ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಮೋದ್ ಹತ್ಯೆಯಲ್ಲಿ ಪ್ರವೀಣ್ ತಪ್ಪಿತಸ್ಥ
ಬಿಜೆಪಿಯ ಹಿರಿಯ ನಾಯಕ ಪ್ರಮೋದ್ ಮಹಾಜನ್ ಅವರನ್ನು ಗುಂಡಿಕ್ಕಿ ಕೊಂದ ಆರೋಪದ ಮೇಲೆ ಅವರ ಸೋದರ ಪ್ರವೀಣ್ ಮಹಾಜನ್ ತಪ್ಪಿತಸ್ಥ ಎಂದು ಮುಂಬೈ ಸೆಷನ್ಸ್ ಕೋರ್ಟ್ ಸೋಮವಾರ ತೀರ್ಪು ನೀಡಿದೆ. ಪ್ರವೀಣ್ ಮಹಾಜನ್ ಅವರನ್ನು ಬಂಧಿಸಿ ಸುಮಾರು 2 ವರ್ಷಗಳು ಕಳೆದ ಬಳಿಕ ಅವರಿಗೆ ಶಿಕ್ಷೆಯಾಗಿದ್ದು, ಸೆಕ್ಷನ್ 302 ಮತ್ತು 449ರ ಅಡಿಯಲ್ಲಿ ಹತ್ಯೆ ಮತ್ತು ಕ್ರಿಮಿನಲ್ ಅತಿಕ್ರಮಣ ನಡೆಸಿದ ಕಾರಣಕ್ಕಾಗಿ ಪ್ರವೀಣ್ ತಪ್ಪಿತಸ್ಥನೆಂದು ಕೋರ್ಟ್ ತೀರ್ಪಿತ್ತಿದೆ.

ಶಿಕ್ಷೆಯ ಸ್ವರೂಪದ ಬಗ್ಗೆ ವಾದವಿವಾದ ಇನ್ನೂ ಮುಂದುವರಿದಿದ್ದು, ಕೋರ್ಟ್ ಮಂಗಳವಾರ ಈ ಬಗ್ಗೆ ತನ್ನ ನಿರ್ಧಾರವನ್ನು ಪ್ರಕಟಿಸುವ ನಿರೀಕ್ಷೆಯಿದೆ. ಇದೊಂದು ನಿರ್ದಯವಾದ, ಪೂರ್ವನಿಯೋಜಿತ ಕೃತ್ಯ ಎಂದು ಕೋರ್ಟ್ ತಿಳಿಸಿದ್ದು, ಆರ್ಥಿಕ ಅನುಕೂಲಗಳನ್ನು ಮೀರಿ ಬೇರೆ ಕಾರಣವೂ ಹತ್ಯೆಗೆ ಪ್ರೇರೇಪಣೆಯಾಗಿದೆ ಎಂದು ಕೋರ್ಟ್ ತಿಳಿಸಿತು.2006ರ ಏಪ್ರಿಲ್ 22ರಂದು ಪ್ರಮೋದ್ ಮಹಾಜನ್ ಮೇಲೆ ಅವರ ಸೋದರ ಪ್ರವೀಣ್ ಮೂರು ಬಾರಿ ಪಿಸ್ತೂಲಿನಿಂದ ಗುಂಡು ಹಾರಿಸಿದ ಬಳಿಕ ವೊರ್ಲಿ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದರು.

ಪ್ರಮೋದ್ ತೀವ್ರ ಗಾಯಗಳಿಂದಾಗಿ ಮೃತಪಟ್ಟಿದ್ದರು. ಈ ಪ್ರಕರಣದಲ್ಲಿ 35 ಸಾಕ್ಷಿಗಳು ಸೇರಿದಂತೆ ಪ್ರವೀಣ್ ಮಹಾಜನ್ ಪತ್ನಿ ಸಾರಂಗಿ ಅವರ ವಿಚಾರಣೆ ನಡೆಸಿ ಸುಮಾರು 600 ಪುಟಗಳ ಹೇಳಿಕೆಗಳನ್ನು ಕೋರ್ಟ್ ದಾಖಲಿಸಿತು.

ಪ್ರಮೋದ್ ಮಹಾಜನ್ ಪತ್ನಿ ರೇಖಾ ಮತ್ತು ಅವರ ಸೇವಕ ಮಹೇಶ್ ವಾಂಖಡೆ ಈ ಪ್ರಕರಣದ ಪ್ರಮುಖ ಸಾಕ್ಷಿಯಾಗಿದ್ದರು. ಕಳೆದ ಅಕ್ಟೋಬರ್‌ನಲ್ಲಿ ತಾನು ಸೋದರನ ಮೇಲೆ ಗುಂಡು ಹಾರಿಸಿರುವುದನ್ನು ಪ್ರವೀಣ್ ಮಹಾಜನ್ ನಿರಾಕರಿಸಿದ ಬಳಿಕ ಪ್ರಕರಣವು ಹೊಸ ತಿರುವು ಪಡೆದಿತ್ತು.
ಮತ್ತಷ್ಟು
ಜೈಲ್ ಬ್ರೇಕ್: 299 ಕೈದಿಗಳು ಎಸ್ಕೇಪ್
ಗುಜರಾತ್: ಶೇ.65 ಮತದಾನ
ವರದಕ್ಷಿಣೆ ವಿರೋಧಿ ಕಾಯ್ದೆಯ ದುರುಪಯೋಗ ಸಲ್ಲ: ಸು.ಕೋ
ಸಮಾಜದ ಅಶಾಂತಿಗೆ ಬಿಜೆಪಿ ಕಾರಣ
ಗುಜರಾತ್: 2ನೆ ಹಂತದ ಮತದಾನ ಆರಂಭ
ಕೋರ್ಟ್ ಆದೇಶಕ್ಕೆ ಸಂಪಾದಕರ ಗಿಲ್ಡ್ ಆಘಾತ