ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಚುನಾವಣೆ ಆಯೋಗಕ್ಕೆ ನೀಡಿರುವ ಉತ್ತರದಲ್ಲಿ " ಸಾವಿನ ವ್ಯಾಪಾರಿ" ಪ್ರತಿಕ್ರಿಯೆಯನ್ನು ಸಮರ್ಥಿಸಿಕೊಂಡಿದ್ದಾರೆಂದು ತಿಳಿದುಬಂದಿದ್ದು, ತಾವು ಯಾರನ್ನೇ ಉದ್ದೇಶಿಸಿ ಮಾತನಾಡದೇ ಗುಜರಾತ್ ಆಡಳಿತ ಕುರಿತು ಪ್ರತಿಕ್ರಿಯಿಸಿದ್ದಾಗಿ ಹೇಳಿದ್ದಾರೆ.
ಗುಜರಾತ್ ವಿಧಾನಸಭೆ ಚುನಾವಣೆ ಸಂದರ್ಭದ ಭಾಷಣದಲ್ಲಿ ತಾವು ಬಳಸಿದ ಸಾವಿನ ವ್ಯಾಪಾರಿ ಪದಪ್ರಯೋಗವನ್ನು ಸಮರ್ಥಿಸಿಕೊಂಡ ಅವರು ತಾವು ನಿರ್ದಿಷ್ಟವಾಗಿ ಯಾರನ್ನೂ ಹೆಸರಿಸದಿರುವುದರಿಂದ ತಮ್ಮ ಪ್ರತಿಕ್ರಿಯೆಯು ಮಾದರಿ ನೀತಿ ಸಂಹಿತೆಯನ್ನು ಉಲ್ಲಂಘಿಸುವುದಿಲ್ಲ ಎಂದು ಆಯೋಗಕ್ಕೆ ತಿಳಿಸಿದ್ದಾರೆಂದು ಮೂಲಗಳು ಹೇಳಿವೆ.
ರಾಜ್ಯದ ಆಡಳಿತದ ಮುಖ್ಯಸ್ಥರಾದ ಮೋದಿ ಕೂಡ ಸೋನಿಯ ಅವರ ಸಾವಿನ ವ್ಯಾಪಾರಿ ಪ್ರತಿಕ್ರಿಯೆ ವ್ಯಾಪ್ತಿಗೆ ಬಂದಿದ್ದು, ಮೋದಿ ಅವರನ್ನು ಹೊರತುಪಡಿಸಿ ಹೇಳಿಕೆ ನೀಡಿಲ್ಲ ಎಂದು ಕಾಂಗ್ರೆಸ್ ಮೂಲಗಳು ಏತನ್ಮಧ್ಯೆ ತಿಳಿಸಿದೆ.
ಸೋನಿಯಾ ಹೇಳಿಕೆ ನಿಚ್ಚಳವಾಗಿದ್ದು, ಯಾರು ಬೇಕಾದರೂ ಅರ್ಥ ಮಾಡಿಕೊಳ್ಳಬಹುದು ಎಂದು ಏಐಸಿಸಿ ವಕ್ತಾರ ಅಭಿಷೇಕ್ ಸಿಂಗ್ವಿ ತಿಳಿಸಿದ್ದಾರೆ. ಆಯೋಗವು ಈ ಬಗ್ಗೆ ತನ್ನ ಅಭಿಪ್ರಾಯವನ್ನು ಕೆಲವೇ ದಿನಗಳ ನೀಡುವುದೆಂದು ನಿರೀಕ್ಷಿಸಲಾಗಿದೆ.
|