ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಪ್ರವೀಣ ಮಹಾಜನ್‌ಗೆ ಜೀವಾವಧಿ ಶಿಕ್ಷೆ
ಸಹೋದರ ಪ್ರಮೋದ್ ಮಹಾಜನ್ ಅವರ ಕೊಲೆಯ ಆರೋಪದ ಮೇಲೆ ಬಂಧಿತನಾಗಿದ್ದ ಪ್ರವೀಣ ಮಹಾಜನ್‌ಗೆ ನ್ಯಾಯಲಯ ಜೀವಾವಧಿ ಶಿಕ್ಷೆ ವಿಧಿಸಿ 15ಸಾವಿರ ರೂಗಳ ದಂಡ ತೆರಬೇಕೆಂದು ತೀರ್ಪು ನೀಡಿದೆ

ಪ್ರಕರಣದಲ್ಲಿ ನ್ಯಾಯಾಲಯ ಈಗಾಗಲೇ ತಪ್ಪಿತಸ್ತನೆಂದು ನಿರ್ಧರಿಸಲಾಗಿದ್ದು ಶಿಕ್ಷೆಯ ಪ್ರಮಾಣದ ತೀರ್ಪು ನೀಡಲು ನ್ಯಾಯಾಲಯ ಇಂದು ದಿನಾಂಕ ನಿಗದಿಗೊಳಿಸಿತ್ತು.

ದಿವಂಗತ ಪ್ರಮೋದ್ ಮಹಾಜನ್‌ರಿಗಿಂತ ಏಳು ವರ್ಷ ಕಿರಿಯವರಾದ 48ರ ಹರೆಯದ ಪ್ರವೀಣ್, 20 ತಿಂಗಳ ಹಿಂದೆ ತನ್ನ ಸಹೋದರನ ಮನೆಗೆ ನುಗ್ಗಿ, ಅವರನ್ನು ಗುಂಡು ಹಾರಿಸಿ ಕೊಂದು, ಬಳಿಕ ಪೊಲೀಸರಲ್ಲಿ ಶರಣಾಗಿದ್ದರು.

ವಾಜಪೇಯಿ ಸರ್ಕಾರದಲ್ಲಿ ಸಂಪುಟ ದರ್ಜೆ ಸಚಿವರಾಗಿದ್ದ ಪ್ರಮೋದ್‌ ಅವರನ್ನು 2006ರ ಎಪ್ರಿಲ್ 22ರಂದು ಕೊಲೆ ಮಾಡಲು ಪ್ರವೀಣ್ ಯತ್ನಿಸಿದ್ದರು. ಆದರೆ ಗುಂಡೇಟಿನಿಂದ ತೀವ್ರ ಗಾಯಗೊಂಡಿದ್ದ ಪ್ರಮೋದ್ 12 ದಿನಗಳ ಸಾವುಬದುಕಿನ ಹೋರಾಟದ ಬಳಿಕ ಇಹಲೋಕ ತ್ಯಜಿಸಿದ್ದರು.

ಪ್ರವೀಣ್ ಮಹಾಜನ್ ತನ್ನ ಸಹೋದರನ ಕೊಲೆ ಹಾಗೂ ಕೊಲೆ ಉದ್ದೇಶದಿಂದ ಮನೆಗೆ ಅತಿಕ್ರಮಣ ಪ್ರವೇಶ ಮಾಡಿದ್ದಾರೆಂದು ನ್ಯಾಯಾಲಯ ತೀರ್ಮಾನಿಸಿದೆ.

ಗುಂಡು ಹಾರಾಟ ಘಟನೆಯ ಪ್ರತ್ಯಕ್ಷ ಸಾಕ್ಷಿಗಳಾದ ಪ್ರಮೋದ್ ಪತ್ನಿ ಹಾಗೂ ಅವರ ಮನೆಯ ಕೆಲಸದಾಳು ಮಹೇಶ್ ವಾಂಖೆಡೆ ಅವರ ಹೇಳಿಕೆಗಳು ಮತ್ತು ಪ್ರಮೋದ್ ಪತ್ನಿಯ ಸಹೋದರ ಗೋಪಿನಾಥ್ ಮುಂದೆ ಕಳೆದ ವರ್ಷ ಎಪ್ರಿಲ್ 22ರಂದು "ಪ್ರವೀಣ್ ನನ್ನ ಮೇಲೆ ಗುಂಡು ಹಾರಿಸಲು ನಾನು ಮಾಡಿದ್ದ ತಪ್ಪೇನು" ಎಂಬುದಾಗಿ ಪ್ರಮೋದ್ ಅವರು ಆಸ್ಪತ್ರೆಗೆ ತೆರಳುವ ಹಾದಿಯಲ್ಲಿ ನೀಡಿದ್ದ ಕೊನೆಯ, ಮರಣ ಶಯ್ಯೆಯ ಹೇಳಿಕೆಯನ್ನು ಪ್ರಮುಖ ಆಧಾರವಾಗಿಸಿಕೊಂಡಿರುವ ನ್ಯಾಯಲಯ ಪ್ರವೀಣ್‌ರನ್ನು ದೋಷಿ ಎಂದು ತೀರ್ಮಾನಿಸಿದೆ.
ಮತ್ತಷ್ಟು
ಮಂಗಳ ಗ್ರಹ ಅತ್ಯಂತ ಪ್ರಕಾಶಮಾನ
ಸಿಖ್ ದಂಗೆ: ಟೈಟ್ಲರ್ ಪಾತ್ರ ಮರು ತನಿಖೆಗೆ ಆದೇಶ
ಇಂದು ಖೋಡಾ ವಿರುದ್ಧ ಅವಿಶ್ವಾಸ ಗೊತ್ತುವಳಿ
ನಕ್ಸಲ್ ಆತ್ಮಹತ್ಯೆ: ಬಿಹಾರ ಜೈಲಿನಲ್ಲಿ ಘರ್ಷಣೆ
ಪ್ರಧಾನಿ ಭಧ್ರತೆಗೆ ಧಕ್ಕೆ ಪೈಲಟ್‌ಗಳ :ಬಂಧನ
ಪ್ರವೀಣ್‌ಗೆ ಮರಣದಂಡನೆ, ಜೀವಾವಧಿ?