ವಿಶ್ವಾದ್ಯಂತ ಮುಸ್ಲಿಮರು ಶುಕ್ರವಾರ ಈದ್-ಅಲ್-ಅಧಾ ಅಥವಾ ತ್ಯಾಗದ ಹಬ್ಬವನ್ನು ಆಚರಿಸಿದರು.ದೇವರ ಆದೇಶದ ಮೇಲೆ ತಮ್ಮ ಪುತ್ರನನ್ನೇ ಬಲಿಕೊಡಲು ಇಚ್ಛಿಸಿದ ಪ್ರವಾದಿ ಮೊಹಮದ್ ಸ್ಮರಣಾರ್ಥ ಈ ಉತ್ಸವವನ್ನು ಆಚರಿಸಲಾಗುತ್ತದೆ.
ಸಾವಿರಾರು ಜನರು ಮಸೀದಿಗಳಲ್ಲಿ ನೆರೆದು ಪ್ರಾರ್ಥನೆ ಸಲ್ಲಿಸಿದರು. ಈದ್-ಅಲ್-ಅಧಾ ಅಥವಾ ಬಕ್ರೀದ್ ವಾರ್ಷಿಕ ಹಜ್ ಯಾತ್ರೆ ಮುಕ್ತಾಯದ ಸಂಕೇತವಾಗಿದೆ. ಈ ಸಂದರ್ಭದಲ್ಲಿ ರಾಷ್ಟ್ರದ ಜನತೆಗೆ ಅಭಿನಂದನೆ ಸಲ್ಲಿಸಿದ ರಾಷ್ಟ್ರಪತಿ ಪ್ರತಿಭಾಪಾಟೀಲ್ ರಾಷ್ಟ್ರದ ಪ್ರಗತಿ ಮತ್ತು ಸಮೃದ್ಧಿಗೆ ಶ್ರಮಿಸುವಂತೆ ಕರೆ ನೀಡಿದರು.
ಮಾನವ ಜನಾಂಗದ ಏಳಿಗೆ ಮತ್ತು ಕರುಣೆಗಾಗಿ ಉತ್ಸವವನ್ನು ಆಚರಿಸುವಂತೆ ಉಪಾಧ್ಯಕ್ಷ ಹಮೀದ್ ಅನ್ಸಾರಿ ಜನತೆಗೆ ಕರೆ ನೀಡಿದರು. ಬಕ್ರೀದ್ ಉತ್ಸವವು ರಾಷ್ಟ್ರದ ಸಾಂಸ್ಕೃತಿಕ ಸಂಬಂಧವನ್ನು ಗಟ್ಟಿಗೊಳಿಸಿ ಸಂತೋಷ ಮತ್ತು ಸಮೃದ್ಧಿ ತರಲೆಂದು ಹಾರೈಸಿದರು.
|