ದಾಂಟೆವಾಡಾ ಜೈಲಿನಿಂದ 299 ಕೈದಿಗಳ ದಿಟ್ಟೆದೆಯ ಪರಾರಿ ಘಟನೆ ಬಗ್ಗೆ ವಿವರವಾದ ಮಾಹಿತಿ ಸಲ್ಲಿಸುವಂತೆ ಕೇಂದ್ರ ಗೃಹಸಚಿವಾಲಯವು ಚತ್ತೀಸ್‌ಗಢ ಸರ್ಕಾರಕ್ಕೆ ಸೂಚಿಸಿದೆ.
ಕೇಂದ್ರ ಗೃಹಕಾರ್ಯದರ್ಶಿ ಮಧುಕರ್ ಗುಪ್ತಾ ರಾಜ್ಯ ಪೊಲೀಸ್ ಮುಖ್ಯಸ್ಥರ ಜತೆ ಮಾತನಾಡಿ ಇಂತಹ ಘಟನೆಗಳು ಸಂಭವಿಸದಂತೆ ಬಿಗಿ ಕ್ರಮಗಳನ್ನು ಕೈಗೊಳ್ಳುವಂತೆ ಆದೇಶಿಸಿದರು.ಡಿ.13 ಮತ್ತು 14ರಂದು ಭುವನೇಶ್ವರದಲ್ಲಿ ನಕ್ಸಲರ ನಿಗ್ರಹದ ಕಾರ್ಯಪಡೆ ಕುರಿತ ಸಭೆ ನಡೆದ ಎರಡು ದಿನಗಳಲ್ಲೇ ಜೈಲ್‌ಬ್ರೇಕ್ ಘಟನೆ ಸಂಭವಿಸಿದೆ.
ಈ ಸಭೆಯಲ್ಲಿ ಜೈಲಿನಲ್ಲಿ ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸುವ ಬಗ್ಗೆ ಪ್ರಮುಖವಾಗಿ ಚರ್ಚೆಯಾಗಿತ್ತು. 2 ವರ್ಷಗಳ ಕೆಳಗೆ ಬಿಹಾರದಲ್ಲಿ 341 ಕೈದಿಗಳ ಜೈಲ್‌ಬ್ರೇಕ್ ಘಟನೆ ನಡೆದ ಬಳಿಕ ನಕ್ಸಲ್‌ಪೀಡಿತ ರಾಜ್ಯಗಳಲ್ಲಿ ನೈಟ್ ವಿಷನ್ ಉಪಕರಣಗಳನ್ನು ಬಳಸುವಂತೆ ಮತ್ತು ಜೈಲಿನ ಸುತ್ತಮುತ್ತ ಸೂಕ್ತ ಬೆಳಕಿನ ವ್ಯವಸ್ಥೆಯನ್ನು ಮಾಡುವಂತೆ ಸಲಹೆ ಮಾಡಲಾಗಿತ್ತು.
|