ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಮಂಗಳ ಗ್ರಹ ಅತ್ಯಂತ ಪ್ರಕಾಶಮಾನ
ಮಂಗಳ ಗ್ರಹ ಅತ್ಯಂತ ಪ್ರಕಾಶಮಾನವಾಗಿ ಮಂಗಳವಾರ ಸಂಜೆ ಗೋಚರಿಸುವ ಮೂಲಕ ಬಾನಂಗಳದಲ್ಲಿ ಚಮತ್ಕಾರವೊಂದು ನಡೆಯಲಿದೆ. ಖಗೋಳವಿಜ್ಞಾನಿಗಳ ಪ್ರಕಾರ ಕೆಂಪು ಗ್ರಹವು ಈ ವಾರ ಭೂಮಿಯ ಸಮೀಪಕ್ಕೆ ಬರುತ್ತಿದ್ದು, ಇಂದು ಸಂಜೆ ಅತೀ ಸಮೀಪಕ್ಕೆ ಬರಲಿದೆ. ಮುಂಬರುವ ವಾರಗಳಲ್ಲಿ ಪೂರ್ವ ದಿಕ್ಕಿನಲ್ಲಿ ಆಕಾಶದಲ್ಲಿ ಪ್ರತಿ ಸಂಜೆ ಮಂಗಳಗ್ರಹದ ವೀಕ್ಷಣೆ ಜನರಿಗೆ ಸಾಧ್ಯವಾಗುತ್ತದೆ ಎಂದು ಖಗೋಳವಿಜ್ಞಾನಿಗಳು ಹೇಳಿದ್ದಾರೆ.

ಮಂಗಳ ಗ್ರಹ ಮತ್ತು ಭೂಮಿಯ ನಡುವೆ ಈ ಸಂದರ್ಭದಲ್ಲಿ 55 ದಶಲಕ್ಷ ಮೈಲುಗಳ ಅಂತರವಿದ್ದು, 2016ರ ವರ್ಷದವರೆಗೆ ಮಂಗಳಗ್ರಹ ಇಷ್ಟು ಸಮೀಪಕ್ಕೆ ಪುನಃ ಬರುವ ಸಾಧ್ಯತೆಯಿಲ್ಲ ಎಂದು ನಾಸಾ ವಿಜ್ಞಾನಿಗಳು ತಮ್ಮ ಸ್ಪೇಸ್ ವೆದರ್ ಅಲರ್ಟ್ ವರದಿಯಲ್ಲಿ ಹೇಳಿದ್ದಾರೆ.

ಬರಿಯ ಕಣ್ಣಿಗೆ ಮಂಗಳನು ಯಾವುದೇ ನಕ್ಷತ್ರಕ್ಕಿಂತ ಪ್ರಕಾಶಮಾನವಾಗಿ ಗೋಚರಿಸುತ್ತದೆ ಮತ್ತು ದೂರದರ್ಶಕದ ಮೂಲಕ ಇನ್ನೂ ಚೆನ್ನಾಗಿ ಕಾಣುತ್ತದೆ ಎಂದು ಅವರು ಹೇಳಿದ್ದಾರೆ.

ಮಂಗಳ ಮತ್ತು ಭೂಮಿಯ ಸಮೀಪದ ಭೇಟಿಯನ್ನು ವೆಬ್‌ಸೈಟ್ ಸ್ಪೇಸ್‌ವೆದರ್ ಡಾಟ್ ಕಾಂ.ನಲ್ಲಿ ವೀಕ್ಷಿಸಬಹುದು. ಬಾನಂಗಳದ ಚಮತ್ಕಾರ ವೀಕ್ಷಿಸುವವರಿಗೆ ವೆಬ್‌ಸೈಟ್ ಟಿಪ್ಸ್, ಫೋಟೋಗಳು ಮತ್ತು ಆಕಾಶನಕ್ಷೆಗಳನ್ನು ನೀಡುತ್ತದೆ.
ಮತ್ತಷ್ಟು
ಸಿಖ್ ದಂಗೆ: ಟೈಟ್ಲರ್ ಪಾತ್ರ ಮರು ತನಿಖೆಗೆ ಆದೇಶ
ಇಂದು ಖೋಡಾ ವಿರುದ್ಧ ಅವಿಶ್ವಾಸ ಗೊತ್ತುವಳಿ
ನಕ್ಸಲ್ ಆತ್ಮಹತ್ಯೆ: ಬಿಹಾರ ಜೈಲಿನಲ್ಲಿ ಘರ್ಷಣೆ
ಪ್ರಧಾನಿ ಭಧ್ರತೆಗೆ ಧಕ್ಕೆ ಪೈಲಟ್‌ಗಳ :ಬಂಧನ
ಪ್ರವೀಣ್‌ಗೆ ಮರಣದಂಡನೆ, ಜೀವಾವಧಿ?
2004ರಲ್ಲಿ ಘೋಷಣೆ ಪ್ರಮಾದ: ಆಡ್ವಾಣಿ