ಸುಮಾರು ಒಂದು ತಿಂಗಳಿನಿಂದ ದೆಹಲಿಯಲ್ಲಿ ಸರ್ಕಾರದ ಸುರಕ್ಷತೆಯಲ್ಲಿ ಅಜ್ಞಾತ ಸ್ಥಳದಲ್ಲಿರುವ ಬಾಂಗ್ಲಾದೇಶದ ಲೇಖಕಿ ತಸ್ಲೀಮಾ ನಸ್ರೀನ್ ತಮ್ಮ ಮುಂದಿನ ಕೃತಿಯನ್ನು ತಡೆಹಿಡಿಯಲು ನಿರ್ಧರಿಸಿದ್ದಾರೆ. ಅವರ ಆತ್ಮಚರಿತ್ರೆಯ 6ನೇ ಭಾಗದ ಪ್ರಕಟಣೆಯನ್ನು ರದ್ದು ಮಾಡುವಂತೆ ಲೇಖಕಿ ಪ್ರಕಾಶಕರಿಗೆ ಆದೇಶ ನೀಡಿದ್ದಾರೆ. ಪುಸ್ತಕ ಜನವರಿಯಲ್ಲಿ ಕೋಲ್ಕತಾ ಪುಸ್ತಕ ಮೇಳದಲ್ಲಿ ಬಿಡುಗಡೆಯಾಗಬೇಕಿತ್ತು.
ಆದರೆ ಲೇಖನದ ಮೇಲೆ ಗಮನಹರಿಸಲು ಕಷ್ಟವಾಗುತ್ತಿರುವುದರಿಂದ ಗಡುವಿನೊಳಗೆ ಪುಸ್ತಕ ಬಿಡುಗಡೆ ಸಾಧ್ಯವಾಗುತ್ತಿಲ್ಲ ಎಂದು ತಸ್ಲೀಮಾ ಹೇಳಿದ್ದರು. ಕೇಂದ್ರ ಸರ್ಕಾರ ತಸ್ಲೀಮಾಗೆ ಗಡುವು ನೀಡಿರುವ ವಿರುದ್ಧ ಕೋಲ್ಕತಾದಲ್ಲಿ ತಸ್ಲೀಮಾ ಬೆಂಬಲಿಗರು ರಾಲಿ ನಡೆಸಲು ತೀರ್ಮಾನಿಸಿದ್ದಾರೆ.
ರಾಷ್ಟ್ರದ ರಾಜಧಾನಿಯಲ್ಲಿ ಬಿಗಿ ಭದ್ರತೆಯಲ್ಲಿ ಇರುವುದಾರೆ ಇರಿ, ಇಲ್ಲದಿದ್ದರೆ ದೇಶ ಬಿಟ್ಟು ಹೋಗಿ ಎಂದು ಸರ್ಕಾರ ತಸ್ಲೀಮಾಗೆ ತಿಳಿಸಿದ ಬಳಿಕ ಮನಸ್ಸು ಬದಲಾಯಿಸುವಂತೆ ಅವರು ಸರ್ಕಾರಕ್ಕೆ ಸೂಚಿಸಿದ್ದರು.
ತಮ್ಮ ಕೃತಿ ದ್ವಿಕಾಂಡಿತೊದಿಂದ ಆಕ್ಷೇಪಾರ್ಹ ಭಾಗಗಳನ್ನು ತೆಗೆಯುವಂತೆ ತಸ್ಲೀಮಾ ಪ್ರಕಾಶಕರಿಗೆ ಆದೇಶ ನೀಡಿದ ಬಳಿಕ ಅವರ ಕೃತಿಯ ಮಾರಾಟದಲ್ಲಿ ಹೆಚ್ಚಳವಾಗಿದ್ದು, ಒಂದು ತಿಂಗಳಲ್ಲೇ 5000 ಪ್ರತಿಗಳು ಮಾರಾಟವಾಗಿವೆ.
ಕೇಂದ್ರ ಸರ್ಕಾರದ ಆದೇಶದ ಹಿನ್ನೆಲೆಯಲ್ಲಿ ತಸ್ಲೀಮಾ ಪ್ರಕಾಶಕರು ಮತ್ತು ಪುಸ್ತಕ ಮಾರಾಟಗಾರರ ಗಿಲ್ಡ್ ಗಾಬರಿಗೊಂಡಿದ್ದು, ಕೋಲ್ಕತಾ ಪುಸ್ತಕ ಮೇಳದಲ್ಲಿ ಅವರ ಕೃತಿಗಳನ್ನು ಪ್ರದರ್ಶಿಸಬೇಕೇ, ಬೇಡವೇ ಎನ್ನುವ ಗೊಂದಲದಲ್ಲಿ ಮುಳುಗಿದ್ದಾರೆ. ಆದಾಗ್ಯೂ, ಕೋಲ್ಕತ್ತ ಪುಸ್ತಕ ಮೇಳವು ಅವರ ಪದ್ಯಗಳು ಮತ್ತು ಹಿಂದಿನ ಕೆಲವು ಪುಸ್ತಕಗಳು ಮಾತ್ರ ಗೋಚರಿಸಲಿವೆ.
|