ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಅಮಿತಾಬ್‌ಗೆ ಮಾತೃ ವಿಯೋಗ
ಪ್ರಖ್ಯಾತ ಕವಿ ಹರಿವಂಶ್ ರಾಯ್ ಬಚ್ಚನ್ ಅವರ ಪತ್ನಿ ಮತ್ತು ಸೂಪರ್‌ಸ್ಟಾರ್ ಅಮಿತಾಬ್ ಬಚ್ಚನ್ ಅವರ ತಾಯಿ ತೇಜಿ ಬಚ್ಚನ್ ಅವರು ಶುಕ್ರವಾರ ಲೀಲಾವತಿ ಆಸ್ಪತ್ರೆ ಮತ್ತು ಸಂಶೋಧನೆ ಕೇಂದ್ರದಲ್ಲಿ ಕೊನೆಯುಸಿರೆಳೆದರು. ಅವರಿಗೆ 93 ವರ್ಷಗಳ ವಯಸ್ಸಾಗಿತ್ತು. ತೇಜಿ ಬಚ್ಚನ್ ಅವರು ಮಧ್ಯಾಹ್ನ 1.15ಕ್ಕೆ ಕಾಲವಶರಾದರು. ದೀರ್ಘಕಾಲದಿಂದ ವಿವಿಧ ಕಾಯಿಲೆಗಳಿಗೆ ತುತ್ತಾಗಿದ್ದ ಅವರು, ಒಂದು ವರ್ಷದಿಂದ ಆಸ್ಪತ್ರೆಗೆ ಸೇರಿದ್ದರು.

ಆದರೆ ಇದ್ದಕ್ಕಿದ್ದಂತೆ 24 ಗಂಟೆಗಳ ಕೆಳಗೆ ಅವರ ಸ್ಥಿತಿ ಗಂಭೀರವಾಗಿ ತೀವ್ರ ನಿಗಾ ಘಟಕ್ಕೆ ಸೇರಿಸಲಾಯಿತು. ತಾಯಿ ನಿಧನದ ಸುದ್ದಿ ಕೇಳಿದ ಕೂಡಲೇ ಬಚ್ಚನ್ ಕುಟುಂಬ ತಕ್ಷಣವೇ ಆಸ್ಪತ್ರೆಗೆ ಧಾವಿಸಿತು. ಅನಿಲ್ ಅಂಬಾನಿ, ಸುಬ್ರತೋ ರಾಯ್ ಮತ್ತು ಅವರ ಕುಟುಂಬವು ಆಸ್ಪತ್ರೆಗೆ ಧಾವಿಸಿ ಸಂತಾಪ ಸೂಚಿಸಿದರು.

ಬಚ್ಚನ್ ಕುಟುಂಬದವರು ಎಲ್ಲ ಕಾರ್ಯಕ್ರಮಗಳನ್ನು ಒಂದು ವಾರ ರದ್ದು ಮಾಡಿದರು. ಕೋಲ್ಕತಾಗೆ ತೆರಳಬೇಕಿದ್ದ ಐಶ್ವರ್ಯ ತಮ್ಮ ಪ್ರವಾಸವನ್ನು ರದ್ದು ಮಾಡಿದರು.
ತೇಜ್ ಬಚ್ಚನ್ ಒಳ್ಳೆಯ ಹಾಡುಗಾರ್ತಿ ಮತ್ತು ರಂಗನಟಿಯಾಗಿದ್ದರು.

ಅಮಿತಾಬ್ ಯಶಸ್ಸಿಗೆ ಅವರೇ ಸೂತ್ರಧಾರರೆಂದು ಹೇಳಲಾಗಿದೆ. ಹರಿವಂಶ ರಾಯ್ ಬಚ್ಚನ್ ಅವರ ಹಲವಾರು ಕೃತಿಗಳಿಗೆ ಅವರು ಸ್ಫೂರ್ತಿಯಾಗಿದ್ದರು.
ಮತ್ತಷ್ಟು
ತಸ್ಲೀಮಾ:ದೆಹಲಿಯಲ್ಲಿರುವಂತೆ ಕೇಂದ್ರದ ಸಲಹೆ
ಎಡಪಂಥೀಯ ಭಯೋತ್ಪಾದನೆ ವೈರಸ್
ಕಾರನ್ನು ಹರಿಸಿದ ಬಾಲಕನಿಗೆ ಜಾಮೀನು
ತಮಿಳುನಾಡು:ಮಳೆಗೆ ಇನ್ನೂ 6 ಬಲಿ
"ಸಾವಿನ ವ್ಯಾಪಾರಿ"ಗೆ ಸೋನಿಯಾ ಸಮರ್ಥನೆ
ಇಂದು ಮುಖ್ಯಮಂತ್ರಿಗಳ ಸಮಾವೇಶ