ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜರಾತ್: ಶೇ.65 ಮತದಾನ
ಬಹುತೇಕ ಶಾಂತಿಯುವಾಗಿ ನಡೆದ ಗುಜರಾತ್ ವಿಧಾನ ಸಭಾ ಚುನಾವಣೆಯ ದ್ವಿತೀಯ ಮತ್ತು ಅಂತಿಮ ಸುತ್ತಿನ ಮತದಾನದಲ್ಲಿ ಶೇ.63ರಿಂದ 65ರಷ್ಟು ಮತದಾನವಾಗಿದೆ.

ಭಾನುವಾರ ನಡೆದ ಮತದಾನದಲ್ಲಿ 2002ರ ಕೋಮುಗಲಭೆಯ ಕೇಂದ್ರ ಗೋಧ್ರ ಸೇರಿದಂತೆ, ಉತ್ತರ ಮತ್ತು ಕೇಂದ್ರ ಗುಜರಾತ್‌ನ 95 ಸ್ಥಾನಗಳ ಅಭ್ಯರ್ಥಿಗಳ ಆಯ್ಕೆಗೆ ಮತದಾರರು ತಮ್ಮ ಹಕ್ಕು ಚಲಾಯಿಸಿದರು.

ಮುಖ್ಯಮಂತ್ರಿ ನರೇಂದ್ರ ಮೋದಿ ಸೇರಿದಂತೆ ಬಿಜೆಪಿ ಹಾಗೂ ಕಾಂಗ್ರೆಸ್‌ನ ಘಟಾನುಘಟಿಗಳ ಭವಿಷ್ಯವನ್ನು ಮತದಾರರು ನಿರ್ಧರಿಸಿದ್ದಾರೆ. ಡಿ.11ರಂದು ನಡೆದ 87 ಕ್ಷೇತ್ರಗಳು ಮತ್ತು ಭಾನುವಾರದ 95 ಕ್ಷೇತ್ರಗಳು ಸೇರಿದಂತೆ ಒಟ್ಟು182 ಸ್ಥಾನಗಳ ಮತಎಣಿಕೆ ಡಿ.23ರಂದು ನಡೆಯಲಿದೆ.

ಅಂತಿಮ ಹಂತದಲ್ಲಿ 31 ಮಹಿಳೆಯರು ಸೇರಿದಂತೆ 599 ಅಭ್ಯರ್ಥಿಗಳು ಕಣದಲ್ಲಿದ್ದರು. ಸರಿಸುಮಾರು 1.87 ಕೋಟಿ ಮತದಾರರು ಮತಚಲಾಯಿಸಲು ಅರ್ಹತೆ ಪಡೆದಿದ್ದರು. ಇವರಲ್ಲಿ ಶೇ.63ರಿಂದ 65 ಮಂದಿ ತಮ್ಮ ಮತಚಲಾಯಿಸಿದ್ದಾರೆ.

ಕೆಲವು ನಕಲಿ ಮತದಾನದ ಯತ್ನಗಳು, ಸಣ್ಣಪುಟ್ಟ ಗಲಭೆಗಳನ್ನು ಹೊರತು ಪಡಿಸಿದಲ್ಲಿ ಬಹುತೇಕವಾಗಿ ಮತದಾನ ಶಾಂತಿಯುತವಾಗಿಯೇ ನಡೆಯಿತು. 574 ಕೇಂದ್ರೀಯ ಅರೆಸೇನಾ ಪಡೆಗಳು ಮತ್ತು ರಾಜ್ಯ ಪೊಲೀಸರು ಎಲ್ಲೆಡೆ ಕಟ್ಟೆಚ್ಚರ ವಹಿಸಿದ್ದರು. 2002ರ ಗಲಭೆಯ ಕೇಂದ್ರವಾಗಿದ್ದ ಗೋಧ್ರಾದಲ್ಲಿಯೂ ಚುನಾವಣೆ ಇದ್ದ ಕಾರಣ ಅತೀವ ಎಚ್ಚರ ವಹಿಸಲಾಗಿತ್ತು ಎಂದು ಉಪ ಚುನಾವಣಾ ಆಯುಕ್ತ ಜೈಪ್ರಕಾಶ್ ತಿಳಿಸಿದ್ದಾರೆ.

ಬಿಜೆಪಿಗೆ ನಿಚ್ಚಳ ಗೆಲುವು
ಮುಖ್ಯಮಂತ್ರಿ ನರೇಂದ್ರ ಮೋದಿ ಹಾಗೂ ಹಿರಿಯ ಬಿಜೆಪಿ ನಾಯಕ ಎಲ್.ಕೆ.ಆಡ್ವಾಣಿ ಅವರು ಬಿಜೆಪಿಯು ಐತಿಹಾಸಿಕ ವಿಜಯ ಸಾಧಿಸಲಿದೆ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮತ್ತಷ್ಟು
ವರದಕ್ಷಿಣೆ ವಿರೋಧಿ ಕಾಯ್ದೆಯ ದುರುಪಯೋಗ ಸಲ್ಲ: ಸು.ಕೋ
ಸಮಾಜದ ಅಶಾಂತಿಗೆ ಬಿಜೆಪಿ ಕಾರಣ
ಗುಜರಾತ್: 2ನೆ ಹಂತದ ಮತದಾನ ಆರಂಭ
ಕೋರ್ಟ್ ಆದೇಶಕ್ಕೆ ಸಂಪಾದಕರ ಗಿಲ್ಡ್ ಆಘಾತ
ಚೇಂಜ್ ಆಫ್ ಗಾರ್ಡ್ ಕವಾಯಿತು
ಸಬ್ಸಿಡಿಗಳ ಹೆಚ್ಚಳದ ಬಗ್ಗೆ ಪ್ರಧಾನಿ ಕಳವಳ