ಜಾರ್ಖಡ್ ಮುಖ್ಯಮಂತ್ರಿ ಮಧುಖೋಡಾ ಸರ್ಕಾರದ ವಿರುದ್ಧ ಪ್ರಮುಖ ವಿರೋಧಪಕ್ಷ ಭಾರತೀಯ ಜನತಾ ಪಕ್ಷ ನೇತೃತ್ವದ ಎನ್‌ಡಿಎ ಮಂಗಳವಾರ ಸರಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ಮಂಡಿಸಲಿದ್ದಾರೆ.
ವಿರೋಧ ಪಕ್ಷ ನಾಯಕ ಅರ್ಜುನ್ ಮುಂಡಾ ಅವರು ಮಂಡಿಸಲುದ್ದೇಶಿಸಿರುವ ಅವಿಶ್ವಾಸ ಗೊತ್ತುವಳಿಯ ಕುರಿತು ಚರ್ಚೆಯನ್ನು ಅಪರಾಹ್ನ 2 ಗಂಟೆಗೆ ಕೈಗೆತ್ತಿಕೊಳ್ಳಲಾಗುವುದು ಎಂದು ಸ್ಪೀಕರ್ ಆಲಂಗೀರ್ ಅಲಾಂ ಹೇಳಿದ್ದಾರೆ.
ಡಿಸೆಂಬರ್ 15ರಂದು ಬಿಜೆಪಿ ನೇತೃತ್ವದ ವಿರೋಧಪಕ್ಷಗಳು ಸ್ಪೀಕರ್ ಅವರಿಗೆ ಅವಿಶ್ವಾಸ ಗೊತ್ತುವಳಿ ಅರ್ಜಿ ಸಲ್ಲಿಸಿದ್ದು ಖೋಡಾ ಸರ್ಕಾರದ ವಿರುದ್ಧ ಅವಿಶ್ವಾಸ ಗೊತ್ತುವಳಿ ನಿರ್ಣಯವನ್ನು ವಿಧಾನಸಭೆಯಲ್ಲಿ ಸ್ವೀಕರಿಸುವಂತೆ ಕೋರಿತ್ತು.
|