ಭಾರತೀಯ ಮೂಲದ ವೈದ್ಯ ಹನೀಫ್‌ಗೆ ಕೆಲಸದ ವೀಸಾವನ್ನು ಹಿಂತಿರುಗಿ ನೀಡಲು ಆಸ್ಟ್ರೇಲಿಯದ ಫೆಡರಲ್ ಕೋರ್ಟ್ ನಿರ್ಧರಿಸಿದ್ದು, ಹನೀಫ್ ಆಸ್ಚ್ರೇಲಿಯಕ್ಕೆ ಹೋಗಲು ಈಗ ಸ್ವತಂತ್ರರಾಗಿದ್ದಾರೆ.
ಆಸ್ಟ್ರೇಲಿಯಕ್ಕೆ ಹಿಂತಿರುಗುವುದು ಹನೀಫ್ ಇಚ್ಛೆಯಾಗಿತ್ತು, ಆದರೆ ಹನೀಫ್ ಪುನಃ ಆಸ್ಟ್ರೇಲಿಯಕ್ಕೆ ತೆರಳುವುದು ಅವರ ಕುಟುಂಬಕ್ಕೆ ಸಮ್ಮತವಲ್ಲವೆಂದು ಹೇಳಲಾಗಿದೆ. ಆದರೆ ಅವರನ್ನು ಬಂಧಿಸಿದಾಗ ಅವರ ಪತ್ನಿ ಅನುಭವಿಸಿದ ಯಾತನೆಯಂಥ ಪರಿಸ್ಥಿತಿಯನ್ನು ಪುನಃ ತಂದುಕೊಳ್ಳುವುದು ಅವರಿಗೆ ಇಷ್ಟವಿಲ್ಲ ಎಂದು ಹನೀಫ್ ವಕೀಲ ಪೀಟರ್ ರೂಸೊ ಹೇಳಿದ್ದಾರೆ.
ಕಳೆದ ಜುಲೈ 2ರಂದು ಹನೀಫ್ ಅವರನ್ನು ಬ್ರಿಸ್ಬೇನ್ ವಿಮಾನನಿಲ್ದಾಣದಲ್ಲಿ ಭಯೋತ್ಪಾದಕರಿಗೆ ನೆರವು ನೀಡಿದ ಆರೋಪದ ಮೇಲೆ ಬಂಧಿಸಿ ಅವರ ವೀಸಾ ರದ್ದುಮಾಡಲಾಗಿತ್ತು, ಆದರೆ ಜುಲೈ 20ರಂದು ಹನೀಫ್ ವಿರುದ್ಧ ಸಾಕ್ಷ್ಯಾಧಾರ ರುಜುವಾತಾಗದ ಹಿನ್ನೆಲೆಯಲ್ಲಿ ಅವರನ್ನು ಬಿಡುಗಡೆ ಮಾಡಲಾಗಿತ್ತು.
|