಷ್ಟು ಅಭಿವೃದ್ಧಿ ಸಾಧಿಸುವ ನಿಟ್ಟಿಲ್ಲಿ ಜನತೆ ಕಾಂಗ್ರೆಸ್ ಅನ್ನು ಬೆಂಬಲಿಸಬೇಕೆಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.
ಮತ್ತಷ್ಟು
ಗುಜರಾತ್: 2ನೆ ಹಂತದ ಮತದಾನ ಆರಂಭ
ಕೋರ್ಟ್ ಆದೇಶಕ್ಕೆ ಸಂಪಾದಕರ ಗಿಲ್ಡ್ ಆಘಾತ
ಚೇಂಜ್ ಆಫ್ ಗಾರ್ಡ್ ಕವಾಯಿತು
ಸಬ್ಸಿಡಿಗಳ ಹೆಚ್ಚಳದ ಬಗ್ಗೆ ಪ್ರಧಾನಿ ಕಳವಳ
ಆರೋಪಿ ಬಾಲಕನ ತಂದೆ ಪ್ರತ್ಯಕ್ಷ
ಭಾರತೀಯ ವಿದ್ಯಾರ್ಥಿಗಳ ಹತ್ಯೆಗೆ ಆಘಾತ