1984ರ ಸಿಖ್ ವಿರೋಧಿ ದಂಗೆಯ ಭೂತ ಮತ್ತೆ ಕಾಂಗ್ರೆಸ್ಸನ್ನು ಕಾಡಲಾರಂಭಿಸಿದ್ದು, ಸಿಖ್ ನರಮೇಧದಲ್ಲಿ ಕಾಂಗ್ರೆಸ್ ಮುಖಂಡ ಜಗದೀಶ್ ಟೈಟ್ಲರ್ ಪಾತ್ರದ ಬಗ್ಗೆ ಮರು ತನಿಖೆ ನಡೆಸುವಂತೆ ಸಿಬಿಐಗೆ ದೆಹಲಿ ನ್ಯಾಯಾಲಯವೊಂದು ಆದೇಶಿಸಿದ್ದು, ಜ.16ರೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದೆ.
ಈ ದಂಗೆ ಪ್ರಕರಣದ ಪ್ರತ್ಯಕ್ಷ ಸಾಕ್ಷಿ ಜಸ್‌ಬೀರ್ ಸಿಂಗ್ ಅವರು ಟಿವಿ ಸಂದರ್ಶನವೊಂದರಲ್ಲಿ ಮಾತನಾಡುತ್ತಾ, ತನ್ನನ್ನು ಸಿಬಿಐ ಎಂದಿಗೂ ಸಂಪರ್ಕಿಸಿಲ್ಲ, ಮಾಜಿ ಕೇಂದ್ರ ಸಚಿವರೆದುರು ಎಲ್ಲವನ್ನೂ ಬಿಚ್ಚಿಡಲು ಬಯಸುವುದಾಗಿ ಹೇಳಿದ ಬಳಿಕ ನ್ಯಾಯಾಲಯದ ಈ ಆದೇಶ ಹೊರಬಿದ್ದಿದೆ. | ಜಸ್‌ಬೀರ್ ಸಿಂಗ್ ಅವರು ಅವಿತುಕೊಂಡಿದ್ದು, ಪತ್ತೆ ಸಾಧ್ಯವೇ ಇಲ್ಲ, ಆದುದರಿಂದ ಟೈಟ್ಲರ್ ವಿರುದ್ಧದ ಪ್ರಕರಣವನ್ನು ಮುಚ್ಚಿಹಾಕುವಂತೆ ಕೋರಿದ್ದ ಸಿಬಿಐಗೆ ಈ ಸಂದರ್ಶನವು ಅತಿದೊಡ್ಡ ಕಪಾಳ ಮೋಕ್ಷದಂತಾಗಿದ್ದು, ಜಸ್‌ಬೀರ್ ಹೇಳಿಕೆ ದಾಖಲಿಸಿಕೊಳ್ಳಲು ಸಿದ್ಧ ಎಂದು ತಿಳಿಸಿದೆ. |
| |
ಕ್ಯಾಲಿಫೋರ್ನಿಯಾದಲ್ಲಿರುವ ಜಸ್‌ಬೀರ್ ಸಿಂಗ್ ಅವರು, ಟೈಟ್ಲರ್ ಕಡೆಯವರಿಂದ ತಮಗೆ ಜೀವಬೆದರಿಕೆ ಇದೆ, ಸೂಕ್ತ ರಕ್ಷಣೆ ಒದಗಿಸಬೇಕು. ವೀಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಾಕ್ಷ್ಯ ಹೇಳಲು ಸಿದ್ಧ ಎಂದು ಸಂದರ್ಶನದಲ್ಲಿ ತಿಳಿಸಿದ್ದಾರೆ. ಜಸ್‌ಬೀರ್ ಸಿಂಗ್ ಅವರು ಅವಿತುಕೊಂಡಿದ್ದು, ಪತ್ತೆ ಸಾಧ್ಯವೇ ಇಲ್ಲ, ಆದುದರಿಂದ ಟೈಟ್ಲರ್ ವಿರುದ್ಧದ ಪ್ರಕರಣವನ್ನು ಮುಚ್ಚಿಹಾಕುವಂತೆ ಕೋರಿದ್ದ ಸಿಬಿಐಗೆ ಈ ಸಂದರ್ಶನವು ಅತಿದೊಡ್ಡ ಕಪಾಳ ಮೋಕ್ಷದಂತಾಗಿದ್ದು, ಜಸ್‌ಬೀರ್ ಹೇಳಿಕೆ ದಾಖಲಿಸಿಕೊಳ್ಳಲು ಸಿದ್ಧ ಎಂದು ತಿಳಿಸಿದೆ.
ಈ ನಡುವೆ, 23 ವರ್ಷಗಳ ಬಳಿಕ ಹೊಸ ಸಾಕ್ಷ್ಯದೊಂದಿಗೆ ಪ್ರಕರಣವನ್ನು ಸಾಬೀತುಪಡಿಸುವುದು ತೀರಾ ಕ್ಲಿಷ್ಟಕರವಾಗಿರುವುದರಿಂದ ಜಸ್‌ಬೀರ್ ಹೇಳಿಕೆಗೆ ಯಾವುದೇ ಮಹತ್ವ ಇರುವುದಿಲ್ಲ ಎಂದು ಸಿಬಿಐ ಮೂಲಗಳು ಹೇಳಿವೆ.
ಈ ಭಯಾನಕ ನರಮೇಧದಲ್ಲಿ ಜಸ್‌ಬೀರ್ ಅವರ ಕುಟುಂಬದ 26 ಮಂದಿಯನ್ನು ಹತ್ಯೆಗೈಯಲಾಗಿತ್ತು. ದಂಗೆಯ ತನಿಖೆಗೆ ನೇಮಿಸಲಾಗಿದ್ದ ನಾನಾವತಿ ಆಯೋಗದೆದುರು 2000ದ ಆಗಸ್ಟ್ 31ರಂದು ಹೇಳಿಕೆ ನೀಡಿದ್ದ ಜಸ್‌ಬೀರ್, 1984ರನವೆಂಬರ್ 3ರ ರಾತ್ರಿ, ತಮ್ಮ ಕ್ಷೇತ್ರದಲ್ಲಿ ಸಾಕಷ್ಟು ಮಂದಿ ಸಿಖ್ಖರನ್ನು ಹತ್ಯೆ ಮಾಡದೇ ಇರುವುದಕ್ಕೆ ತಮ್ಮ ಜನರನ್ನು ಜಗದೀಶ್ ಟೈಟ್ಲರ್ ತರಾಟೆಗೆ ತೆಗೆದುಕೊಂಡಿರುವುದನ್ನು ಕೇಳಿಸಿಕೊಂಡೆ ಎಂಬ ಹೇಳಿದ್ದರು.
|