ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ವರದಕ್ಷಿಣೆ ವಿರೋಧಿ ಕಾಯ್ದೆಯ ದುರುಪಯೋಗ ಸಲ್ಲ: ಸು.ಕೋ
ವರದಕ್ಷಿಣೆ ವಿರೋಧಿ ಕಾಯ್ದೆಯನ್ನು ಅಮಾಯಕರ ವಿರುದ್ಧ ದುರ್ಬಳಕೆ ಮಾಡಿಕೊಳ್ಳಬಾರದು ಎಂದು ಸುಪ್ರೀಂ ಕೋರ್ಟ್ ಎಚ್ಚರಿಕೆ ನೀಡಿದೆ.

ವರದಕ್ಷಿಣೆ ದೌರ್ಜನ್ಯವನ್ನು ತಡೆಗಟ್ಟುವ ನಿಟ್ಟಿನಲ್ಲಿ ವರದಕ್ಷಿಣೆ ವಿರೋಧಿ ಕ್ರಮಗಳನ್ನು ಕೈಗೊಳ್ಳಲಾಗಿದೆ, ಆದರೆ ಅದನ್ನು ಪತಿ ಅಥವಾ ಆತನ ಮನೆಯವರಿಗೆ ಕಿರುಕುಳ ನೀಡಲು ಈ ಸವಲತ್ತನ್ನು ದುರ್ಬಳಕೆ ಮಾಡಬಾರದು ಎಂದು ನ್ಯಾಯಾಲಯ ಹೇಳಿದೆ.

ಭಾರತೀಯ ದಂಡ ಸಂಹಿತೆಯ ಸೆಕ್ಷನ್ 498ಎ (ಮಹಿಳೆಯರ ಕಿರುಕುಳ) ಯನ್ನು ವರದಕ್ಷಿಣೆ ಸಾವುಗಳು ಮತ್ತು ಪತಿ ಹಾಗೂ ಆತನ ಸಂಬಂಧಿಗಳ ದೌರ್ಜನ್ಯವನ್ನು ತಡೆಯುವ ಉದ್ದೇಶದಿಂದ ಜಾರಿಗೆ ತರಲಾಗಿದೆ. ಅದೇನೆ ಆದರೂ, ಈ ಸೌಲಭ್ಯವನ್ನು ಕುಟಿಲ ಉದ್ದೇಶಗಳಿಗಾಗಿ ಬಳಸಬಾರದು ಎಂದು ನ್ಯಾಯಮೂರ್ತಿಗಳಾದ ಅಶೋಕ್ ಬಾನ್ ಮತ್ತು ಡಿ.ಕೆ ಜೈನ್ ಅವರನ್ನೊಳಗೊಂಡ ನ್ಯಾಯಪೀಠ ಹೇಳಿದೆ.

ನೀತು ಎಂಬ ಮಹಿಳೆ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ. ತನ್ನ ಪತಿ ಅಶುತೋಷ್ ಮಿಶ್ರ, ಮಾವ ಒಂಕಾರ ನಾಥ್ ಹಾಗೂ ಪತಿಯ ಸಹೋದರಿ ವಿರುದ್ಧ ದೂರು ನೀಡಿದ್ದು, ಆಸ್ತಿ ಹಾಗೂ ಇನ್ನಷ್ಟು ವರದಕ್ಷಿಣೆಗೆಗಾಗಿ ಕಿರುಕುಳ ನೀಡುತ್ತಿರುವುದಾಗಿ ಆಪಾದಿಸಿದ್ದರು.

ಇವರು ಕೆಳನ್ಯಾಯಾಲಯದಲ್ಲಿ ಸಲ್ಲಿಸಿದ್ದ ಅರ್ಜಿಯನ್ನು ಸಾಕಷ್ಟು ಪುರಾವೆಗಳಿಲ್ಲ ಎಂಬ ಕಾರಣ ನೀಡಿ ವಜಾಮಾಡಲಾಗಿದ್ದು. ಅರ್ಜಿಯ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಆಶಿಂಕ ಅಂಗೀಕಾರ ನೀಡಿದೆ.
ಮತ್ತಷ್ಟು
ಸಮಾಜದ ಅಶಾಂತಿಗೆ ಬಿಜೆಪಿ ಕಾರಣ
ಗುಜರಾತ್: 2ನೆ ಹಂತದ ಮತದಾನ ಆರಂಭ
ಕೋರ್ಟ್ ಆದೇಶಕ್ಕೆ ಸಂಪಾದಕರ ಗಿಲ್ಡ್ ಆಘಾತ
ಚೇಂಜ್ ಆಫ್ ಗಾರ್ಡ್ ಕವಾಯಿತು
ಸಬ್ಸಿಡಿಗಳ ಹೆಚ್ಚಳದ ಬಗ್ಗೆ ಪ್ರಧಾನಿ ಕಳವಳ
ಆರೋಪಿ ಬಾಲಕನ ತಂದೆ ಪ್ರತ್ಯಕ್ಷ