ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಗುಜರಾತ್ ಚುನಾವಣೆ-ನೀತಿ ಸಂಹಿತೆ: ಇಂದು ನಿರ್ಧಾರ
ಗುಜರಾತ್ ವಿಧಾನಸಭಾ ಚುನಾವಣಾ ಪ್ರಚಾರದಲ್ಲಿ ನೀತಿ ಸಂಹಿತೆ ಉಲ್ಲಂಘಿಸಿದ ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಮತ್ತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಅವರ ವಿರುದ್ಧ ದಾಖಲಾದ ದೂರುಗಳ ಬಗ್ಗೆ ಚುನಾವಣಾ ಆಯೋಗ ಶನಿವಾರ ನಿರ್ಧಾರ ಕೈಗೊಳ್ಳಲಿದೆ.


ಸೊಹ್ರಾಬುದ್ದೀನ್ ಅವರ ಎನ್‌ಕೌಂಟರ್ ಪ್ರಕರಣವನ್ನು ತಮ್ಮ ಚುನಾವಣಾ ಭಾಷಣದಲ್ಲಿ ಸಮರ್ಥಿಸಿಕೊಂಡಿದ್ದ ಮೋದಿಗೆ ಮತ್ತು ಮೋದಿಯನ್ನು ಸಾವಿನ ವ್ಯಾಪಾರಿ ಎಂದು ಟೀಕಿಸಿದ್ದ ಸೋನಿಯಾ ಗಾಂಧಿ ಅವರಿಗೆ ಚುನಾವಣಾ ಆಯೋಗವು ನೋಟೀಸು ಜಾರಿ ಮಾಡಿತ್ತು.


ಚುನಾವಣಾ ಪ್ರಚಾರದಲ್ಲಿ ಮೊದಲು ತನ್ನನ್ನು ಸಾವಿನ ವ್ಯಾಪಾರಿ ಎಂದು ಸೋನಿಯಾ ಗಾಂಧಿ ಅವರು ನೀಡಿದ್ದ ಹೇಳಿಕೆಗೆ ಪ್ರತಿಕ್ರಿಯಿಸಿರುವುದಾಗಿ ಮೋದಿ ಆಯೋಗಕ್ಕೆ ನೀಡಿದ ಲಿಖಿತ ಉತ್ತರದಲ್ಲಿ ತಿಳಿಸಿದ್ದಾರೆ.

ಗುಜರಾತಿನಲ್ಲಿ ನಡೆಸಿದ ಹಿಂಸಾಕಾಂಡಕ್ಕೆ ಸಂಬಂಧಿಸಿದಂತೆ ತಾನು ಸಾವಿನ ವ್ಯಾಪಾರಿ ಎಂಬ ಹೇಳಿಕೆ ನೀಡಿರುವುದಾಗಿ ಸೋನಿಯಾ ಗಾಂಧಿ ಆಯೋಗಕ್ಕೆ ಉತ್ತರಿಸಿದ್ದಾರೆ.
ಮತ್ತಷ್ಟು
ಹನೀಫ್ ಆಸ್ಟ್ರೇಲಿಯಕ್ಕೆ ಹೋಗಲು ಸ್ವತಂತ್ರ
ಗುಜರಾತ್: ಭಿನ್ನಮತೀಯರಿಗೆ ನೋಟೀಸ್
ನಕಲಿ ಅಪಹರಣದ ದೂರು
ಬಕ್ರೀದ್ ಪ್ರಯುಕ್ತ ಶುಭ ಹಾರೈಕೆ
12 ಪೊಲೀಸರ ಅಪಹರಣ ಶಂಕೆ
ಪೊಲೀಸರ ದಕ್ಷತೆ ಸುಧಾರಣೆಗೆ ಕೈಪಿಡಿ