ಚೆನ್ನೈನಲ್ಲಿ ಮೂರು ಜನರ ಮೇಲೆ ಕಾರನ್ನು ಹರಿಸಿ ಅವರ ಸಾವಿಗೆ ಕಾರಣನಾದ 16 ವರ್ಷ ವಯಸ್ಸಿನ ಬಾಲಕ ಅಚಲ್ ಖೇಮ್ಕಾ ಗುರುವಾರ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ. ಬುಧವಾರ ಅವನು ಪೊಲೀಸರಿಗೆ ಶರಣಾಗಿ ಅವನನ್ನು ಕೋರ್ಟ್‌ಗೆ ಹಾಜರುಪಡಿಸಿದ ಬಳಿಕ ಜಾಮೀನು ನೀಡಲಾಯಿತು.
ಪ್ರಮುಖ ಕೈಗಾರಿಕೋದ್ಯಮಿಯ ಪುತ್ರನಾದ ಈ ಬಾಲಕ ಡಿ.15ರಂದು ಅಪಘಾತ ಮಾಡಿ ಪರಾರಿಯಾದ ಬಳಿಕ ತಲೆತಪ್ಪಿಸಿಕೊಂಡಿದ್ದನು. ಖೇಮ್ಕಾ ಚಾಲನೆ ಮಾಡುತ್ತಿದ್ದ ಮರ್ಸಿಡೀಸ್ ಬೆಂಜ್ ಕಾರು ದ್ವಿಚಕ್ರ ವಾಹನವೊಂದಕ್ಕೆ ಡಿಕ್ಕಿ ಹೊಡೆದ ಬಳಿಕ ಕಲ್ಲುಹಾಸಿನ ಮೇಲೆ ತಾತ್ಕಾಲಿಕ ಡೇರೆ ಹಾಕಿಕೊಂಡಿದ್ದ ವ್ಯಕ್ತಿಗಳ ಮೇಲೆ ಹರಿದು ಮೂವರು ಸತ್ತಿದ್ದರು. ವಾಹನ ಚಾಲನೆ ಮಾಡಿರುವುದು .
ಇದಕ್ಕೆ ಮುಂಚೆ ಖೇಮ್ಕಾ ತಂದೆ ರಾಜ್‌ಕುಮಾರ್ ಖೇಮ್ಕಾ ತಮ್ಮ ಮಗನ ಪಾತ್ರವನ್ನು ಅಲ್ಲಗಳೆದು ಚಾಲಕನು ಕಾರನ್ನು ಚಲಾಯಿಸುತ್ತಿದ್ದನೆಂದು ಹೇಳಿದ್ದರು. ಆದರೆ ಈ ಕಥೆಯನ್ನು ಒಪ್ಪಿಕೊಳ್ಳದ ಪೊಲೀಸ್ ಅನನುಭವಿ ಕಾರ್ ಚಾಲನೆಗೆ ಸಾಕ್ಷಿಯಾಗಿದೆ ಎಂದು ಹೇಳಿದ್ದರು. ಅವರ ಅನುಮಾನಕ್ಕೆ ಪುಷ್ಠಿ ನೀಡುವಂತ ಸಾಕ್ಷ್ಯವು ಬಳಿಕ ಪೊಲೀಸರಿಗೆ ಸಿಕ್ಕಿತ್ತು.
|