ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ರಸ್ತೆ ಅಪಘಾತ: ನಾಂದೇಡ್‌ನ ಐವರ ಸಾವು
ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯ ಚಿಂಟಾಲಾ ಗ್ರಾಮದ ಬಳಿ ಪ್ರವಾಸಿ ಬಸ್ಸೊಂದಕ್ಕೆ ಕಾರೊಂದು ಡಿಕ್ಕಿ ಹೊಡೆದು ಕಾರಿನಲ್ಲಿ ಪ್ರಯಾಣಿಸುತ್ತಿದ್ದ ಮೂವರು ಮಹಿಳೆಯರು ಸೇರಿದಂತೆ ಐದು ಮಂದಿ ಅಸುನೀಗಿದ ಘಟನೆ ಮಂಗಳವಾರ ಸಂಭವಿಸಿದೆ.

ಇವೆರಲ್ಲರೂ ಮಹಾರಾಷ್ಟ್ರದ ನಾಂದೇಡ್ ಜಿಲ್ಲೆಗೆ ಸೇರಿದವರೆಂದು ತಿಳಿದುಬಂದಿದೆ. ಕಾರು ಮಹಾರಾಷ್ಟ್ರದಿಂದ ಶ್ರೀಶೈಲಂ ಕಡೆಗೆ ಬರುವಾಗ ಅಪಘಾತ ಸಂಭವಿಸಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಸತ್ತವರನ್ನು ಕಾರು ಚಾಲಕ ಪವಾರ್, ಸಾರಂಗಸ್ವಾಮಿ, ಸಪ್ನಜಾ, ಅಂಕಿತಾ ಮತ್ತು ಪ್ರಭಾಗುಡೇಮಾರ್ ಎಂದು ಗುರುತಿಸಲಾಗಿದ್ದು, ಎಲ್ಲರೂ ನಾಂದೇಡ್‌ನ ಕಾಪ್ರಾ ಗ್ರಾಮಕ್ಕೆ ಸೇರಿದವರೆಂದು ತಿಳಿದುಬಂದಿದೆ. ಒಟ್ಟು 12 ಜನರು ಕಾರಿನಲ್ಲಿ ಪ್ರಯಾಣಿಸುತ್ತಿದ್ದು, ಗಾಯಗೊಂಡ ಇನ್ನಿತರ 7 ಜನರನ್ನು ಗುಂಟೂರು ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.
ಮತ್ತಷ್ಟು
ಪ್ರವೀಣ ಮಹಾಜನ್‌ಗೆ ಜೀವಾವಧಿ ಶಿಕ್ಷೆ
ಮಂಗಳ ಗ್ರಹ ಅತ್ಯಂತ ಪ್ರಕಾಶಮಾನ
ಸಿಖ್ ದಂಗೆ: ಟೈಟ್ಲರ್ ಪಾತ್ರ ಮರು ತನಿಖೆಗೆ ಆದೇಶ
ಇಂದು ಖೋಡಾ ವಿರುದ್ಧ ಅವಿಶ್ವಾಸ ಗೊತ್ತುವಳಿ
ನಕ್ಸಲ್ ಆತ್ಮಹತ್ಯೆ: ಬಿಹಾರ ಜೈಲಿನಲ್ಲಿ ಘರ್ಷಣೆ
ಪ್ರಧಾನಿ ಭಧ್ರತೆಗೆ ಧಕ್ಕೆ ಪೈಲಟ್‌ಗಳ :ಬಂಧನ