ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಹಂತಕ ಆನೆ ಲಾಡೆನ್‌ಗೆ ತೀವ್ರ ಶೋಧ
PTI
ಜಾರ್ಕಂಡ್‌ನ ಕುಗ್ರಾಮಗಳಿಗೆ ಸೇರಿದ ಬುಡಕಟ್ಟು ಜನರು ರಾಜ್ಯದ ದಟ್ಟವಾದ ಅರಣ್ಯಪ್ರದೇಶಗಳಲ್ಲಿ ಹಂತಕನೊಬ್ಬನ ಉಪಟಳಕ್ಕೆ ತೆರೆಎಳೆಯಲು ವ್ಯಾಪಕ ಶೋಧವನ್ನು ನಡೆಸಿದ್ದಾರೆ. ಹಂತಕನನ್ನು ಭಯೋತ್ಪಾದಕನೆಂದೇ ಹೆಸರಿಸಲಾಗಿದ್ದು, ಅಲ್ ಕೈದಾ ಮುಖ್ಯಸ್ಥ ಲಾಡೆನ್ ಹೆಸರನ್ನು ಅದಕ್ಕಿಟ್ಟಿದ್ದಾರೆ.

ಗ್ರಾಮಸ್ಥರಿಗೆ ನಿದ್ರಾರಹಿತ ರಾತ್ರಿಗಳನ್ನು ಕಳೆಯುವಂತೆ ಮಾಡಿದ ಲಾಡೆನ್ ಒಂದು ಸಲಗ. ಕಳೆದ ಕೆಲವು ತಿಂಗಳಿಂದ ಈ ಆನೆಯು ಅನೇಕ ಮಂದಿಯ ಪ್ರಾಣಹರಣ ಮಾಡಿದ್ದು. ಅರಣ್ಯ ಪ್ರದೇಶದ ಹತ್ತಾರು ಮನೆಗಳನ್ನು ಪುಡಿಮಾಡಿದೆ. ಗ್ರಾಮಸ್ಥರು ನಿಶ್ಚಿಂತೆಯಿಂದ ಮುಕ್ತವಾಗಿ ಸಂಚರಿಸಲು ಭಯ ಉಂಟಾಗಿದೆ.

ಕಳೆದ ವಾರ ಆನೆ ವೃದ್ಧ ಮಹಿಳೆ ಮತ್ತು ಅವರ ಮೊಮ್ಮಗಳನ್ನು ದರ್ಮಾಪುರ ಗ್ರಾಮದಲ್ಲಿ ಕೊಂದಿತ್ತು. ಆನೆಗಳು ಮಕ್ಕಳ ಮೇಲೆ ದಾಳಿ ಮಾಡುವುದಿಲ್ಲವೆಂಬ ಪ್ರತೀತಿಯಿದೆ. ಆದರೆ ಈ ಆನೆಯು ಮಕ್ಕಳನ್ನು ಕೂಡ ಬಿಡುತ್ತಿಲ್ಲ. ಎರಡೂವರೆ ವರ್ಷದ ಮಗುವನ್ನು ಕೂಡ ಕೊಂದಿದೆಯೆಂದು ಗ್ರಾಮದ ಮುಖ್ಯಸ್ಥ ಜೈಪಾಲ್ ಸಿಂಗ್ ಹೇಳುತ್ತಾರೆ.

ಧರ್ಮಾಪುರ, ಚೋಟಾ ಚಂಗೂರ್ಸ ಬಾರಾ ಚಂಗೂರ್ ಮತ್ತು ಬಾಂಟಾ ಸೇರಿದಂತೆ ಜಾರ್ಖಂಡ್‌ನ ಅನೇಕ ಗ್ರಾಮಗಳಲ್ಲಿ ಲಾಡೆನ್ ದಾಂಧಲೆ ಎಬ್ಬಿಸಿದ್ದಾನೆ. ಪಶ್ಚಿಮ ಬಂಗಾಳದ ಗಡಿಯಲ್ಲಿರುವ ಸಿಲ್ಲಿ ಪ್ರದೇಶದಲ್ಲಂತೂ ಕರ್ಫ್ಯೂ ತರದ ಪರಿಸ್ಥಿತಿ ನೆಲೆಸಿದೆ.

ಈ ಪ್ರದೇಶದಲ್ಲಿ ಮೂರ್ನಾಲ್ಕು ಆನೆಗಳ ಹಿಂಡು ಸಂಚರಿಸುತ್ತವೆ. ಅವು ಸಾಗಿಹೋದ ಬಳಿಕ ಜನರು ಮನೆಯಿಂದ ಹೊರಗೆ ಬರುತ್ತಾರೆ. ಆದರೆ ಹಠಾತ್ತಾಗಿ ಲಾಡೆನ್ ಎಲ್ಲಿಂದಲೋ ಪ್ರತ್ಯಕ್ಷನಾಗಿ ಗ್ರಾಮಸ್ಥರ ಮೇಲೆ ದಾಳಿ ನಡೆಸುತ್ತಿದ್ದನೆಂದು ಸಿಂಗ್ ಹೇಳಿದ್ದಾರೆ.

ಉಳಿದ ಆನೆಗಳು ಬತ್ತದ ಗದ್ದೆಗೆ ದಾಳಿಯಿಡಲು ಗ್ರಾಮವನ್ನು ಪ್ರವೇಶಿಸುತ್ತದೆ. ಆದರೆ ಲಾಡೆನ್‌ಗೆ ಮನೆಗಳನ್ನು ಒಡೆದು ಜನರನ್ನು ಕೊಲ್ಲುವುದರಲ್ಲೇ ಆಸಕ್ತಿ ಎಂದು ಗ್ರಾಮಸ್ಥರು ಹೇಳುತ್ತಾರೆ.
ಮತ್ತಷ್ಟು
ಬಾಲಿ ಒಪ್ಪಂದಕ್ಕೆ ಪಚೌರಿ ಸ್ವಾಗತ
ರಸ್ತೆ ಅಪಘಾತ: ನಾಂದೇಡ್‌ನ ಐವರ ಸಾವು
ಪ್ರವೀಣ ಮಹಾಜನ್‌ಗೆ ಜೀವಾವಧಿ ಶಿಕ್ಷೆ
ಮಂಗಳ ಗ್ರಹ ಅತ್ಯಂತ ಪ್ರಕಾಶಮಾನ
ಸಿಖ್ ದಂಗೆ: ಟೈಟ್ಲರ್ ಪಾತ್ರ ಮರು ತನಿಖೆಗೆ ಆದೇಶ
ಇಂದು ಖೋಡಾ ವಿರುದ್ಧ ಅವಿಶ್ವಾಸ ಗೊತ್ತುವಳಿ