ಮುಖ್ಯ ಪುಟ  ಸುದ್ದಿ ಜಗತ್ತು > ಸುದ್ದಿಗಳು > ರಾಷ್ಟ್ರೀಯ
ಸಲಹೆ/ಪ್ರತಿಕ್ರಿಯೆಮಿತ್ರನಿಗೆ ಕಳುಹಿಸಿಈ ಪುಟ ಮುದ್ರಿಸಿ
 
ಸರಣಿ ಸ್ಫೋಟ: ಇಬ್ಬರು ಉಗ್ರಗಾಮಿಗಳ ಬಂಧನ
ಉತ್ತರಪ್ರದೇಶದಲ್ಲಿ ಕಳೆದ ನವೆಂಬರ್‌ನಲ್ಲಿ ಸಂಭವಿಸಿದ ಸರಣಿ ಸ್ಫೋಟವನ್ನು ಭೇದಿಸಿರುವ ವಿಶೇಷ ಕಾರ್ಯಪಡೆ ಪೊಲೀಸರು ಶನಿವಾರ ಬಾರ್ಬಾಂಕಿ ರೈಲ್ವೆ ನಿಲ್ದಾಣದ ಬಳಿ ಇಬ್ಬರು ಹೂಜಿ ಉಗ್ರಗಾಮಿಗಳನ್ನು ಬಂಧಿಸಿದ್ದಾರೆ. ಉಗ್ರಗಾಮಿಗಳಿಂದ 25 ಕೇಜಿ ಆರ್‌ಡಿಎಕ್ಸ್, ಸ್ಫೋಟಕಗಳು, ಸಿಡಿಮದ್ದುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಬಂಧಿತರನ್ನು ತಾರಿಖ್ ಮತ್ತು ಖಲೀದ್ ಎಂದು ಗುರುತಿಸಿರುವುದಾಗಿ ಪೊಲೀಸರು ಹೇಳಿದ್ದಾರೆ. ತಾರಿಖ್ ಶಸ್ತ್ರಾಸ್ತ್ರ ತಜ್ಞನಾಗಿದ್ದರೆ ಖಲೀದ್ ಸ್ಫೋಟಕಗಳನ್ನು ನಿಭಾಯಿಸುತ್ತಿದ್ದನೆಂದು ಹೇಳಲಾಗಿದೆ. ರಾಜ್ಯದ ಮೂರು ಜಿಲ್ಲಾ ಕೋರ್ಟ್‌ಗಳಲ್ಲಿ ಸಂಭವಿಸಿದ ಸರಣಿ ಸ್ಫೋಟಗಳಿಗೆ ಬಂಧಿತ ಉಗ್ರರು ಸೂತ್ರಧಾರಿಗಳೆಂದು ಗುಪ್ತಚರ ಮೂಲಗಳು ತಿಳಿಸಿವೆ.

ಫೈಜಾಬಾದ್ ಮತ್ತು ಲಕ್ನೊ ಕೋರ್ಟ್ ಸ್ಫೋಟಗಳಲ್ಲಿ ಭಾಗಿಯಾದ ಬಗ್ಗೆ ಇಬ್ಬರೂ ಬಂಧಿತ ಉಗ್ರಗಾಮಿಗಳು ತಪ್ಪೊಪ್ಪಿಕೊಂಡಿದ್ದಾರೆಂದು ವರದಿಯಾಗಿದೆ.ಲಕ್ನೋ, ಫೈಜಾಬಾದ್ ಮತ್ತು ವಾರಣಾಸಿಯಲ್ಲಿ ಸಂಭವಿಸಿದ ಮೂರು ಸ್ಫೋಟಗಳಲ್ಲಿ 13 ಜನರು ಸತ್ತಿದ್ದರು ಮತ್ತು 70ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು.

ಕಡಿಮೆ ತೀವ್ರತೆಯ ಒಟ್ಟು ಆರು ಬಾಂಬ್‌ಗಳನ್ನು ಸೈಕಲ್‌ಗಳಲ್ಲಿ ಅಡಗಿಸಿಡುವ ಮೂಲಕ ಸ್ಫೋಟಗಳು ಉಂಟಾಗಿದೆಯೆಂದು ಹೇಳಲಾಗಿದೆ.
ಮತ್ತಷ್ಟು
ಸರ್ಕಾರದ ವಿರುದ್ಧ ಕಿಡಿಕಾರಿದ ನಾರಾಯಣ ರಾಣೆ
ವಿದೇಶಿ ಪೌರರ ನೀತಿ ತಸ್ಲೀಮಾಗೂ ಅನ್ವಯ
ಗುಜರಾತ್ ಚುನಾವಣೆ-ನೀತಿ ಸಂಹಿತೆ: ಇಂದು ನಿರ್ಧಾರ
ಹನೀಫ್ ಆಸ್ಟ್ರೇಲಿಯಕ್ಕೆ ಹೋಗಲು ಸ್ವತಂತ್ರ
ಗುಜರಾತ್: ಭಿನ್ನಮತೀಯರಿಗೆ ನೋಟೀಸ್
ನಕಲಿ ಅಪಹರಣದ ದೂರು