ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಚಂದ್ರಯಾನ-2ಕ್ಕೆ ತಾಂತ್ರಿಕ ಚರ್ಚೆ
ಜಂಟಿ ಚಂದ್ರಯಾತ್ರೆಯಾದ ಚಂದ್ರಯಾನ-2ರ ಸಲುವಾಗಿ ಭಾರತ ಮತ್ತು ರಷ್ಯಾ ತಾಂತ್ರಿಕ ಚರ್ಚೆಗಳನ್ನು ಆರಂಭಿಸಿದೆ. 2011-12ರಲ್ಲಿ ಆರಂಭವಾಗುವುದೆಂದು ನಿರೀಕ್ಷಿಸಲಾಗಿರುವ ಈ ಯೋಜನೆಯಲ್ಲಿ ವಿಜ್ಞಾನಿಗಳು ಚಂದ್ರನ ಮೇಲೆ ರೋವರ್ ಇಳಿಸಿ ಚಂದ್ರನ ಮೇಲ್ಮೈನ ರಾಸಾಯನಿಕ ವಿಶ್ಲೇಷಣೆ ನಡೆಸುವುದಲ್ಲದೇ ಭೂಮಿಯ ನಿಸರ್ಗದತ್ತ ಉಪಗ್ರಹವಾದ ಚಂದ್ರನ ಸಂಪನ್ಮೂಲಗಳನ್ನು ಶೋಧಿಸಲಿದ್ದಾರೆ.

ರಾಸಾಯನಿಕ ವಿಶ್ಲೇಷಣೆ ಮತ್ತು ಸಂಪನ್ಮೂಲ ಶೋಧನೆ ಯೋಜನೆಯ ಮುಖ್ಯ ಉದ್ದೇಶ ಎಂದು ಚಂದ್ರಯಾನ-1ರ ಯೋಜನಾ ನಿರ್ದೇಶಕ ಮೈಲಾಸ್ವಾಮಿ ಅಣ್ಣಾದೊರೈ ಹೇಳಿದ್ದಾರೆ.ಚಂದ್ರಯಾನ 2ರ ತಾಂತ್ರಿಕ ಚರ್ಚೆಗಳಿಗಾಗಿ ಅಣ್ಣಾದೊರೈ ಕಳೆದ ತಿಂಗಳು ರಷ್ಯಾಗೆ ಭೇಟಿ ನೀಡಿದ್ದರು. 2008 ಏಪ್ರಿಲ್ 9ರಂದು ಆರಂಭವಾಗುವ ಚಂದ್ರಯಾನ-1 ಯೋಜನೆಗಿಂತ ಇದು ಅಲ್ಪಾವಧಿಯ ಯಾತ್ರೆಯೆಂದು ನಿರೀಕ್ಷಿಸಲಾಗಿದೆ.

ರೆಫ್ರಿಜಿರೇಟರ್‌ನಲ್ಲಿ ಬಳಸುವ ಹೀಲಿಯಂ 3 ಅನಿಲವನ್ನು ಹೊಂದಿದ ಖನಿಜ ಮಾದರಿಗಳು ಮತ್ತು ಇಂಧನ ಕೊರತೆ ನೀಗಿಸುವ ಅನಿಲಗಳಿಗಾಗಿ ಕೂಡ ಚಂದ್ರಯಾನ 2ರಲ್ಲಿ ಶೋಧ ಮಾಡಲಾಗುವುದು ಎಂದು ನಂಬಲಾಗಿದೆ.
ಮತ್ತಷ್ಟು
ಹಂತಕ ಆನೆ ಲಾಡೆನ್‌ಗೆ ತೀವ್ರ ಶೋಧ
ಬಾಲಿ ಒಪ್ಪಂದಕ್ಕೆ ಪಚೌರಿ ಸ್ವಾಗತ
ರಸ್ತೆ ಅಪಘಾತ: ನಾಂದೇಡ್‌ನ ಐವರ ಸಾವು
ಪ್ರವೀಣ ಮಹಾಜನ್‌ಗೆ ಜೀವಾವಧಿ ಶಿಕ್ಷೆ
ಮಂಗಳ ಗ್ರಹ ಅತ್ಯಂತ ಪ್ರಕಾಶಮಾನ
ಸಿಖ್ ದಂಗೆ: ಟೈಟ್ಲರ್ ಪಾತ್ರ ಮರು ತನಿಖೆಗೆ ಆದೇಶ