ಗುಜರಾತಿನ ಭಿನ್ನಮತೀಯರ ವಿರುದ್ಧ ಚಾಟಿ ಬೀಸಿರುವ ಕೇಂದ್ರ ನಾಯಕತ್ವ, ಮಾಜಿ ಮುಖ್ಯಮಂತ್ರಿ ಕೇಶುಭಾಯಿ ಪಟೇಲ್ ಮತ್ತು ಬಿಜೆಪಿಯ ರಾಜ್ಯಘಟಕದ ಮಾಜಿ ಅಧ್ಯಕ್ಷ ಕಾಶಿರಾಂ ರಾಣಾ ಅವರಿಗೆ ಕಾರಣ ಕೇಳಿ ನೋಟೀಸ್‌ಗಳನ್ನು ನೀಡಿದೆ ಮತ್ತು ಸೋಮಭಾಯಿ ಪಟೇಲ್ ಮತ್ತು ವಲ್ಲಭ್ ಭಾಯಿ ಕಟೇರಿಯ(ಇಬ್ಬರೂ ಸಂಸದರು) ಅವರನ್ನು ಪಕ್ಷ ವಿರೋಧಿ ಚಟುವಟಿಕೆಯ ಆರೋಪದ ಮೇಲೆ ಅಮಾನತುಗೊಳಿಸಿದೆ.
ತಮ್ಮ ನಿಲುವನ್ನು ಒಂದು ವಾರದೊಳಗೆ ಸ್ಪಷ್ಟಪಡಿಸುವಂತೆ ಬಿಜೆಪಿಯ ಅಧ್ಯಕ್ಷ ರಾಜನಾಥ್ ಸಿಂಗ್ ಅವರು ತಮ್ಮ ಆದೇಶದಲ್ಲಿ ತಿಳಿಸಿದ್ದಾರೆ.ವಿಧಾನಸಭೆ ಚುನಾವಣೆಯಲ್ಲಿ ಅವರು ವಿವಿಧ ಸಾರ್ವಜನಿಕ ಹೇಳಿಕೆಗಳ ಮೂಲಕ ಪಕ್ಷದ ಭವಿಷ್ಯಕ್ಕೆ ಹಾನಿ ಉಂಟುಮಾಡಿರುವುದು ಸುದ್ದಿಪತ್ರಿಕೆ ಮತ್ತು ಟಿವಿ ಚಾನೆಲ್‌ಗಳಿಂದ ರುಜುವಾತಾಗಿದೆ.
ಅವರ ನಡವಳಿಕೆಯು ಪಕ್ಷವಿರೋಧಿ ಚಟುವಟಿಕೆಯಾಗುತ್ತದೆ ಮತ್ತು ಪಕ್ಷದ ಶಿಸ್ತಿನ ಉಲ್ಲಂಘನೆಯಾಗುತ್ತದೆ ಎಂದು ಸಿಂಗ್ ಹೇಳಿದ್ದಾರೆ. ಡಿ.23ರಂದು ಮತಗಳ ಎಣಿಕೆಗೆ ಕೇವಲ ಎರಡು ದಿನಗಳು ಬಾಕಿಇರುವಂತೆಯೇ ಈ ಶಿಸ್ತಿನ ಕ್ರಮ ಕೈಗೊಳ್ಳಲಾಗಿದೆ.
|