ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಟೈಟ್ಲರ್ ಹೇಳಿಕೆಗೆ ಸಿಂಗ್ ಖಾರದ ಪ್ರತಿಕ್ರಿಯೆ
1984ರ ಗಲಭೆಗಳಿಗೆ ಜಸ್ಬೀರ್ ಸಿಂಗ್ ಪ್ರತ್ಯಕ್ಷದರ್ಶಿಯಲ್ಲ ಎಂದು ಕಾಂಗ್ರೆಸ್ ನಾಯಕ ಜಗದೀಶ್ ಟೈಟ್ಲರ್ ನೀಡಿರುವ ಹೇಳಿಕೆಗೆ ಜಸ್ಬೀರ್ ಸಿಂಗ್ ಖಾರವಾದ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಟೈಟ್ಲರ್ ಪಾತ್ರದ ಬಗ್ಗೆ ದೆಹಲಿ ಕೋರ್ಟ್ ಮರುತನಿಖೆಗೆ ಆದೇಶ ನೀಡಿದ ಬಳಿಕ ಸುದ್ದಿಚಾನೆಲ್‌ವೊಂದರ ಜತೆ ಮಾತನಾಡಿದ ಅವರು ಮೊದಲಿಗೆ ಟೈಟ್ಲರ್ ನನ್ನ ಅಸ್ತಿತ್ವವನ್ನು ನಿರಾಕರಿಸಿದರು.

ಈಗ ನಾನು ಮಾತನಾಡಿದ ಮೇಲೆ ಪ್ರತ್ಯಕ್ಷದರ್ಶಿ ಅಲ್ಲವೆಂದು ಹೇಳುತ್ತಿದ್ದಾರೆ ಎಂದು ಸಿಂಗ್ ಹೇಳಿದರು. ಹತ್ಯೆಕೋರನು ತನ್ನ ಅಪರಾಧವನ್ನು ಒಪ್ಪಿಕೊಳ್ಳುತ್ತಾನೆಯೇ ಎಂದು ಸಿಂಗ್ ಪ್ರಶ್ನಿಸಿದರು. ಜಸ್ಬೀರ್ ಸಿಂಗ್ ನಾಪತ್ತೆಯಾಗಿದ್ದಾರೆಂದು ಸಿಬಿಐ ಘೋಷಿಸಿದ ಬಳಿಕ ಸಿಎನ್‌ಎನ್-ಐಬಿಎನ್ ಸುದ್ದಿ ಚಾನೆಲ್ ಅವರ ಜಾಡನ್ನು ಪತ್ತೆಮಾಡಿತ್ತು.

ತಮ್ಮ ಜೀವನ ಇಲ್ಲಿ ಅಪಾಯಕಾರಿ ಎಂದು ತಿಳಿದಬಳಿಕ ಅಮೆರಿಕಕ್ಕೆ ಹೋಗಿದ್ದಾಗಿ ಅವರು ತಿಳಿಸಿದ್ದಾರೆ. ಅವರು ಸಿಖ್ ವಿರೋಧಿ ಗಲಭೆಗಳಿಂದ 26 ಬಂಧುಗಳನ್ನು ಕಳೆದುಕೊಂಡಿದ್ದರು.

ಪ್ರಮುಖ ಸಾಕ್ಷಿ ಎಲ್ಲಿದ್ದಾರೆ? ಜಸ್ಬೀರ್ ಸಿಂಗ್ ಪ್ರಮುಖ ಸಾಕ್ಷಿಯಲ್ಲ. ಜಸ್ಬೀರ್ ಪ್ರಮಾಣಪತ್ರವನ್ನು ಕುರಿತು ಸಿಬಿಐ ತನಿಖೆ ಮಾಡಬೇಕೆಂದು ನ್ಯಾಯಾಧೀಶರ ಹೇಳಿಕೆಯನ್ನುಸ್ವಾಗತಿಸುವುದಾಗಿ ಟೈಟ್ಲರ್ ಹೇಳಿದ್ದರು. 20 ವರ್ಷಗಳು ಕಳೆದ ಬಳಿಕವೂ ನಾನು ತಪ್ಪಿತಸ್ಥನೆಂದು ರುಜುವಾತಾದರೆ ನೇಣುಗಂಭಕ್ಕೆ ಕೊರಳೊಡ್ಡುವ ಪ್ರಥಮ ವ್ಯಕ್ತಿ ನಾನಾಗಲಿದ್ದೇನೆ ಎಂದು ಅವರು ನುಡಿದರು.
ಮತ್ತಷ್ಟು
ಪರ್ಯಾಯ ಒಕ್ಕೂಟಕ್ಕೆ ಎಡಪಕ್ಷಗಳ ಆಸಕ್ತಿ
ರಾಷ್ಟ್ರಪತಿ ಜನ್ಮದಿನದ ಶುಭಾಶಯ
ಹಿ.ಪ್ರ.: ಅಂತಿಮ ಸುತ್ತಿನ ಮತದಾನ
ಚಂದ್ರಯಾನ-2ಕ್ಕೆ ತಾಂತ್ರಿಕ ಚರ್ಚೆ
ಹಂತಕ ಆನೆ ಲಾಡೆನ್‌ಗೆ ತೀವ್ರ ಶೋಧ
ಬಾಲಿ ಒಪ್ಪಂದಕ್ಕೆ ಪಚೌರಿ ಸ್ವಾಗತ