ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಬಾಡಿಗೆ: ಸುಪ್ರೀಂಕೋರ್ಟ್ ಎಚ್ಚರಿಕೆ
ನೀವು ಬಾಡಿಗೆದಾರರಾಗಿದ್ದರೆ ನಿಮ್ಮ ಮಾಲೀಕರ ಜತೆ ಸೌಜನ್ಯದಿಂದ ನಡೆದುಕೊಳ್ಳುವುದನ್ನು ಕಲಿಯಿರಿ ಮತ್ತು ಅವರ ಆಸ್ತಿಗೆ ಯಾವುದೇ ಹಾನಿ ಮಾಡದೇ ಅದನ್ನು ಉಪಯೋಗಿಸಿ. ಇಲ್ಲದಿದ್ದರೆ ನಿಮ್ಮನ್ನು ಖಾಲಿ ಮಾಡಿಸುವುದು ಖಚಿತ ಎಂದು ಸುಪ್ರೀಂಕೋರ್ಟ್ ತೀರ್ಪಿನಲ್ಲಿ ಬುಧವಾರ ತಿಳಿಸಿದೆ. ಇಂತಹ ಚಟುವಟಿಕೆಗಳು ಕಿರಿಕರಿ ಉಂಟುಮಾಡುವುದಾದ್ದರಿಂದ ಖಾಲಿ ಮಾಡಿಸಲು ಆಧಾರವಾಗಿದೆ ಎಂದು ನ್ಯಾಯಮೂರ್ತಿಗಳಾದ ರವೀಂದ್ರನ್ ಮತ್ತು ಪಿ. ಸದಾಶಿವಂ ಅಭಿಪ್ರಾಯಪಟ್ಟರು.

ಪಶ್ಚಿಮ ಬಂಗಾಳದ ನಿವಾಸಗಳ ಬಾಡಿಗೆದಾರರ ಕಾಯ್ದೆ ಮತ್ತು ಆಸ್ತಿ ವರ್ಗಾವಣೆ ಹಕ್ಕಿನ ಬಗ್ಗೆ ವ್ಯಾಖ್ಯಾನಿಸುವಾಗ ಅವರು ಮೇಲಿನ ತೀರ್ಪು ನೀಡಿದ್ದಾರೆ. ಬಾಡಿಗೆದಾರನ ದುರ್ನಡತೆಯು ಬಾಡಿಗೆಯ ಆಸ್ತಿಯನ್ನು ಖಾಲಿ ಮಾಡಿಸಲು ಸಮರ್ಥನೆಯಾಗಿದೆ ಎಂಬ ವಿಚಾರಣೆ ನ್ಯಾಯಾಲಯ ಮತ್ತು ಕೊಲ್ಕತಾ ಹೈಕೋರ್ಟ್ ಅಭಿಪ್ರಾಯವನ್ನು ಪುರಸ್ಕರಿಸಿದ ಕೋರ್ಟ್ ಈ ತೀರ್ಪನ್ನು ನೀಡಿದೆ.

ಕೋಲ್ಕತಾದ ಬಾಡಿಗೆ ಅಂಗಡಿಯಿಂದ ತಮ್ಮನ್ನು ಖಾಲಿ ಮಾಡಿಸಿದ ವಿರುದ್ಧ ಬಾಡಿಗೆದಾರ ಗೌತಮ್ ಘೋಷ್ ಎರಡು ಕೆಳ ಕೋರ್ಟ್‌ಗಳ ಆದೇಶದ ವಿರುದ್ಧ ಸುಪ್ರೀಂಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದರು.

ಮಾಲೀಕನ ಅನುಮತಿಯಿಲ್ಲದೇ ಗೋಷ್ ಅಂಗಡಿಯ ಕೊಲಾಪ್ಸಿಬಲ್ ಗೇಟ್ ಬದಲಾಯಿಸಿದ್ದರು. ಈ ಬಗ್ಗೆ ಪ್ರಶ್ನಿಸಿದ ಮಾಲೀಕರಿಗೆ ಬೆದರಿಕೆ ಹಾಕಿದ್ದರು. ಏತನ್ಮಧ್ಯೆ, ಜಿಲ್ಲಾ ಕೋರ್ಟ್ ಬಾಡಿಗೆದಾರನ್ನು ಖಾಲಿ ಮಾಡಿಸಲು ಆದೇಶಿಸಿತ್ತು.
ಮತ್ತಷ್ಟು
ಟೈಟ್ಲರ್ ಹೇಳಿಕೆಗೆ ಸಿಂಗ್ ಖಾರದ ಪ್ರತಿಕ್ರಿಯೆ
ಪರ್ಯಾಯ ಒಕ್ಕೂಟಕ್ಕೆ ಎಡಪಕ್ಷಗಳ ಆಸಕ್ತಿ
ರಾಷ್ಟ್ರಪತಿ ಜನ್ಮದಿನದ ಶುಭಾಶಯ
ಹಿ.ಪ್ರ.: ಅಂತಿಮ ಸುತ್ತಿನ ಮತದಾನ
ಚಂದ್ರಯಾನ-2ಕ್ಕೆ ತಾಂತ್ರಿಕ ಚರ್ಚೆ
ಹಂತಕ ಆನೆ ಲಾಡೆನ್‌ಗೆ ತೀವ್ರ ಶೋಧ