ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರಧಾನಿ ಭಧ್ರತೆಗೆ ಧಕ್ಕೆ ಪೈಲಟ್‌ಗಳ :ಬಂಧನ
ಹಿಮಾಚಲ ಪ್ರದೇಶದ ಸಿಮ್ಲಾದಲ್ಲಿ ಚುನಾವಣಾ ಪ್ರಚಾರವನ್ನು ಅಂತ್ಯಗೊಳಿಸಿ ಹೆಲಿಕಾಪ್ಟರ್‌ನಲ್ಲಿ ಪ್ರಧಾನಿ ಪ್ರಯಾಣಿಸುವ ಮುನ್ನ ಖಾಸಗಿ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್‌ಗಳು ಧಾವಿಸಿ ಅದೇ ನಿಲ್ದಾಣದಲ್ಲಿ ಇಳಿದು ಕೆಲಕಾಲ ಆತಂಕ ಮೂಡಿಸಿದ ಘಟನೆ ವರದಿಯಾಗಿದೆ.

ಬಿಲಾಸ್‌ಪುರ್‌ನಲ್ಲಿ ಹೆಲಿಕಾಪ್ಟರ್‌ನಲ್ಲಿ ಪ್ರಧಾನಿ ಹೊರಡಲು ಸಿದ್ದರಾಗಿದ್ದ ಸಂದರ್ಭದಲ್ಲಿ ಏರ್‌ಡೆಕ್ಕನ್‌ ಸಂಸ್ಥೆಗೆ ಸೇರಿದ ಹೆಲಿಕಾಪ್ಟರ್‌ಗಳು ಭದ್ರತಾ ನಿಯಮಗಳನ್ನು ಉಲ್ಲಂಘಿಸಿ ಅದೇ ರನ್‌ವೇಯಲ್ಲಿ ಇಳಿದ ಪರಿಣಾಮ ಪೈಲಟ್‌ಗಳಾದ ಎಂ.ಎಸ್. ಸಿಂಘಾಲ್ ಹಾಗೂ ಸಹಪೈಲಟ್ ಕೆ.ಮೆಹತಾ ಅವರನ್ನು ತಕ್ಷಣ ಬಂಧಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಲಬೀರ್ ಠಾಕೂರ್ ತಿಳಿಸಿದ್ದಾರೆ.

ಹೆಲಿಕಾಪ್ಟರ್‌ ರನ್‌ವೇಯಲ್ಲಿ ನಿಲ್ಲಿಸಲು ಜಿಲ್ಲಾಡಳಿತದ ಅನುಮತಿ ಪಡೆದಿಲ್ಲ. ಬಿಲಾಸಪುರ್‌ನಲ್ಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಸದಸ್ಯ ಆರ್‌.ಕೆ ಧವನ್ ಅವರನ್ನು ಚುನಾವಣಾ ಪ್ರಚಾರಕ್ಕಾಗಿ ಕರೆದೊಯ್ಯಲು ಹೆಲಿಕಾಪ್ಟರ್ ತರಲಾಗಿತ್ತು ಎಂದು ಪೈಲಟ್‌ಗಳು ಹೇಳಿದ್ದಾರೆ.

ಪ್ರಧಾನಿ ಮನಮೋಹನ್‌ಸಿಂಗ್ ಬಿಲಾಸಪುರ್‌ನಲ್ಲಿ ಚುನಾವಣಾ ಪ್ರಚಾರವನ್ನು ಅಂತ್ಯಗೊಳಿಸಿ ಪಾಲಮ್‌ಪುರ್‌ಗೆ ಪ್ರಯಾಣಿಸುತ್ತಿರುವ ಸಂದರ್ಭದಲ್ಲಿ ಈ ಘಟನೆ ನಡೆದು ಕೆಲ ಕಾಲ ಆತಂಕ ಮೂಡಿಸಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಮತ್ತಷ್ಟು
ಪ್ರವೀಣ್‌ಗೆ ಮರಣದಂಡನೆ, ಜೀವಾವಧಿ?
2004ರಲ್ಲಿ ಘೋಷಣೆ ಪ್ರಮಾದ: ಆಡ್ವಾಣಿ
ದರ್ಮದ ಹೆಸರಲ್ಲಿ ದ್ವೇಷದ ಬೀಜ -ಪ್ರತಿಭಾ
ಜೈಲ್‌ಬ್ರೇಕ್:ವಿವರವಾದ ಮಾಹಿತಿಗೆ ಸೂಚನೆ
ವಿಮಾನನಿಲ್ದಾಣಗಳನ್ನು ಸ್ಫೋಟಿಸುವ ಬೆದರಿಕೆ
ರಿಜ್ವಾನುರ್ ಹತ್ಯೆ: ಜ.8ರಂದು ತನಿಖಾ ವರದಿ