ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸೊಹ್ರಾಬುದ್ದೀನ್ ಪ್ರಕರಣದ ನ್ಯಾಯಾಧೀಶೆ ವರ್ಗ
ಸೊಹ್ರಾಬುದ್ದೀನ್ ಶೇಖ್ ನಕಲಿ ಎನ್‌ಕೌಂಟರ್ ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಹೆಚ್ಚುವರಿ ಸೆಷನ್ಸ್ ಮತ್ತು ನಿಯೋಜಿತ ಪೊಟಾ ಕೋರ್ಟ್ ನ್ಯಾಯಾಧೀಶೆ ಸೋನಿಯಾ ಗೊಕಾನಿ ಅವರನ್ನು ಗುಜರಾತ್ ಹೈಕೋರ್ಟ್ ವರ್ಗಾವಣೆ ಮಾಡಿದೆ.

ಗೊಕಾನಿ ಅವರನ್ನು ಹೈಕೋರ್ಟ್ ರಿಜಿಸ್ಟ್ರಾರ್ ಹುದ್ದೆಗೆ ಸ್ಥಳಾಂತರಿಸಲಾಗಿದೆ ಎಂದು ಕೋರ್ಟ್‌ನ ಅಧಿಕೃತ ಮೂಲಗಳು ಬುಧವಾರ ತಿಳಿಸಿವೆ.ಅಕ್ಷರಧಾಮ ಮಂದಿರದ ಮೇಲೆ ಭಯೋತ್ಪಾದಕರ ದಾಳಿ, ರಾಜ್ಯ ಗೃಹ ಖಾತೆ ಸಚಿವ ಹರೇನ್ ಪಾಂಡ್ಯ ಹತ್ಯೆ ಮುಂತಾದ ಸೂಕ್ಷ್ಮ ಪ್ರಕರಣಗಳ ವಿಚಾರಣೆಯನ್ನು ಗೊಕಾನಿ ಕೋರ್ಟ್ ನಡೆಸಿತ್ತು.

ಸೊಹ್ರಾಬುದ್ದೀನ್ ಪ್ರಕರಣದ ವಿಚಾರಣೆ ಮತ್ತು 2003ರಂದು ಹೊಸ ವರ್ಷಾಚರಣೆ ದಿನ ಬಿಜೆಲ್ ಜೋಷಿ ಎಂಬುವರ ಅತ್ಯಾಚಾರ ಮತ್ತು ಹತ್ಯೆ ಪ್ರಕರಣವನ್ನೂ ಕೂಡ ಅವರು ವಿಚಾರಣೆ ನಡೆಸುತ್ತಿದ್ದರು.

ಗೋಧ್ರಾದಲ್ಲಿ 59 ಜನರು ಬಲಿಯಾದ ಸಾಬರಮತಿ ರೈಲು ದುರಂತದ ಪ್ರಕರಣದ ವಿಚಾರಣೆಯನ್ನು ಕೂಡ ಸುಪ್ರೀಂಕೋರ್ಟ್ ತಡೆಯಾಜ್ಞೆ ನೀಡುವ ತನಕ ಅವರು ನಿರ್ವಹಿಸಿದ್ದರು.
ಮತ್ತಷ್ಟು
ಬಾಡಿಗೆ: ಸುಪ್ರೀಂಕೋರ್ಟ್ ಎಚ್ಚರಿಕೆ
ಟೈಟ್ಲರ್ ಹೇಳಿಕೆಗೆ ಸಿಂಗ್ ಖಾರದ ಪ್ರತಿಕ್ರಿಯೆ
ಪರ್ಯಾಯ ಒಕ್ಕೂಟಕ್ಕೆ ಎಡಪಕ್ಷಗಳ ಆಸಕ್ತಿ
ರಾಷ್ಟ್ರಪತಿ ಜನ್ಮದಿನದ ಶುಭಾಶಯ
ಹಿ.ಪ್ರ.: ಅಂತಿಮ ಸುತ್ತಿನ ಮತದಾನ
ಚಂದ್ರಯಾನ-2ಕ್ಕೆ ತಾಂತ್ರಿಕ ಚರ್ಚೆ