ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
2004ರಲ್ಲಿ ಘೋಷಣೆ ಪ್ರಮಾದ: ಆಡ್ವಾಣಿ
ಬಿಜೆಪಿಯು 2004ರ ಲೋಕ ಸಭಾಚುನಾವಣೆಯ ವೇಳೆ ಬಳಸಿದ್ದ 'ಭಾರತ ಪ್ರಕಾಶಿಸುತ್ತಿದೆ' ಘೋಷಣೆಯೊಂದು ಪ್ರಮಾದ ಎಂದು ಪಕ್ಷದ ಹಿರಿಯ ನಾಯಕ ಎಲ್.ಕೆ.ಆಡ್ವಾಣಿ ಹೇಳಿದ್ದಾರೆ.

ಇಲ್ಲಿ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು "ಭಾರತ ಪ್ರಕಾಶಿಸುತ್ತಿದೆ ಎಂಬ ಘೋಷಣೆಯೊಂದು ಪ್ರಮಾದ. ಇದರ ಬದಲಿಗೆ 'ಭಾರತ ಉದಯಿಸುತ್ತಿದೆ' ಎಂಬುದು ಇನ್ನೂ ಉತ್ತಮವಾಗಿರುತ್ತಿತ್ತು" ಎಂದು ನುಡಿದರು.

ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಎನ್‍‌ಡಿಎ ಸರ್ಕಾರದಲ್ಲಿ ಆಡ್ವಾಣಿ ಉಪಪ್ರಧಾನಿಯಾಗಿದ್ದರು.

ಕಳೆದ ಬಾರಿಯ ಚುನಾವಣೆಯ ವೇಳೆ ಎನ್‌ಡಿಎಯು ಭಾರತ ಪ್ರಕಾಶಿಸುತ್ತದೆ ಎಂಬ ಘೋಷವಾಕ್ಯದೊಂದಿಗೆ ಚುನಾವಣಾ ಪ್ರಚಾರಕ್ಕೆ ಇಳಿದಿತ್ತು. ಗೆದ್ದೇಗೆಲ್ಲುತ್ತೇವೆ ಎಂಬ ಬಿಜೆಪಿಯ ಆತ್ಮವಿಶ್ವಾಸವನ್ನು ಮತದಾರ ಸುಳ್ಳಾಗಿಸಿದ್ದು, ಪಕ್ಷಕ್ಕೆ ಅನಿರೀಕ್ಷಿತ ಆಘಾತ ನೀಡಿತ್ತು.
ಮತ್ತಷ್ಟು
ದರ್ಮದ ಹೆಸರಲ್ಲಿ ದ್ವೇಷದ ಬೀಜ -ಪ್ರತಿಭಾ
ಜೈಲ್‌ಬ್ರೇಕ್:ವಿವರವಾದ ಮಾಹಿತಿಗೆ ಸೂಚನೆ
ವಿಮಾನನಿಲ್ದಾಣಗಳನ್ನು ಸ್ಫೋಟಿಸುವ ಬೆದರಿಕೆ
ರಿಜ್ವಾನುರ್ ಹತ್ಯೆ: ಜ.8ರಂದು ತನಿಖಾ ವರದಿ
ರಾಷ್ಟ್ರೀಯ ಪೊಲೀಸ್ ವಿಶ್ವವಿದ್ಯಾಲಯ
ನಂದಿಗ್ರಾಮ ಗೋಲೀಬಾರ್: ಇಂದು ಸಿಬಿಐ ವರದಿ