ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ದರ್ಮದ ಹೆಸರಲ್ಲಿ ದ್ವೇಷದ ಬೀಜ -ಪ್ರತಿಭಾ
ಧರ್ಮದ ಹೆಸರಿನಲ್ಲಿ ಸಮಾಜದ ವಿವಿಧ ವರ್ಗಗಳಲ್ಲಿ ದ್ವೇಷದ ಬೀಜವನ್ನು ಬಿತ್ತಲು ಯತ್ನಿಸಲಾಗುತ್ತಿದೆ ಎಂಬ ಆತಂಕವನ್ನೂ ವ್ಯಕ್ತಪಡಿಸಿರುವ ಅವರು, ರಾಷ್ಟ್ರದಲ್ಲಿ ಸಾಮಾಜಿಕ ಸ್ಥಿತ್ಯಂತರದ ಪೂರ್ವಗಾಮಿಯಾಗುವಂತಹ ಚಳುವಳಿಯೊಂದನ್ನು ಆರಂಭಿಸಬೇಕು ಎಂದು ಅವರು ಧಾರ್ಮಿಕ ಮತ್ತು ಸಾಮಾಜಿಕ ನಾಯಕರಲ್ಲಿ ಭಾವನಾತ್ಮಕ ಮನವಿಯೊಂದನ್ನು ಮಾಡಿದರು.

ಸಬ್ಸಿಡಿಗಳು ಬಡಜನತೆಯನ್ನು ತಲುಪುತ್ತಿಲ್ಲ ಎಂಬುದಾಗಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಕಳವಳ ವ್ಯಕ್ತಪಡಿಸಿರುವ ಬೆನ್ನಿಗೆ, ರಾಷ್ಟ್ರಪತಿ ಪ್ರತಿಭಾ ಪಾಟೀಲ್ ಅವರೂ ಇಂತಹುದೇ ಭಾವನೆಯನ್ನು ಪ್ರತಿಧ್ವನಿಸಿದ್ದು, ಉದ್ದೇಶಿತ ಫಲಾನುಭವಿಗಳಿಗೆ ಕಲ್ಯಾಣ ಯೋಜನೆಗಳು ತಲುಪುತ್ತಿಲ್ಲ ಎಂಬ ಖೇದ ವ್ಯಕ್ತಪಡಿಸಿದ್ದಾರೆ.

ರಾಷ್ಟ್ರಪತಿ ಭವನದಲ್ಲಿ ರಾಷ್ಟ್ರೀಯ ಸಮನ್ವಯ ಮಂಡಳಿಯ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡುತ್ತಿದ್ದ ರಾಷ್ಚ್ರಪತಿಯವರು, ಎಲ್ಲ ಭಾರತೀಯರು ಒಂದೇ ಮಣ್ಣಿನಲ್ಲಿ ಜನಿಸಿರುವಾಗ, ಧರ್ಮದ ಹೆಸರಿನಲ್ಲಿ ಜನತೆ ವಿಭಜನೆಯಾಗುತ್ತಿರುವುದು ಸಮರ್ಥನೀಯವಲ್ಲ ಎಂದು ಮಾರ್ಮಿಕವಾಗಿ ನುಡಿದರು.

ಅಪಾರ ಮೊತ್ತದ ಕಲ್ಯಾಣ ಯೋಜನೆಗಳು ಸಾಮಾನ್ಯ ಜನತೆಗೆ ತಲುಪದಿರುವುದು ದುರಂತ ಎಂದು ವಿಷಾದ ವ್ಯಕ್ತಪಿಸಿದರು. ಈ ನ್ಯೂನತೆಗಳನ್ನು ತೊಡೆದು ಹಾಕುವ ಮತ್ತು ಸಾಮಾಜಿಕ ಪರಿವರ್ತನೆಯತ್ತ ಸಾಗುವ ಹೊಸ ಕ್ರಾಂತಿಯ ಆರಂಭವೊಂದು ಆಗಲೇಬೇಕಾದ ಅವಶ್ಯಕತೆ ಇದೆ ಎಂದು ಅವರು ಈ ಸಂದರ್ಭದಲ್ಲಿ ನುಡಿದರು.

ಮತ್ತಷ್ಟು
ಜೈಲ್‌ಬ್ರೇಕ್:ವಿವರವಾದ ಮಾಹಿತಿಗೆ ಸೂಚನೆ
ವಿಮಾನನಿಲ್ದಾಣಗಳನ್ನು ಸ್ಫೋಟಿಸುವ ಬೆದರಿಕೆ
ರಿಜ್ವಾನುರ್ ಹತ್ಯೆ: ಜ.8ರಂದು ತನಿಖಾ ವರದಿ
ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ
ನಂದಿಗ್ರಾಮ ಗೋಲೀಬಾರ್: ಇಂದು ಸಿಬಿಐ ವರದಿ
ಗುಜ್ಜಾರ್ ಸ್ಥಾನಮಾನ ಕುರಿತು ವರದಿ