ಚತ್ತೀಸ್‌ಗಢದ ದಾಂತೆವಾಡ ಜಿಲ್ಲೆಯಿಂದ 12 ಪೊಲೀಸರು ಕಣ್ಮರೆಯಾದ ಘಟನೆಗೆ ಸಂಬಂಧಿಸಿದಂತೆ ಅವರನ್ನು ಮಾವೋವಾದಿ ನಕ್ಸಲೀಯರು ಅಪಹರಿಸಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ. ಭೀಕರ ಕದನದ ಬಳಿಕ 12 ಪೊಲೀಸರನ್ನು ನಕ್ಸಲರು ಅಪಹರಿಸಿರಬಹುದೆಂದು ಶಂಕಿಸುವುದಾಗಿ ಪೊಲೀಸ್ ಮೂಲಗಳು ಹೇಳಿವೆ.
ನಕ್ಸಲೀಯರ ಜತೆ ಭದ್ರತಾ ಪಡೆಗಳ ಗುಂಡಿನ ಚಕಮಕಿಯು ಗುರುವಾರ ನಡೆದಿರುವ ಸ್ಥಳಕ್ಕೆ ಪೊಲೀಸ್ ತಂಡವು ಭೇಟಿ ಕೊಟ್ಟಾಗ ಯಾರೇ ಪೊಲೀಸರಾಗಲೀ ಅಥವಾ ರಕ್ತದ ಕಲೆಗಳಾಗಲೀ ಇರಲಿಲ್ಲ. ಇದರಿಂದ ಅವರು ಗಾಯಗೊಂಡಿಲ್ಲ ಮತ್ತು ನಕ್ಸಲೀಯರು ಅವರನ್ನು ಒತ್ತೆಯಾಳಾಗಿ ಇರಿಸಿರಬಹುದು ಎಂದು ಮೂಲಗಳು ಹೇಳಿವೆ.
ನಾಪತ್ತೆಯಾದ ಪೊಲೀಸರ ಸುಳಿವಿಗಾಗಿ ವಿವಿಧ ಕಡೆಗಳಿಂದ ಪೊಲೀಸ್ ತಂಡ ಶೋಧ ಕಾರ್ಯಾಚರಣೆ ಕೈಗೊಂಡಿದೆ. ದಂತೆವಾಡಾ ಜಿಲ್ಲೆಯ ಗೋಲಪಲ್ಲಿ ಅರಣ್ಯಪ್ರದೇಶದಲ್ಲಿ ನಕ್ಸಲರ ಜತೆ ಭೀಕರ ಕದನ ನಡೆಸಿದ ಬಳಿಕ ಅವರು ಕಣ್ಮರೆಯಾಗಿದ್ದಾರೆಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದರು.
|