ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ನಕಲಿ ಅಪಹರಣದ ದೂರು
ಉತ್ತರಪ್ರದೇಶದ ಪ್ರಮುಖ ಕೈಗಾರಿಕೋದ್ಯಮಿಯ ಪುತ್ರನೊಬ್ಬ ತನ್ನ ಗೆಳತಿಗೆ ಐಷಾರಾಮಿ ಕಾರು ಖರೀದಿಸಲು ಮತ್ತು ಆಕೆಯ ಜತೆಗೆ ಗೋವಾಗೆ ಪ್ರವಾಸ ಹೋಗಲು ತನ್ನನ್ನು ಅಪಹರಣ ಮಾಡಲಾಗಿದೆಯೆಂದು ವದಂತಿ ಹಬ್ಬಿಸಿದ ಘಟನೆ ನಡೆದಿದೆ. ಉತ್ತರಪ್ರದೇಶ ಮೂಲದ ಕೈಗಾರಿಕೋದ್ಯಮಿಯ ಪುತ್ರ ಆನಂದ ತ್ಯಾಗಿ ನವದೆಹಲಿಯಲ್ಲಿ ವ್ಯವಹಾರದ ಸಲುವಾಗಿ ಪಾವತಿಯಾದ 20 ಲಕ್ಷ ರೂ. ಹಣವನ್ನು ಸಂಗ್ರಹಿಸಿ, 10 ಲಕ್ಷ ರೂ. ಹಣವನ್ನು ತನ್ನ ಗೆಳತಿಗೆ ಐಷಾರಾಮಿ ಕಾರನ್ನು ಉಡುಗೊರೆಯಾಗಿ ನೀಡಲು ಖರೀದಿಸಿದ.

ಬಳಿಕ ತನ್ನ ಸ್ನೇಹಿತನೊಬ್ಬನ ಮೂಲಕ ತನ್ನಅಪಹರಣವಾಗಿದ್ದು, 20 ಲಕ್ಷ ರೂ. ಲೂಟಿ ಮಾಡಲಾಗಿದೆಯೆಂದು ಪೊಲೀಸರಿಗೆ ಮಾಹಿತಿ ಮುಟ್ಟಿಸಿದನೆಂದು ಪೊಲೀಸರು ತಿಳಿಸಿದ್ದಾರೆ. ತನ್ನ ಸಫಾರಿ ಕಾರನ್ನು ಆಳವಾದ ನೀರಿಲ್ಲದ ಕೊಳದಲ್ಲಿ ಬಿಟ್ಟು ಅಪಹರಣದ ಕಥೆಯನ್ನು ಪೊಲೀಸರು ನಂಬುವಂತೆ ಮಾಡಲು ಯತ್ನಿಸಿದ.

ಆದರೆ ಲೋನಿ ಪ್ರದೇಶದಿಂದ ಪೊಲೀಸರು ಅವನನ್ನು ಗುರುವಾರ ರಾತ್ರಿ ಬಂಧಿಸಿ, ಅವನ ವಶದಲ್ಲಿದ್ದ 9 ಲಕ್ಷ ರೂ. ನಗದು ಮತ್ತು ತನ್ನ ಗೆಳತಿಗೆ ಖರೀದಿಸಿದ ಕಾರನ್ನು ಸ್ವಾಧೀನಕ್ಕೆ ತೆಗೆದುಕೊಂಡರು.

ತನಿಖೆಯ ಸಂದರ್ಭದಲ್ಲಿ ತಾನು ಕಾರಿನಲ್ಲಿ ಗೆಳತಿಯ ಜತೆ ಗೋವಾಕ್ಕೆ ಹೋಗಲು ಇಚ್ಛಿಸಿದ್ದಾಗಿ ಬಹಿರಂಗಪಡಿಸಿದ್ದಾನೆ. ತ್ಯಾಗಿ ಅವರನ್ನು ಜೈಲಿಗೆ ತಳ್ಳಲಾಗಿದ್ದು, ಅವನ ಸ್ನೇಹಿತನಿನ್ನೂ ಪತ್ತೆಯಾಗಿಲ್ಲ.
ಮತ್ತಷ್ಟು
ಬಕ್ರೀದ್ ಪ್ರಯುಕ್ತ ಶುಭ ಹಾರೈಕೆ
12 ಪೊಲೀಸರ ಅಪಹರಣ ಶಂಕೆ
ಪೊಲೀಸರ ದಕ್ಷತೆ ಸುಧಾರಣೆಗೆ ಕೈಪಿಡಿ
ಅಮಿತಾಬ್‌ಗೆ ಮಾತೃ ವಿಯೋಗ
ತಸ್ಲೀಮಾ:ದೆಹಲಿಯಲ್ಲಿರುವಂತೆ ಕೇಂದ್ರದ ಸಲಹೆ
ಎಡಪಂಥೀಯ ಭಯೋತ್ಪಾದನೆ ವೈರಸ್