ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಎಡಪಂಥೀಯ ಭಯೋತ್ಪಾದನೆ ವೈರಸ್
PTI
ಎಡಪಂಥೀಯ ಭಯೋತ್ಪಾದನೆ ಹೆಚ್ಚಳವನ್ನು ವೈರಸ್ ಎಂದು ಗುರುವಾರ ಬಣ್ಣಿಸಿದ ಪ್ರಧಾನಮಂತ್ರಿ ಮನಮೋಹನ ಸಿಂಗ್ ಅವರು, ಬೇಹುಗಾರಿಕೆ ಮತ್ತು ಪೊಲೀಸ್ ಯಂತ್ರಾಂಗವನ್ನು ಸುಧಾರಿಸುವುದು ಮತ್ತು ಈ ಸವಾಲುಗಳನ್ನು ನಿಭಾಯಿಸಲು ಕರ್ತವ್ಯನಿಷ್ಠ ಪಡೆಯನ್ನು ನಿಯೋಜಿಸುವ ಮೂಲಕ ತುರ್ತು ಕ್ರಮಗಳನ್ನು ಕೈಗೊಳ್ಳಬೇಕೆಂದು ತಿಳಿಸಿದ್ದಾರೆ.

ಆಂತರಿಕ ಭದ್ರತೆ ಕುರಿತ ಮುಖ್ಯಮಂತ್ರಿಗಳ ಸಮಾವೇಶ ಉದ್ಘಾಟಿಸಿ ಮಾತನಾಡುತ್ತಿದ್ದ ಸಿಂಗ್, ಭಯೋತ್ಪಾದನೆ ವಿರುದ್ಧ ಹೋರಾಟಕ್ಕೆ ಕೇಂದ್ರ ಮತ್ತು ರಾಜ್ಯಗಳ ನಡುವೆ ಸಮನ್ವಯತೆ ಸುಧಾರಿಸುವ ಅಗತ್ಯವನ್ನು ಪ್ರತಿಪಾದಿಸಿದರು.

ಅಂತಾರಾಜ್ಯ ಅಥವಾ ಅಂತಾರಾಷ್ಟ್ರೀಯ ಸಂಪರ್ಕವಿರುವ ಭಯೋತ್ಪಾದನೆ ಘಟನೆಗಳ ತನಿಖೆಗೆ ನಿಯೋಜಿತ ಕೇಂದ್ರ ಸಂಸ್ಥೆಗಳನ್ನು ಸ್ಥಾಪಿಸುವ ಪ್ರಾಯೋಗಿಕ ನಿಲುವನ್ನು ಅಳವಡಿಸಿಕೊಳ್ಳುವಂತೆ ರಾಜ್ಯಗಳಿಗೆ ಸಲಹೆ ಮಾಡಿದರು.

ಭಯೋತ್ಪಾದಕ ಗುಂಪುಗಳ ಹಿಂಸಾಚಾರ ಹೆಚ್ಚಳದ ಬಗ್ಗೆ ಗುಪ್ತಚರ ಸಂಸ್ಥೆಗಳು ಸುಳಿವು ನೀಡಿವೆ ಎಂದು ಮುಖ್ಯಮಂತ್ರಿಗಳಿಗೆ ತಿಳಿಸಿದ ಸಿಂಗ್, ಭಯೋತ್ಪಾದನೆಯ ಎಲ್ಲ ಅಂಶಗಳನ್ನು ಹತ್ತಿಕ್ಕುವ ಸರ್ಕಾರದ ದೃಢಸಂಕಲ್ಪವನ್ನು ಪುನರುಚ್ಚರಿಸಿದರು. ಎಡಪಂಥೀಯ ಉಗ್ರವಾದದ ಬಗ್ಗೆ ಮತ್ತು ನಕ್ಸಲೀಯರ ಉಪಟಳದ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ, ಎಡಪಂಥೀಯ ಉಗ್ರವಾದದ ವೈರಸ್ ನಾಶ ಮಾಡುವ ತನಕ ನಾವು ವಿಶ್ರಮಿಸುವುದಿಲ್ಲ ಎಂದು ನುಡಿದರು.
ಮತ್ತಷ್ಟು
ಕಾರನ್ನು ಹರಿಸಿದ ಬಾಲಕನಿಗೆ ಜಾಮೀನು
ತಮಿಳುನಾಡು:ಮಳೆಗೆ ಇನ್ನೂ 6 ಬಲಿ
"ಸಾವಿನ ವ್ಯಾಪಾರಿ"ಗೆ ಸೋನಿಯಾ ಸಮರ್ಥನೆ
ಇಂದು ಮುಖ್ಯಮಂತ್ರಿಗಳ ಸಮಾವೇಶ
ವಿದೇಶಿ ಮಹಿಳೆ ಮೇಲೆ ಅತ್ಯಾಚಾರ
11ನೇ ಯೋಜನೆ: ಮೋದಿ-ಪ್ರಧಾನಿ ವಾಕ್ಸಮರ